Home / ಸುದ್ದಿ / ರಾಜ್ಯ / ಆಕೆಯ ಗರ್ಭದಲ್ಲಿತ್ತು 99… ಆದ್ರೂ ಆಕೆ ಬದುಕಿದ್ದು ಹೇಗೆ…??

ಆಕೆಯ ಗರ್ಭದಲ್ಲಿತ್ತು 99… ಆದ್ರೂ ಆಕೆ ಬದುಕಿದ್ದು ಹೇಗೆ…??

ತಾಯಿ ಒಂಬತ್ತು ತಿಂಗಳು ಗರ್ಭದಲ್ಲಿ ಮಗುವನ್ನು ಸಾಕಿ ತಾನು ಸತ್ತು ಮತ್ತೆ ಬದುಕಿ ಮಗುವಿನ ಜನ್ಮ ನಡುತ್ತಾಳೆ. ಇಂತಹ ತಾಯಿಯ ಗರ್ಭದಲ್ಲಿ ಕೇವಲ ಮಕ್ಕಳು ಮಾತ್ರವಲ್ಲ, 99 ಕಲ್ಲುಗಳಿದ್ದು, ಅಚ್ಚರಿ ಮೂಡಿಸಿದೆ. ಸಾವು ಬದುಕಿನ ನಡೆವೆ ಹೋರಾಟ ನಡೆಸುತ್ತಿದ್ದಳು. ಆಕೆಗೆ ವೈದ್ಯರು ಕಷ್ಟಪಟ್ಟು ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ 99 ಕಲ್ಲು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ನಿವಾಸಿ ಸಲ್ಮಾ (45) ಎಂಬ ಮಹಿಳೆ ಶಸ್ತ್ರ ಚಿಕಿತ್ಸೆಗೊಳಗಾದವರು. 6 ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೊಟ್ಟೆ ನೋವಿನ ಕಾರಣ ಸ್ಕ್ಯಾನ್ ಮಾಡಿದಾಗ ಪಿತ್ತಜಕಾಂಗದಲ್ಲಿ ಕಲ್ಲುಗಳಿರುವುದು ಪತ್ತೆಯಾಗಿದೆ. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದಾಗ, ಹೊಟ್ಟೆಯಲ್ಲಿ 99 ಕಲ್ಲುಗಳು ಪತ್ತೆಯಾಗಿವೆ.

ಸಲ್ಮಾ ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಹೊಟ್ಟೆಯಲ್ಲಿರುವ ಕಲ್ಲುಗಳನ್ನ ಕಂಡ ವೈದ್ಯರು ಕೂಡ ಶಾಕ್ ಆಗಿದ್ರು. ಸಲ್ಮಾಗೆ ಸಕ್ಕರೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇದ್ದು, ಆಪರೇಷನ್ ಮಾಡುವುದು ವೈದ್ಯರಿಗೆ ಸಾವಾಲು ಆಗಿದ್ರು ಕೂಡ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 99 ಕಲ್ಲುಗಳನ್ನ ಹೊರ ತೆಗೆದು ಸಲ್ಮಾಳ ಬಾಳಿಗೆ ಬೆಳಕಾಗಿದ್ದಾರೆ.

About flashnewskannada

Check Also

ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ …

Leave a Reply

Your email address will not be published. Required fields are marked *