Home / ಸುದ್ದಿ / ಜಿಲ್ಲೆ / ಈ ಮಗುವಿನ ಸಾವು ಕೇಳಿದ್ರೆ ನೀವು ಬೆಚ್ಚಿಬೀಳ್ತಿರಿ….!!

ಈ ಮಗುವಿನ ಸಾವು ಕೇಳಿದ್ರೆ ನೀವು ಬೆಚ್ಚಿಬೀಳ್ತಿರಿ….!!

ಚಿಕ್ಕಮಗಳೂರು : ಮನುಷ್ಯನಿಗೆ ಸಾವು ಎಲ್ಲಿ, ಹೇಗೆ ಸಂಭವಿಸತ್ತೆ ಅನ್ನೋದು ಆ ಯಮನಿಗೆ ಬಿಟ್ರೆ ಬೇರ್ಯಾರಿಗೂ ಗೊತ್ತಿಲ್ಲ ಅನ್ಸತ್ತೆ.. ಅಪಘಾತದಲ್ಲೋ, ನೀರಿನಲ್ಲಿ ಮುಳುಗಿಯೋ ಸತ್ತರೆ ಏನು ಅನ್ನಿಸೋದಿಲ್ಲ. ಆದರೆ, ಇಲ್ಲೊಂದು ಮಗು ಸಾವನ್ನಪ್ಪಿರುವ ಸುದ್ದಿ ಓದಿದ್ರೆ ನೀವು ಒಮ್ಮೆ ಶಾಕ್ ಆಗ್ತಿರಿ…

ಹೌದು, ಮಕ್ಕಳು ಮನೆಲೀ ಆಟವಾಡುವಾಗ ಎಷ್ಟೇ ಹುಷಾರ್ ಇದ್ರೂ ಒಂದಲ್ಲೊಂದು ಅನಾಹುತ ಆಗ್ತಾನೆ ಇರ್ತಾವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ತಿಂಗಳ ಹಿಂದೆ ಮಗುವೊಂದು ಮೊಬೈಲ್ ಚಾರ್ಚಜ್ ಬಾಯಲ್ಲಿ ಇಟ್ಕೊಂಡು ವಿದ್ಯುತ್ ಶಾಕ್ ನಿಂದ ಅಸುನೀಗಿತ್ತು. ಆದ್ರೆ, ಈ ಮಗು ತಿಂಡಿ ತಿಂದು ಅಸುನೀಗಿದೆ ಅಂದ್ರೆ ನೀವು ನಂಬ್ತೀರಾ….


ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸಮೀಪದ ಶಿರಗುಂದದ ದುರ್ಗಾ ಪ್ರಸಾದ್ ಅವರ ಪುತ್ರ ಅನೀಶ್ (3) ಮನೆಯಲ್ಲಿ ಅವಲಕ್ಕಿ ತಿನ್ನುವಾಗ ಗಂಟಲಿನಲ್ಲಿ ಸಿಲುಕಿಕೊಂಡು ಮೃತಪಟ್ಟಿದೆ.
ಅವಲಕ್ಕಿ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ಪಾಲಕರು ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಚಿಕಿತ್ಸೆ ಸಾಧ್ಯವಾಗದ ಪರಿಣಾಮ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಕೊನೆಯುಸಿರೆಳೆದಿದೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *