Home / ಸುದ್ದಿ / ಜಿಲ್ಲೆ / ಬಿಜೆಪಿ ಚಾಣಕ್ಯ ಅಮಿತ್ ಷಾ 26, 27 ಎರಡು ದಿನ ರಾಜ್ಯ ಪ್ರವಾಸ, ಎಲ್ಲಿ, ಏನು ಇಲ್ಲಿದೆ ನೋಡಿ…!!

ಬಿಜೆಪಿ ಚಾಣಕ್ಯ ಅಮಿತ್ ಷಾ 26, 27 ಎರಡು ದಿನ ರಾಜ್ಯ ಪ್ರವಾಸ, ಎಲ್ಲಿ, ಏನು ಇಲ್ಲಿದೆ ನೋಡಿ…!!

ಬಿಜೆಪಿ ಚಾಣಕ್ಯ ಅಮಿತ್ ಷಾ ಮಾರ್ಚ್ 26, 27 ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಹಳೇ ಮೈಸೂರು ಪ್ರಾಂತ್ಯ, ಉತ್ತರ ಕರ್ನಾಟಕ, ದಕ್ಷಿಣ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದ ಅಮಿತ್ ಷಾ ಈ ಬಾರಿ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ವಿವಿಧ ಮಠಾಧೀಶರನ್ನ ಭೇಟಿಯಾಗಲಿದ್ದಾರೆ.

26 ರಂದು ಬೆಳಗ್ಗೆ 9.40 ಕ್ಕೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. 11 ಗಂಟೆಗೆ ತಿಪಟೂರಿನ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ತೆಂಗು ಬೆಳಗಾರರ, ಮಾರಾಟಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಶಿವಮೊಗ್ಗಕ್ಕೆ ತೆರಳಲಿರುವ ಅಮಿತ್ ಷಾ ಮಧ್ಯಾಹ್ನ 1.20ಕ್ಕೆ ಕವಿಶೈಲದ ರಾಷ್ಟ್ರಕವಿ ಕುವೆಂಪು ಮೆಮೊರಿಯಲ್ ಹಾಲ್ ಗೆ ಭೇಟಿ ನೀಡಲಿದ್ದಾರೆ.

ತೀರ್ಥಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಡಕೆ ಬೆಳೆಗಾರರ ಸಮಾವಶೇದಲ್ಲಿ ಭಾಗಿಯಾಗಲಿದ್ದಾರೆ. 4.30 ರಿಂದ 5.15  ರವರೆಗೆ ಶಿವಮೊಗ್ಗದಲ್ಲಿ ರೋಡ್ ಶೋ ಮಾಡಲಿದ್ದಾರೆ. 6.20 ಕ್ಕೆ ಟ್ರೇಡ್, ಬ್ಯೂಸಿನೆಸ್ ಗಾರರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಂಜೆ 7.30ಕ್ಕೆ ಬೆಕ್ಕಿನಕಲ್ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಜತೆ ಚರ್ಚಿಸಲಿದ್ದಾರೆ.

27ರಂದು ದಾವಣಗೆರೆ ತಾಲೂಕಿನ  ದೊಡ್ಡಬಾತಿ ಗ್ರಾಮದಲ್ಲಿ ಮುಷ್ಟಿ ಅಕ್ಕಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಜಿಎಂಐಟಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಸಿರಿಗೆರೆ ಮಠ, 1.50 ಕ್ಕೆ ಮಾದಾರಚನ್ನಯ್ಯ ಪೀಠ, 2.50 ಕ್ಕೆ ಮರುಘಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಚಿತ್ರದುರ್ಗದ ಮದಕರಿ ನಾಯಕ ಪ್ರತಿಮೆ, ಒನಕೆ ಒಬ್ಬವ್ವನ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಮೂರು ಜಿಲ್ಲೆಗಳ ಶಕ್ತಿ ಕೇಂದ್ರದ ಪ್ರಮುಖರ ಸಭೆ ಬಳಿಕ ಚಳ್ಳಕೆರೆಯಲ್ಲಿ 5 ಗಂಟೆಗೆ ಎಸ್ಟಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *