ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಗಳ ಬಂಧನ

ಹರಪನಹಳ್ಳಿ; ನಕಲಿ ಬಂಗಾರ ನೀಡಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಬಂಧಿಸಿ, 12 ಲಕ್ಷರೂ ಹಣ ಹಾಗೂ ಒಂದು ಬೈಕ್‍ನ್ನು ಹರಪನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಗ್ರಹಾರ ತಾಂಡ ಶಿವ್ಯನಾಯ್ಕ(23) ಯಲ್ಲಾಪುರ ಕೊರಚರಹಟ್ಟಿ ತಾತ್ವಡಿ ದುರುಗಪ್ಪ(30), ಪಾವನಪುರ ಕವಾಡಿ ಮಲ್ಲಿಕಾರ್ಜುನ್(25) ಬಂಧಿತ ಆರೋಪಿಗಳು.

ಕಳೆದ ಜು.27ರಂದು ಬೆಂಗಳೂರು ನಗರದ ಚಂದ್ರಶೆಟ್ಟಿ ಎಂಬುವವರಿಗೆ ಗುಂಡಗತ್ತಿ ಹತ್ತಿರದ ಮಾಚಿಹಳ್ಳಿ ರಸ್ತೆಯಲ್ಲಿ ಮೂರುವರೆ ಕೆ.ಜಿ ನಕಲಿ ಬಂಗಾರದ ಬೊಟ್ಟುಗಳನ್ನು ನೀಡಿ 12 ಲಕ್ಷರೂ ಪಡೆದು ಆರೋಪಿತರು ಮೋಸ ಮಾಡಿದ್ದರು.


ಡಿವೈಎಸ್ಪಿ ನಾಗೇಶ್ ಐತಾಳ್ ಮಾರ್ಗದರ್ಶನದಲ್ಲಿ ಸಿಪಿಐ ಡಿ.ದುರುಗಪ್ಪ ಅವರ ನೇತೃತ್ವದ ತಂಡ ಆರೋಪಿಗಳ ಮತ್ತೆಗೆ ಬಲೆ ಬೀಸಿದ್ದರು. ತಾಲೂಕಿನ ನೀಲಗುಂದ ಕ್ರಾಸ್ ಬಳಿ ಭಾನುವಾರ ಸಿಪಿಐ ಡಿ.ದುರುಗಪ್ಪ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ 12 ಲಕ್ಷರೂ ನಗದು ಹಾಗೂ ಬಜಾಜ್ ಪಲ್ಸರ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂಡಕ್ಕೆ ಕಾರ್ಯ ಪ್ರಶಂಸೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಣೆ ಮಾಡಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *