ಸಂಪ್ರದಾಯಕ್ಕೆ ಧಕ್ಕೆಯಾದ ತೀರ್ಪು;ಅಯ್ಯಪ್ಪ ಸ್ವಾಮಿ ಭಕ್ತರ ಅಸಮಾಧಾನ

ದಾವಣಗೆರೆ; ಶಬರಿಮಲೈಯ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನೀಡಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಖಂಡಿಸಿ ನಗರದಲ್ಲಿಂದು ಶ್ರೀ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ(ರಿ) ಪದಾಧಿಕಾರಿಗಳು, ಮಹಿಳೆಯರು, ಶರಣು ಘೋಷದ ರ್ಯಾಲಿ ಹಾಗೂ ಪ್ರತಿಭಟನೆ ನಡೆಸಿದರು.


ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ರ್ಯಾಲಿ ಪ್ರಾರಂಭಿಸಿದ ಪ್ರತಿಭಟನಾಕಾರರು ಅಕ್ಕಮಹಾದೇವಿ ರಸ್ತೆ, ಚೇತನಾ ಹೋಟೆಲ್ ರಸ್ತೆ, ಕೆಇಬಿ ವೃತ್ತ, ಜಯದೇವವೃತ್ತ ಮೂಲಕ ಪಿಬಿ ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು, ಶಬರಿಮಲೈಯಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಪದ್ದತಿಗೆ ನ್ಯಾಯಾಲಯವು ನೀಡಿರುವ ತೀರ್ಪಿನಿಂದ ಅಯ್ಯಪ್ಪ ಸ್ವಾಮಿ ಭಕ್ತರ ಮನಸ್ಸಿಗೆ ನೋವುಂಟಾಗಿದೆ.

ಪಂದಳರಾಜನ ವಂಶಸ್ಥರ ಬಳಿ ಯಾವುದೇ ಒಂದು ತೀರ್ಮಾನಕ್ಕೆ ಬಾರದೆ ಸರ್ವೋಚ್ಚ ನ್ಯಾಯಾಲಯವು ಒಬ್ಬರು ಎನ್‍ಜಿಓ ಹಾಕಿರುವ ದೂರನ್ನು ಒಬ್ಬ ಮಹಿಳಾ ನ್ಯಾಯಧೀಶರು ಹಾಗೂ ಮೂವರು ಪುರುಷರ ನ್ಯಾಯಧೀಶರ ನೇತೃತ್ವದ ಪೀಠ ನೇಮಿಸಿ ಚರ್ಚಿಸಿದೆ. ಅದರಲ್ಲಿ ಮಹಿಳಾ ನ್ಯಾಯಾಧೀಶೆಯೂ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಹಿಂದು ಸಂಸ್ಕೃತಿಗೆ ವಿರುದ್ಧವಾಗಿ ನಾವು ವಾದಿಸಲು ಬದ್ದಳಲ್ಲ ಎಂದು ತಿಳಿಸಿದ್ದಾರೆ. ಇನ್ನುಳಿದ ಮೂವರು ಪುರುಷರ ನ್ಯಾಯಧೀಶರು ಅಯ್ಯಪ್ಪ ದೇವಸ್ಥಾನದ ಪರಂಪರೆಗೆ ಧಕ್ಕೆ ಬರುವ ಹಾಗೆ ತೀರ್ಪನ್ನು ಕೊಟ್ಟಿದ್ದಾರೆಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಎಂ ಎಸ್ ಗೋಪಾಲ್ ರಾವ್, ಎಸ್ ಟಿ ವಿರೇಶ್, ಸತೀಶ್ ಪೂಜಾರ್, ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *