ಹರಿಹರದಲ್ಲಿ ಪ್ರತಿಭಟನೆ- ಬಂದ್ ಗೆ ಬೆಂಬಲ

ಹರಿಹರ;ತೈಲ ದರ ಏರಿಕೆ ವಿರೋಧಿಸಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಶಾಸಕ ಎಸ್.ರಾಮಪ್ಪ ಮಾತನಾಡಿ ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ಡೀಸೆಲ್ 50 ರಿಂದ 60 ರೂಗಳಿಗೆ ಸಿಗುತ್ತಿತ್ತು ಅಡುಗೆ ಅನಿಲ 300 ರಿಂದ 400 ರೂಗಳಿಗೆ ದೊರೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದಮೇಲೆ ನೋಟ್ ಬ್ಯಾನ್, ಜಿಎಸ್‍ಟಿ ತೆರಿಗೆ, ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್ ದರಗಳು ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.


ಲೋಕಸಭೆ ಚುನಾವಣೆಗೂ ಮುನ್ನ ಸಾಕಷ್ಟು ಭರವಸೆಗಳ ಸುರಿಮಳೆಗಳನ್ನು ಸುರಿದಿದ್ದರು ಅವು ಕಾರ್ಯರೂಪಕ್ಕೆ ಬಂದಿಲ್ಲ, ಮೋದಿಯವರು ಪ್ರಧಾನಿಯಾದ ಬಳಿಕ ಶ್ರೀಮಂತರಿಗೆ ಮಾತ್ರ ಅನುಕೂಲವಾಗುತ್ತಿದೆ. ಬಡವರಿಗೆ ರೈತರಿಗೆ ಜನಸಾಮಾನ್ಯರಿಗೆ ಅನ್ಯಾಯ ಎಸಗುತ್ತಿದ್ದಾರೆ. ಕೇಂದ್ರ ಸರ್ಕಾರ ಮಾಡುತ್ತಿರುವ ಬೆಲೆ ಏರಿಕೆಯಿಂದ ಜನರ ಬದುಕು ದುಸ್ಥರವಾಗುತ್ತಿದೆ. ಈ ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಏರಿಕೆಯಾಗಿರುವ ಬೆಲೆಯನ್ನು ಕಡಿಮೆಗೊಳಿಸಬೇಕು. ಬಡವರಿಗೆ ರೈತರಿಗು ಜನಸಾಮಾನ್ಯರಿಗೂ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಪ್ರತಿಭಟನೆಯೂ ಫಕ್ಕೀರಸ್ವಾಮಿ ಮಠದಿಂದ ಎತ್ತಿನ ಬಂಡಿಯ ಮೂಲಕ ಪ್ರಾರಂಭಗೊಂಡಿತು. ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಮಹಾತ್ಮಗಾಂಧಿ ವೃತ್ತದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹನ ಮಾಡಿದರು.

ಈ ವೇಳೆ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್‍ಬಿ.ಹನುಮಂತಪ್ಪ, ಎಂಬಿ ಹಬೀದ್ ಅಲಿ, ನಗರಸಭಾ ಸದಸ್ಯರಾದ ಎಸ್‍ಎಂ.ವಸಂತ, ಕೆ ಮರಿದೇವ್, ರೇವಣಸಿದ್ದಪ್ಪ, ಡಿಜಿ ರಘುನಾಥ್, ರತ್ನಮ್ಮ, ಹಾಗೂ ಮುಖಂಡರುಗಳಾದ ಹಂಚಿನ ಮನೆ ನಾಗಣ್ಣ, ಬಸವರಾಜ್ ಬೆಳ್ಳೂಡಿ, ಮಂಜುನಾಥ ಪಟೇಲ್, ಅಸ್ರಾ ಟಿವಿ ಖಾನ್‍ಸಾಬ್, ಎಂಬಿ ಅಣ್ಣಪ್ಪ, ಜಿವಿ. ವೀರೇಶ್, ಬಿ ಮಗ್ದುಂ, ಬಿ ರೇವಣಸಿದ್ದಪ್ಪ, ಸಿಎನ್.ಹುಲಿಗೇಶ್, ಅಪ್ರೋಜ್, ಅಶೋಕ್ ಮಾಸ್ಟರ್, ಮುನಾಪ್, ಕಿರಣ್ ಭೂತೆ, ಹೆಚ್.ತಿಪ್ಪೇಶ್, ಗೀತಾ ಕದರಮಂಡಲಗಿ, ನೇತ್ರಾವತಿ, ಡಿವೈ ಇಂದಿರಾ, ಪಾರ್ವತಮ್ಮ, ನಗರ ಮತ್ತು ಗ್ರಾಮಾಂತರ ಪ್ರದೇಶದ ಮುಖಂಡರು ಕಾರ್ಯಕರ್ತರು ಆಟೋಚಾಲಕರು ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಬಂದ್ ಕರೆಗೆ ಬೆಂಬಲ ಸೂಚಿಸಿದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *