ಜಗಳೂರು ತಾಲ್ಲೂಕು ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡಲು ಒತ್ತಾಯ

ಜಗಳೂರು; ರೈತರು ಬೆಳೆದ ಮೆಕ್ಕೇಜೋಳ, ಶೆಂಗಾ ,ಈರುಳ್ಳಿ ಬೆಳೆಗಳು ತಾಲ್ಲೂಕಿನಲ್ಲಿ ಮಳೆ ಬಾರದೇ ನಶಿಸಿ ಹೋಗಿದ್ದು ಕೂಡಲೇ ತಾಲ್ಲೂಕನ್ನು ಬರ ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡಿ, ಬೆಳೆ ವಿಮೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡುವಂತೆÉ ಎಪಿಎಂಸಿ ವತಿಯಿಂದ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಎನ್.ಎಸ್.ರಾಜು ಹೇಳಿದರು.


ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಗಳೂರು ತಾಲ್ಲೂಕು ಅತಿ ಹಿಂದುಳಿದ ಪ್ರದೇಶವಾಗಿದ್ದು, ಸರಾಸರಿ ನೂರು ವರ್ಷಗಳ ಇತಿಹಾಸದಲ್ಲಿ 70 ವರ್ಷಗಳ ಕಾಲ ಬರಪೀಡಿತ ಪ್ರದೇಶವಾಗಿದ್ದು, ಈಗಾಗಲೇ ರೈತರು ಮೆಕ್ಕೇಜೋಳ, ಶೆಂಗಾ ,ಈರುಳ್ಳಿ ಬೆಳೆಗಳು ಈ ತಾಲ್ಲೂಕಿನಲ್ಲಿ ಇತರ ಬೆಳೆಗಳನ್ನು ತುಂತುರು ಮಳೆಗೆ ಭಿತ್ತನೆ ಮಾಡಿದ್ದು, ಎಲ್ಲಾ ಬೆಳೆಗಳು ಮಳೆ ಬಾರದೇ ನಶಿಸಿ ಹೋಗಿವೆ.

ಇದನ್ನು ಮನ ಗಂಡು ಮೆಕ್ಕೇಜೋಳ ,ಶೆಂಗಾ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಮುಖ್ಯಮಂತಿ ಕುಮಾರ್‍ಸ್ವಾಮಿ, ಸಂಬಂಧಿಸಿದ ಸಚಿವರಾದ ಬಂಡೆಪ್ಪ ಕಾಶೆಂಪೂರ್‍ರವರಿಗೆ, ಜಿಲ್ಲಾಧಿಕಾರಿಗಳಿಗೆ ,ಮಾನ್ಯ ನಿರ್ಧೇಶಕರುಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಸತತ ಎರಡು ವರ್ಷಗಳ ಕಾಲ ಆದ ಬರಗಾಲದಿಂದ ಜಗಳೂರು ಎಪಿಎಂಸಿಯ ವಾರ್ಷಿಕ ಗುರಿ 1 ಕೋಟಿಯ ಇದ್ದು 60 ಲಕ್ಷ ಆದಾಯ ಬಂದಿದೆ.

ಆರ್.ಡಿ.ಐ.ಎಫ್ ಯೋಜನೆಯಲ್ಲಿ ಅಸಗೋಡು ಗ್ರಾಮದಲ್ಲಿ 50 ಲಕ್ಷ್ ವೆಚ್ಚದಲ್ಲಿ 500 ಎಂ.ಟಿ.ಸಾಮಥ್ರ್ಯದ ಗೋದಾಮು ನಿರ್ಮಾಣದ ಗುರಿ, ಅಣಬೂರು ,ಸೊಕ್ಕೆ ಗ್ರಾಮಗಳಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಸಂತೆ ಮೈದಾನಗಳ ಅಭಿವೃದ್ಧಿ ಕಾಮಗಾರಿಗಳ ನಿರ್ಮಾಣ ಹೊಂದಲಾಗಿದ್ದು, ರೂ. 18.40 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಖರೀಧಿಸಲಿಕ್ಕೆ ಆನ್‍ಲೈನ್ ಟೆಂಡರ್ ಕರೆಯಲಾಗಿದೆ ಎಂದವರು ಮಾಹಿತಿ ನೀಡಿದರು.


ಮಾಜಿ ಜಿ.ಪಂ.ಸದಸ್ಯರು ಎಪಿಎಂಸಿ ಸದಸ್ಯರಾದ ಎಸ್.ಕೆ.ರಾಮರೆಡ್ಡಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಜಗಳೂರು ತಾಲ್ಲೂಕಿನಲ್ಲಿ ಮಳೆ ಬಾರದೇ ರೈತರು ಬಿತ್ತಿದ ಮೆಕ್ಕೆಜೋಳ, ಶೆಂಗಾ ಸೇರಿದಂತೆ ಇತರೇ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ಸರ್ಕಾರ ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ , ಕೆಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಬೆಳೆವಿಮೆ ನೀಡಲು ಕ್ರಮ ಕೈಗೊಳ್ಳಬೇಕು.


ಮೆಕ್ಕೇಜೋಳ, ಶೆಂಗಾ, ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಹಾಗೂ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ಜಿಲ್ಲೆಯ ಸಂಸದರೂ ಸರ್ಕಾರದ ಮೇಲೆ ಒತ್ತಡ ತರಬೇಕೆಂದರು. ಎಪಿಎಂಸಿಯಲ್ಲಿ ವಾರಕ್ಕೆ ಮೂರು ದಿವಸ ಮೆಕ್ಕೇಜೋಳ ಇತರೇ ಬೆಳೆಗಳನ್ನು ಖರೀಧಿ ಮಾಡಲಾಗುತ್ತಿದ್ದು , ಉಳಿದ ಮೂರು ದಿವಸದ ಅವಧಿಯಲ್ಲಿ ಈರುಳ್ಳಿಯನ್ನು ಬೆಂಗಳೂರು, ದಾವಣಗೆರೆಯಲ್ಲಿ ಏನು ಪ್ರತಿ ಧಿನ ಬೆಲೆಯಲ್ಲಿ ಖರೀದಿಯಾಗುವುದೋ ಅದೇ ಧರದಲ್ಲಿ ಖರೀದಿದಾರರು ಖರೀಧಿಸಬೇಕೆಂದು ತೀರ್ಮಾನಿಸಲಾಗಿದು,್ದ ರೈತರು ಸಹಕರಿಸಿ ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಈರುಳ್ಳಿ ತರುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲಿ ಎಪಿಎಂಸಿ ಸದಸ್ಯರುಗಳಾದ ಹನುಮಂತಪ್ಪ, ರೇವಣ್ಣ, ಶ್ರೀಶೈಲಾಚಾರಿ, ವರ್ತಕರ ಕ್ಷೇತ್ರದ ಮಲ್ಲಿಕಾರ್ಜುನ್, ಫಿಕಾರ್ಡ ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಬು ಹಾಜರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *