Home / ಸುದ್ದಿ / ಜಿಲ್ಲೆ / ಈ ಫೋಟೋ ನೋಡಿ ಛೀ ಎನ್ನಬೇಡಿ, ಇದರಲ್ಲಿದೆ ಮನುಕುಲದ ಸಂದೇಶ…

ಈ ಫೋಟೋ ನೋಡಿ ಛೀ ಎನ್ನಬೇಡಿ, ಇದರಲ್ಲಿದೆ ಮನುಕುಲದ ಸಂದೇಶ…

ತಾಯಿಯೊಬ್ಬರು ತನ್ನ ಕಂದಮ್ಮನಿಗೆ ಎದೆಹಾಲು ಉಣಿಸುವ ಫೋಟೋ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆರಳ ರಾಜ್ಯದ ಮಲಯಾಳಂ ನಿಯತಕಾಲಿಕೆ “ಗೃಹಲಕ್ಷ್ಮಿ” ತನ್ನ ಮುಖಪುಟದಲ್ಲಿ ಈ ಚಿತ್ರವನ್ನ ಮುಕ್ತವಾಗಿ ಪ್ರಕಟಿಸಿದೆ..

ಆಧುನಿಕತೆ ಬರಾಟೆಯಲ್ಲಿ ಸ್ತ್ರೀಯು ತನ್ನ ಸೌಂದರ್ಯ ಹಾಳಾಗುತ್ತೆ ಅಂತ ಕಂದಮ್ಮಗಳಿಗೆ ಎದೆಹಾಲು ಉಣಿಸುವುದು ಕೈಬಿಟ್ಟಿದ್ದಾಳೆ. ಮಗುವಿಗಿಂತ ತನ್ನ ಸೌಂದರ್ಯವೇ ಹೆಚ್ಚು ಅಂತ ಎಷ್ಟೊ ತಾಯಂದಿರು ಒಂದು ಅಥವಾ ಎರಡು ತಿಂಗಳು ಎದೆಹಾಲು ಕುಡಿಸಿ ನಂತರ ಬಾಟಲಿ ಹಾಲು ಫೀಡ್ ಮಡುತ್ತಾರೆ.

ಹೀಗೆ ತಾಯಂದಿರು ಎದೆಹಾಲು ಕುಡಿಸದ ಕಾರಣ ಮಕ್ಕಳಲ್ಲಿ ಅಪೌಷ್ಠಿಕತೆ ಕೊರತೆ ಎದ್ದು ಕಾಣುತ್ತದೆ. ಕೇರಳ ರಾಜ್ಯದ ಮಹಿಳೆಯರು ತಮ್ಮ ಮಕ್ಕಳಿಗೆ ಎದೆಹಾಲು ಕುಡಿಸಲು ಹಿಂದೇಟು ಮಾಡುತ್ತಿದ್ದಾರೆಂತೆ.

ತಾಯಂದಿರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ”ಗೃಹಲಕ್ಷ್ಮಿ” ನಿಯತಕಾಲಿಕೆ ಇಂತಹ ಫೋಟೋವನ್ನ ಮುಖಪುಟದಲ್ಲಿ ಪ್ರಕಟಿಸುವ ಜೊತೆಗೆ ‘ಬಾಟಲ್ ಫೀಡಿಂಗ್ ನಿಲ್ಲಿಸಿ, ನಾವು ಸ್ತನ್ಯಪಾನ ಮಾಡಿಸಬೇಕಿದೆ’ ಎನ್ನುವ ಘೋಷವಾಖ್ಯದೊಂದಿಗೆ ಅಭಿಯಾನ ಹಮ್ಮಿಕೊಂಡಿದೆ. ಇಂತಹ ಅದ್ಭುತ ಫೊಟೋಗೆ ಜಿನ್ ಸನ್ ಅಬ್ರಾಹಂ ಎಂಬುವರು ಫೊಟೋಗ್ರಾಫಿ ಮತ್ತು ಆರ್ಟ್ ಡೈರೇಷನ್ ಮಾಡಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *