ವೇತನ ಹೆಚ್ಚಳ-ಪಿಂಚಣಿ ಪರಿಷ್ಕರಣೆಗೆ ಬಿಎಸ್ಎನ್ಎಲ್ ನೌಕರರ ಒತ್ತಾಯ

ದಾವಣಗೆರೆ- ವೇತನ ಹೆಚ್ಚಳ ಹಾಗೂ ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಸ್ಎನ್ಎಲ್ ನೌಕರರು ನಗರದ ಪಿಜೆ ಬಡಾವಣೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿ ಮುಂಭಾಗದಲ್ಲಿಂದು ಪ್ರತಿಭಟನೆ ನಡೆಸಿದರು.


ಬಿಎಸ್ಎನ್ಎಲ್ ನೌಕರರ ಮೂರನೇ ವೇತನ ಪರಿಷ್ಕರಣೆ, ಪಿಂಚಣಿ ಪರಿಷ್ಕರಣೆ ಮಾಡಬೇಕು. ನೇರ ನೇಮಕವಾಗಿರುವ ನೌಕರರಿಗೆ ಶೇ. 30 ರ ನಿವೃತ್ತಿ ಸವಲತ್ತುಗಳನ್ನು ನೀಡಬೇಕು. ಮೂಲವೇತನದ ಮೇಲೆ ಮಾತ್ರ ಪಿಂಚಣಿ ದೇಣಿಗೆ ಕಡಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಆದೇಶವಿದೆ. ಆದರೆ ಬಿಎಸ್ಎನ್ಎಲ್ ನೌಕರರಿಗೆ ಈ ಆದೇಶ ಇನ್ನು ಜಾರಿಗೆ ಆಗಿಲ್ಲ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದರು.


ದೂರ ಸಂಪರ್ಕ ಕ್ಷೇತ್ರದ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳನ್ನು ದೇಶದಲ್ಲಿ ಅನುಷ್ಟಾನಗೊಳಿಸಲು ಸರ್ವರೀತಿಯಲ್ಲಿಯೂ ಬಿಎಸ್ಎನ್ಎಲ್ ಕಂಪನಿ ಸಹಕಾರ ನೀಡುತ್ತಿದೆ. ಬೇರೆ ಖಾಸಗಿ ಕಂಪನಿಗಳ ರೀತಿ ಕೋಟಿ ರೂ ಗಳ ಬ್ಯಾಂಕ್ ಸಾಲವಿಲ್ಲ, ದೇಶದ ಸಾಮಾಜಿಕ ಜವಾಬ್ದಾರಿಯನ್ನು ಬಿಎಸ್ಎನ್ಎಲ್ ಕಂಪನಿ ನಿರ್ವಹಿಸುತ್ತಿದೆ. ಬಿಎಸ್ಎನ್ಎಲ್ ಕಂಪನಿಗೆ ಅತೀ ಶೀಘ್ರದಲ್ಲಿ ಕೇಂದ್ರ ಸರ್ಕಾರ 4ಜಿ ಸೇವೆ ಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಈರಣ್ಣ ನೇತೃತ್ವದಲ್ಲಿ ಬಿಎಸ್ಎನ್ಎಲ್ ನೌಕರರು ಉಪಸ್ಥಿತರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *