ಕೋಳಿ ಮಾಂಸ‌‌ ಅಂದ್ರೆ ಇಷ್ಟಾನಾ‌, ನಾವ್ ಹೇಳಿತ್ತೀವಿ ಕೇಳಿ‌ ನಿಮ್ ಕೋಳಿ ಬಗ್ಗೆ‌..‌‌!

ಆರ್ಯನ್ ನಾರಸೇಗೌಡ, ಫ್ಲಾಶ್ ನ್ಯೂಸ್ ಕನ್ನಡ

ಕರ್ನಾಟಕ ಅಂದ್ರೆ ಕಡಕ್ ಮಂದಿ ಅಂತಾ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಹಳೆ ಮೈಸೂರು ಭಾಗದ ಕಡೆ ಮುದ್ದೆ ನಾಟಿ ಕೋಳಿ ಸಾರು ಅಂದ್ರೆನೆ ಫೇಮಸ್. ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು ಈ ಭಾಗದ ಜನ ಆಲ್ ಮೋಸ್ಟ್ ನಾನ್ ವೆಜ್ ಪ್ರಿಯರು. ಸಂಡೇ ಬಂತು ಅಂದ್ರೆ ಮನೇಲಿ ಬಾಡೂಟ ಕನ್ಫರ್ಮ್.


ಇನ್ನು ಈ ಭಾಗದ ಹಳ್ಳಿಗಳಲ್ಲಿ ನಾಟಿ ಕೋಳಿನೇ ಹೆಚ್ಚು. ಇನ್ನು ನಾವು ಕೋಳಿ ಮಾಂಸ ತಿನ್ನೋದ್ರಿಂದ ನಮ್ಮ ದೇಹಕ್ಕೆ ಆಗೋ ಕೆಲವು ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳ್ತೀವಿ. ಕೋಳಿ ಮಾಂಸ ತಿನ್ನುವುದರಿಂದ ನಮ್ಮ ದೇಹದಲ್ಲಿನ ಸ್ನಾಯಗಳ ಬೆಳವಣಿಗೆ ಹೆಚ್ಚಾಗುತ್ತದೆ. ಅದರತೆ ಮೂಳೆಗಳು ಕೂಡ ಬಲಿಷ್ಠವಾಗುತ್ತದೆ.

ಇನ್ನು ಹೃದಯ ಸಂಬಂಧಿ ಕಾಯಿಲೆಗಳಿಗೆ ಕೋಳಿ ಬಹಳ ಉಪಯೋಗ. ದೇಹದ ತೂಕ ಹೆಚ್ಚು ಮಾಡಲು ಬಯಸುವವರು ಕೂಡ ಕೋಳಿ ಮಾಂಸ ತಿನ್ನುತ್ತಾರೆ‌. ಏಕಂದ್ರೆ ಕೋಳಿಯಲ್ಲಿ ನಾರಿನಾಂಶ ಇದೆ. ನಾರಿನಾಂಶ ತೂಕ‌ ಹೆಚ್ಚಿಸಲು ಸಹಕಾರಿಯಾಗುತ್ತೆ. ಕೋಲೆಸ್ಟ್ರಾಲ್ ಕಡಿಮೆ ಮಾಡಕೊಳ್ಳಲು ಸಹ ಕೋಳಿ ಮಾಂಸ ಸಹಕಾರಿಯಾಗಲಿದೆ. ಕೋಳಿಯಲ್ಲಿ ಹಲವಾರು ಪ್ರೋಟೀನ್ ಅಂಶಗಳು ಕೂಡ ಇದೆ‌.‌ ವಿಟಮಿನ್ ಬಿ.ಸಿ. ಕ್ಯಾಲ್ಸಿಯಂ. ‌ಕಬ್ಬಿಣದ ಅಂಶ ಕೂಡ ಹೆಚ್ಚಾಗಿದೆ. ಇನ್ನು ಬಾಡಿ ಬಿಲ್ಡ್ ಮಾಡೋರು ಹೆಚ್ಚಾಗಿ ಮಣೆ ಹಾಕೋದು ಕೋಳಿ ಮಾಂಸಕ್ಕೇನೆ.


ಅತಿಯಾದ್ರೆ ಅಮೃತನೂ ವಿಷನೇ ಆಗುತ್ತಂತೆ. ಹಾಗೆನೇ ಕೋಳಿ ಮಾಂಸ ಕೂಡ ಹಿತವಾಗಿ ಮಿತವಾಗಿ ಬಳಸಿದ್ದರೆ ಆರೋಗ್ಯ ಚೆನ್ನಾಗಿರುತ್ತೆ. ಇನ್ನು ಕೋಳಿ ಮಾಂಸದಿಂದ ಕೆಲ ದುಷ್ಪರಿಣಾಮ ಕೂಡ ನಮಗೆ ಬರಬಹುದು. ಹಾಗಂತ ಕೋಳಿ ಮಾಂಸದಿಂದ ಅಪಾಯನು ಏನು ಇಲ್ಲ, ಜಾಗೃತಿ ಇದ್ರೆ ಯಾವುದೇ ಆಗ್ಲಿ ಕೈ ಮೀರೊಲ್ಲ.


ನಾವು ಡೈಲಿ ಅಥವಾ ಎರಡು ದಿನಕ್ಕೊಮ್ಮೆ ಕೋಳಿ ಮಾಂಸ ತಿನ್ನೋದೆ ಆದ್ರೆ ಇದ್ರಿಂದ ಕ್ಯಾನ್ಸರ್ ಗೆ ಗುರಿಯಾಗೋ ಚಾನ್ಸಸ್ ಜಾಸ್ತಿ ಇರುತ್ತೆ. ಆದ್ದರಿಂದ ಕೋಳಿ ಮಾಂಸ ಲಿಮಿಟ್ ಆಗಿ ತಿನ್ಬೇಕು. ಇದಕ್ಕೆ ಹೆಚ್ಚಾಗಿ ಮಹಿಳೆಯರು. ಬಾಡಿಬಿಲ್ಡ್ ಮಾಡೋರೆ ಇತ್ತೀಚಿನ ದಿನಗಳಲ್ಲಿ ಗುರಿಯಾಗ್ತಿದ್ದಾರೆ.


ಇನ್ನು ಹೆಚ್ಚಾಗಿ ಬಾಯ್ಲರ್ ಕೋಳಿ ತಿನ್ನೋದ್ರಿಂದ ಪುರುಷರ ವೀರ್ಯಾಣುಗಳ ಮೇಲೆ ಪ್ರಭಾವ ಬೀರೋ ಲಕ್ಷಣಗಳು ಜಾಸ್ತಿ ಇವೆ. ಇದ್ರಿಂದ ಪುರುಷರು ಕೂಡ ಬಂಜೆತನಕ್ಕೆ ಗುರಿಯಾಗೋ ಚಾನ್ಸಸ್ ಇದೆ‌. ಆದ್ದರಿಂದ ನಾಟಿ ಕೋಳಿ ಮಾಂಸ ಅರೋಗ್ಯಕ್ಕೆ ಉತ್ತಮ ಅನ್ಸುತ್ತೆ.

About flashnewskannada

Check Also

ಈ ಫೋಟೋ ಸೆರೆಹಿಡಿದ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ..!

ನ್ಯೂಸ್ ಡೆಸ್ಕ್ : ಈ ಫೋಟೋವನ್ನು  ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದವರು ಸೌಥ್ ಆಫ್ರಿಕಾದ ಖ್ಯಾತ ಛಾಯಾಗ್ರಾಹಕ ಕೆವಿನ್ ಕಾರ್ಟರ್. …

Leave a Reply

Your email address will not be published. Required fields are marked *