Home / ಸುದ್ದಿ / ಜಿಲ್ಲೆ / 5 ತಿಂಗಳ ಕಂದಮ್ಮನಿಗೂ ನೇಣು ಬಿಗಿದು, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಳು..!

5 ತಿಂಗಳ ಕಂದಮ್ಮನಿಗೂ ನೇಣು ಬಿಗಿದು, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಳು..!

ಆಕೆಯ ಮಡಿಲಲ್ಲ 5 ತಿಂಗಳ ಕಂದಮ್ಮ ಇತ್ತು. ಇಷ್ಟು ದಿನ ಗಂಡ ಏನೇ ಕಿರುಕುಳ ನೀಡಿದ್ರೂ ಕಂದಮ್ಮನ ಮುಖ ನೋಡಿಕೊಂಡು ಸಹಿಸಿಕೊಂಡು ಹೋಗ್ತಾ ಇದ್ದಳು. ಆದ್ರೆ, ಗಂಡ ಬೇರೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡು ಮನೆಯಲ್ಲಿ ಪತ್ನಿಗೆ ನಿತ್ಯ ಕಾಟ ನೀಡಲು ಶುರುಮಾಡಿದ ಅದರಿಂದ ಮನನೊಂದ ಆಕೆ 5 ತಿಂಗಳ ಕಂದಮ್ಮನಿಗೆ ನೇಣು ಬಿಗುದು ಆಕೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗದಗ ಜಿಲ್ಲೆಯ ಶ್ಯಾಗೋಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಶೃತಿ ಎಂಬ ಮಹಿಳೆ ತನ್ನ ಕರುಳ ಕುಡಿಗೆ ನೇಣು ಬಿಗಿದು ಆಕೆಯೂ ನೇಣಿಗೆ ಶರಣಾಗಿದ್ದಾಳೆ. ಶೃತಿಯ ಪತಿ ಗೋವಿಂದಗೌಡ ಹಿರೇಗೌಡ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಕುಡಿದು ಬಂದು ದೈಹಿಕವಾಗಿ ಹಲ್ಲೆ ಮಾಡುತ್ತಿದ್ದು, ಅಷ್ಟೇ ಅಲ್ಲದೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.

5 ತಿಂಗಳ ಗಂಡು ಮಗು ಶಶಾಂಕಗೌಡ ಮೃತ ಕಂದಮ್ಮ. ಶೃತಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಪತಿ ಕಿರುಕುಳ ನೀಡುತ್ತಿದ್ದರ ಬಗ್ಗೆ ಹೇಳಿಕೊಂಡಿದ್ದಾಳೆ. ಗೋವಿಂದಗೌಡ ಮೂಲತಃ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿವಾಸಿ. ಪತಿಯ ಅನೈತಿಕ ಸಂಬಂಧದ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತು ಎನ್ನಲಾಗಿದೆ.

ಗೋವಿಂದಗೌಡನನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೃತಿ ಪಾಲಕರು ಗೋವಿಂದಗೌಡನ ವಿರುದ್ಧ ದೂರು ದಾಖಲಿಸಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *