Home / Uncategorized / ಪ್ರೇಮಲೋಕ, ಪೋಲಿ ಬಾಯ್ಸ್ ಅಂತ ಗ್ರೂಪ್ ಮಾಡ್ಕೊಂಡು ಈ ದಂಪತಿ ಮಾಡಿದ್ದನ್ನ ಕೇಳಿದ್ರೆ ಶಾಕ್ ಆಗ್ತಿರಿ…!

ಪ್ರೇಮಲೋಕ, ಪೋಲಿ ಬಾಯ್ಸ್ ಅಂತ ಗ್ರೂಪ್ ಮಾಡ್ಕೊಂಡು ಈ ದಂಪತಿ ಮಾಡಿದ್ದನ್ನ ಕೇಳಿದ್ರೆ ಶಾಕ್ ಆಗ್ತಿರಿ…!

ವಾಟ್ಸ್ಅಪ್, ಫೇಸ್ ಬಕ್, ಇನ್ಸ್ಟಾಗ್ರಾಂ ಹೀಗೆ ವಿವಿಧ ಅಫ್ಲಿಕೇಷನ್ ಗಳು ಬಂದಂತೆ ಅನುಕೂಲದ ಜೊತೆ ಅನಾನುಕೂಲವೇ ಹೆಚ್ಚಾಗಿದೆ. ಪೇಸ್ ಬುಕ್, ವಾಟ್ಸ್ಅಪ್ ಗಳಲ್ಲಿ ಗ್ರೂಪ್ ಮಾಡೋದು. ಅದರಲ್ಲಿಯೇ ಪರಿಚಯ, ಪ್ರೀತಿ, ಪ್ರೇಮ, ಕಾಮ ಎಲ್ಲವೂ ನಡೆದು ಹೋಗುತ್ತಿವೆ. ಹೀಗೆ ತಂತ್ರಜ್ಞಾನವನ್ನ ಬಳಿಸಿಕೊಂಡು ದಂಪತಿ ವಾಟ್ಸ್ ಅಪ್ ನಲ್ಲಿ ಗ್ರೂಪ್ ಮಾಡಿಕೊಂಡು ಏನೇನು ಮಾಡಿದರು ಅನ್ನೋದನ್ನ ಕೇಳಿದ್ರೆ ಒಂದು ಕ್ಷಣ ದಂಗಾಗಿ ಹೋಗ್ತಿರಿ.

ದಾವಣಗೆರೆ ನಗರದ ನಿಟುವಳ್ಳಿ ಬಡಾವಣೆಯ ವೆಂಕಟೇಶ್ ಮತ್ತು ರೇಖಾ ದಂಪತಿ ಹನಿ ಟ್ರ್ಯಾಪ್ ಮೂಲಕ ಹಣವಂತರನ್ನ ಹಳ್ಳಕ್ಕೆ ಬಿಳಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ವಾಟ್ಸ್ ಅಪ್ ನಲ್ಲಿ ಪ್ರೇಮಲೋಕ, ಪೋಲಿ ಬಾಯ್ಸ್ ಅಂತ ಗ್ರೂಪ್ ಮಾಡಿಕೊಂಡು ದೊಡ್ಡ ದೊಡ್ಡ ವ್ಯಕ್ತಿಗಳನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತಿದ್ದರು. ಕೊನೆಗೆ ಆ ದಂಪತಿಗಳೇ ಪೊಲೀಸ್ ಖೆಡ್ಡಾಕ್ಕೆ ಬಿದ್ದಿದ್ದಾರೆ.

ದಾವಣಗೆರೆಯ ಬೆಳ್ಳಿ-ಬಂಗಾರ ವ್ಯಾಪಾರಿ ಬಾವೀಶ್ ಎಂಬ ವ್ಯಕ್ತಿ ಬಳಿ ಬಂಗಾರ ಅಡವಿಡಲು ಹೋದ ವೆಂಕಟೇಶ್-ರೇಖಾ ದಂಪತಿ ಬಾವೀಶ್ ಜೊತೆ ಸ್ನೇಹ ಬೆಳೆಸಿ ವಾಟ್ಸ್ಅಪ್ ಗ್ರೂಪ್ ನಲ್ಲಿ ಆ್ಯಡ್ ಮಾಡ್ತಾರೆ. ನಂತರ ರೇಖಾ ಪರ್ಸನಲ್ ಆಗಿ ಬಾವೀಶ್ ಗೆ ಮೆಸೇಜ್ ಮಾಡಿ ಬುಟ್ಟಿಗೆ ಬಿಳಿಸಿಕೊಳ್ಳುತ್ತಾಳೆ. ಬಾವೀಶ್ ಕೂಡ ಹೆಣ್ಣು ತಾನಾಗೆ ಒಲಿದಳು ಅಂತ ಖೆಡ್ಡಕ್ಕೆ ಬಿಳ್ತಾನೆ.

ಅದೊಂದು ದಿನ ರೇಖಾ ಬಾವೀಶ್ ಗೆ ಕರೆ ಮಾಡಿ ಮನೆಗೆ ಬನ್ನಿ ಅಂತ ಆಹ್ವಾನ ನೀಡ್ತಾಳೆ. ಅದು ರೇಖಾ ಪತಿ ವೆಂಕಟೇಶ್ ಮಾಡಿದ್ದ ಮಾಸ್ಟರ್ ಪ್ಲಾನ್ ಆಗಿರತ್ತೆ. ಬಾವೀಶ್ ಕೂಡ ಹಿಂದೆ ಮುಂದೆ ಯೋಚನೆ ಮಾಡದೆ ರೇಖಾಳ ಮನೆಗೆ ಹೋಗುತ್ತಾನೆ. ಆಗ ರೇಖಾ ಬಾವೀಶ್ ನನ್ನು ರೂಂಗೆ ಕರೆದುಕೊಂಡು ಹೋಗಿ ರೋಮ್ಯಾನ್ಸ್ ಮಾಡ್ತಾಳೆ. ಹೀಗೆ ರೇಖಾ-ಬಾವೀಶ್ ರೋಮ್ಯಾನ್ಸ್ ಮಾಡೋ ದೃಶ್ಯವನ್ನ ಸ್ವತಃ ವೆಂಕಟೇಶ್ ಮೊಬೈಲ್ ನಲ್ಲಿ ಶೂಟ್ ಮಾಡುತ್ತಾನೆ.

ಬಾವೀಶ್ ತನ್ನ ಪತ್ನಿ ಜೊತೆ ಇದ್ದ ದೃಶ್ಯ ಚಿತ್ರೀಕರಿಸಿದ್ದ ವೆಂಕಟೇಶ್ ಅದನ್ನ ಬಾವೀಶ್ ಗೆ ತೋರಿಸಿ 15 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡ್ತಾನೆ. ಆಗ ಬಾವೀಶ್ ದಾರಿಯಲ್ಲಿ ಹೋಗೋ ಮಾರಿಯನ್ನ ಮನೆಯೊಳಗೆ ಬಿಟ್ಟುಕೊಳ್ಳುವುದು ಬೇಡ ಅಂತ 5 ಲಕ್ಷ ಹಣ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಅಷ್ಟಕ್ಕೆ ಸುಮ್ಮನಾದ ದಂಪತಿ ಮತ್ತೆ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡ್ತಾರೆ. ಆಗ ಆವೀಶ್ ಪೊಲೀಸ್ ಠಾಣೆ ಮೇಟ್ಟಿಲೇರುತ್ತಾನೆ.

ಬಸವನಗರ ಪೊಲೀಸರು ವೆಂಕಟೇಶ್ ಮತ್ತು ರೇಖಾಳನ್ನು ಕರೆ ತಂದು ಚಾರ್ಜ್ ಮಾಡಿದ ಮೇಲೆ ದಂಪತಿ ಇಬ್ಬರು ಸೇರಿ ಹೇಗೆ ಹನಿ ಟ್ರ್ಯಾಪ್ ಮಾಡಿದರು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು.

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *