ಡಿಡಿಟಿ ಮುಕ್ತ ಜಿಲ್ಲೆಯಾಗಿಸಲು ಪಣ

ದಾವಣಗೆರೆ : ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ, ವ್ಯಸನ ಮುಕ್ತ ದಾವಣಗೆರೆ ಜಿಲ್ಲೆಯನ್ನಾಗಿಸುವ ಹಿನ್ನಲೆಯಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕ್ಷೇತ್ರ ಶಿಕ್ಷಣಾಧಿಕಾರಿ ದಕ್ಷಿಣ ವಲಯದ ಸಂಯುಕ್ತಾಶ್ರಯದಲ್ಲಿ ಇಂದು ಜಾಗೃತಿ ಜಾಥಾ ನಡೆಯಿತು.


ನಗರದ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ನಡೆದ ಜಾಥಾದಲ್ಲಿ ವಿವಿಧ ಶಾಲೆಯ ಮಕ್ಕಳು ಸೇರಿದಂತೆ ಸ್ವಾಮೀಜಿಯವರು, ಹೋರಾಟಗಾರರು, ಸಾಹಿತಿಗಳು ಪಾಲ್ಗೊಂಡಿದ್ದರು.ಹಿರಿಯ ಹೋರಾಟಗಾರ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಯುವ ಜನತೆ ದುಶ್ಚಟಗಳಿಗೆ ಬಲಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅಗತ್ಯ ಇದೆ.

ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಡಿಡಿಟಿಯಿಂದಾಗುವ ಅನಾಹುತಗಳ ಬಗ್ಗೆ ಪಠ್ಯದ ಮೂಲಕ ಪಾಠ ಮಾಡಿ ಜಾಗೃತಿ ಗೊಳಿಸಲು ಸರಕಾರ ಕ್ರಮಕೈಗೊಳ್ಳಬೇಕೆಂದರು.ತಂಬಾಕು, ಗುಟ್ಕಾ ಹಾಕಿಕೊಳ್ಳುವುದು ಇಂದು ಶೋಕಿ ಆಗಿದೆ. ಚಿಕ್ಕ ಮಕ್ಕಳು ಕೂಡಾ ಇಂದು ಇವುಗಳ ದಾಸರಾಗುತ್ತಿದ್ದಾರೆ. ಆದರೆ ಇದರಿಂದ ಆರೋಗ್ಯ ಹೇಗೆ ಕೆಡುತ್ತದೆ, ಇದರಿಂದಾಗುವ ಅನಾಹುತಗಳ ಶಾಲಾ ಹಂತದಲ್ಲಿಯೇ ತಿಳಿಸಬೇಕು.


ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನ ಕಾರ್ಯದರ್ಶಿ ಶಿವನಕೇರಿ ಬಸವಲಿಂಗಪ್ಪ ಮಾತನಾಡಿ, ಡಿಡಿಟಿ ದುವ್ರ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಮೂರು ಹಂತದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ, ಪಾಲಕರು ಕುಡಿಯದಂತೆ ನೋಡಿಕೊಳ್ಳಲು ಮಕ್ಕಳಲ್ಲಿ, ಮಠಾಧೀಶರ ಮೂಲಕ, ಮಹಿಳೆಯರ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಮನೆ, ಗಲ್ಲಿ, ಗ್ರಾಮಗಳಿಗೆ ತೆರಳಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಅಕ್ಟೋಬರ್ 2ರವರೆಗೆ ಮುನ್ನಡೆಯಲಿದೆ ಎಂದರು.


ಈ ಸಂದರ್ಭದಲ್ಲಿ ಯರಗುಂಟೆ ಪರಮೇಶ್ವರ ಸ್ವಾಮೀಜಿ, ಶಿರಮಗೊಂಡನಹಳ್ಳಿ ಶಿವಾನಂದ ಸ್ವಾಮೀಜಿ, ವಾಮದೇವಪ್ಪ, ಪ್ರೀತಿ ರವಿಕುಮಾರ್, ವೀಣಾ, ಆವರಗೆರೆ ಚಂದ್ರು ಮೊದಲಾದವರು ಪಾಲ್ಗೊಂಡಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *