ಸಮಾಧಿ ಮುಂದೆ ಹುಟ್ಟಿದಬ್ಬ ಆಚರಿಸಿ ಕಣ್ಣೀರಿಟ್ಟ ಗೆಳೆಯರು

ನ್ಯೂಸ್ ಡೆಸ್ಕ್

ಯಾರಾದರು ಸಾವನ್ನಪ್ಪಿದರೆ ವಾರದ ತಿಥಿ ಮಾಡಿ ಮರೆತು ಬಿಡುತ್ತೇವೆ.  ಇಲ್ಲವೇ ತಿಂಗಳು, ಎರಡು ತಿಂಗಳು ಕಣ್ಣೀರಿಟ್ಟು ಮನದಲ್ಲಿ ನೆನೆದು ಮರುಗುತ್ತಿರುತ್ತಾರೆ. ಆದ್ರೆ, ಇಲ್ಲೊಂದಷ್ಟು ಸ್ನೇಹಿತರು, ಗೆಳೆಯರು ಮೃತ ಗೆಳೆಯನ ಸಮಾಧಿ ಮುಂದೆ ಆತನ ಹುಟ್ಟಿದ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದ ಪಂಚಾಯಿತಿ ಸದಸ್ಯ ಸಣ್ಣ ಕೆಂಚಪ್ಪ (33) ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಕ್ಟೋಬರ್ 30 ಕೆಂಚಪ್ಪನ ಜನ್ಮದಿನವಾಗಿದ್ದು, ಆತನ ಸಹೋದರ ಚಿರಂಜೀವಿ ನೇತೃತ್ವದಲ್ಲಿ ಸಂಬಂಧಿಕರು, ಗೆಳೆಯರು ಮಧ್ಯ ರಾತ್ರಿ ತೆರಳಿ ಸಮಾಧಿಗೆ ಪುಷ್ಪಗಳಿಂದ ಅಲಂಕರಿಸಿ, ಸಮಾಧಿ ಮುಂಭಾಗ “WISH YOU HAPPY BIRTHADY” ಅಂತ ಪುಷ್ಪಗಳಿಂದಲೇ ಅಲಂಕರಿಸಿದ್ದು ವಿಶೇಷವಾಗಿತ್ತು.
ಸಮಾಧಿ ಸುತ್ತಲೂ ರಗೋಲಿ ಬಿಡಿಸಿ, ದೀಪಗಳನ್ನಿಟ್ಟು ಮಧ್ಯ ರಾತ್ರಿ ಪೂಜೆ ಸಲ್ಲಿಸಿದ್ದಾರೆ. ಪುನಃ ಬೆಳಗಿನ ಜಾವ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಕೆಂಚಪ್ಪನ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದ್ದಾರೆ. ಮಧ್ಯಾಹ್ನದ ನಂತರ ಮನೆ ಆವರಣದಲ್ಲಿ ಅನ್ನ ಸಂತರ್ಪಣೆ ಮಾಡಿದ್ದಾರೆ.
 ನನ್ನ ಅಣ್ಣ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾಗ ಕುಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾನೆ. ಚರಂಡಿ, ಕುಡಿಯುವ ನೀರು, ಶಾಲಾ ಕಾಂಪೌಂಡ್, ಆಶ್ರಯ ಮನೆಗಳ ನಿರ್ಮಿಸಿ ಬಡವರಿಗೆ ನೆರವಾಗಿದ್ದರು. ನಮ್ಮನ್ನು ಅಗಲಿ ವರ್ಷ ಕಳೆದರೂ ಮರೆಯಲು ಆಗುತ್ತಿಲ್ಲ. ಹಾಗಾಗಿ ಸಮಾಧಿ ಬಳಿ ಜನ್ಮ ದಿನ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಸಹೋದರ ಚಿರಂಜಿವಿ.

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *