ಛಾಯಾಗ್ರಹಕರಿಂದ ದೇಶದ ಚರಿತ್ರೆ ಉಳಿದಿದೆ

ದಾವಣಗೆರೆ;ದೇಶದ ಚರಿತ್ರೆ ಉಳಿದಿದೆ ಎಂದರೆ ಛಾಯಾಗ್ರಹಕರಿಂದ ಮಾತ್ರ ಎಂದು ಶಾಸಕ ಎಸ್.ಎ,ರವೀಂದ್ರನಾಥ್ ಹೇಳಿದರು. ನಗರದ ಕುವೆಂಪು ಕನ್ನಡ ಭವನದಲ್ಲಿಂದು ಜಿಲ್ಲಾ ಛಾಯಾಗ್ರಹಕರಣ ಸಂಘದ ವತಿಯಿಂದ ಆಯೋಜಿಸಿದ್ದ 29ನೇ ವಾರ್ಷಿಕೋತ್ಸವ ಸಮಾರಂಭ,ಸಂಭ್ರಮಾಚರಣೆ,ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.

ಉತ್ತಮ ಚಿತ್ರ ತೆಗೆಯಬೇಕಾದರೆ ಛಾಯಾಗ್ರಹಕರ ಶ್ರಮ ಬಹಳ ಇದೆ. ಮಾಧ್ಯಮಗಳು ಸಾಕಷ್ಟು ಮುಂದುವರೆದಿದೆ. ಯಾವುದೇ ಆಗಲಿ ನೈಜತೆ ಬಿಂಬಿಸುವ ಚಿತ್ರ ಸೆರಹಿಡಿಯುವುದು ಮುಖ್ಯ. ಪ್ರಸ್ತುತ ವಿದ್ಯಮಾಣಗಳನ್ನು ಗಮನಿಸಿದರೆ ಕೇವಲ ರಾಜಕಾರಣಿಗಳ ಬಗ್ಗೆ ಹೆಚ್ಚು ಒತ್ತನ್ನು ನೀಡಿ ಪೆÇೀಟೋ ತೆಗೆಯಲಾಗುತ್ತಿದೆ.

ಅದರೊಂದಿಗೆ ಉತ್ತಮವಾಗಿರುವ ಚಿತ್ರಗಳನ್ನು ತೆಗೆಯಬೇಕು. ಛಾಯಾಗ್ರಹಕರು ಒಂದು ಉತ್ತಮ ಚಿತ್ರ ತೆಗೆಯಬೇಕೆಂದರೆ ಬೆಳಗಿನಿಂದ ಸಂಜೆಯವರೆಗೂ ಕಾಯಬೇಕಾಗುತ್ತದೆ. ಹಾಗಾಗಿ ಛಾಯಾಗ್ರಹಕರಲ್ಲಿ ಶ್ರದ್ದೆ, ತಾಳ್ಮೆ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಛಾಯಾಗ್ರಹಕರು ತಮ್ಮ ವೃತ್ತಿಯನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು. ನಗರ ಪ್ರದೇಶಗಳಲ್ಲಿ ಕಸ ಮತ್ತು ಸ್ವಚ್ಚತೆ ಬಗ್ಗೆ ಒತ್ತು ನೀಡುವುದರೊಂದಿಗೆ ಗ್ರಾಮೀಣ ಭಾಗದಲ್ಲಿ ಕಂಡುಬರುವ ಸುಂದರತೆ, ಸಮಸ್ಯೆಗಳ ಕುರಿತ ಚಿತ್ರತೆಗೆಯಬೇಕು.

ಯಾವುದೇ ಘಟನೆಗಳ ಬಗ್ಗೆ ನಿಜಚಿತ್ರಣ ರೂಪದಲ್ಲಿ ಛಾಯಾಗ್ರಾಹಕರು ತಮ್ಮ ಚಿತ್ರದ ಮೂಲಕ ಕಟ್ಟಿಕೋಡುತ್ತಿರುವುದು ಉತ್ತಮ ಕೆಲಸ.ದೇಶದ ಹಿತದೃಷ್ಠಿ ಗಮನದಲ್ಲಿರಿಸಿ ಕೊಂಡು ಕೆಲಸ ಮಾಡುವುದು ಮುಖ್ಯ ಎಂದರು.
ಈ ವೇಳೆ ಹೆಚ್.ಬಿ ಮಂಜುನಾಥ್, ಸುರಭಿ ಶಿವಮೂರ್ತಿ,ಎಂ.ಮನು, ರಾಜು ಬದ್ದಿ ಇತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *