Home / Uncategorized / ಬಡತನ, ಮಗಳಿಗೆ ವರ ಸಿಗಲಿಲ್ಲ ಅಂತ ಆ ಪಾಲಕರು ಮಾಡಿದ್ದು ಕೇಳಿದ್ರೆ ನೀವು ಕಣ್ಣೀರು ಹಾಕ್ತಿರ…!

ಬಡತನ, ಮಗಳಿಗೆ ವರ ಸಿಗಲಿಲ್ಲ ಅಂತ ಆ ಪಾಲಕರು ಮಾಡಿದ್ದು ಕೇಳಿದ್ರೆ ನೀವು ಕಣ್ಣೀರು ಹಾಕ್ತಿರ…!

ಮನೆಯಲ್ಲಿ  ಕಿತ್ತು ತಿನ್ನುವ ಬಡತನ, ಮಗಳಿಗೆ ಮದುವೆ ಮಾಡಬೇಕು ಅನ್ನೋದು ಆ ಪಾಲಕರ ಕನಸಾಗಿತ್ತು. ಊರೂರು ಅಲೆದು ವರ ಹುಡುಕಿದರು ಸಿಗಲಿಲ್ಲ. ಮನೆಲಿ ಬಡತನ ಅನ್ನೋ ಕಾರಣಕ್ಕೆ ಮಗಳನ್ನು ಮದವೆ ಆಗಲು ಯಾರು ಮುಂದೆ ಬರಲಿಲ್ಲ. ಅದಕ್ಕೆ ಮನನೊಂದು ಆ ಪಾಲಕರು ಮಗಳನ್ನ ದೇವದಾಸಿ ಮಾಡಲು ಹೊರಟರು…!!

ಆಕೆಗೆ 25 ವರ್ಷ, ಮದುವೆ ವಯಸ್ಸು, ಅಪ್ಪ-ಅಮ್ಮ ಇಬ್ಬರು ಊರೂರು ಸುತ್ತಿ ವರನನ್ನು ಹುಡುಕಿದರು. ಆದ್ರೆ, ಯಾರು ಕೂಡ ಸಿಗಲಿಲ್ಲ. ಮಗಳನ್ನ ಹೇಗೆ ಸಾಕೋದು ಅಂತ ಚಿಂತೆಗೆ ಒಳಗಾಗಿ ಅವಳನ್ನ ಪಾಲಕರೇ ಅನಿಷ್ಠ ದೇವದಾಸಿ ಪದ್ಧತಿಗೆ ತಳ್ಳಲು ಮುಂದಾಗಿದ್ದರು.

ದಾವಣಗೆರೆ ಜಿಲ್ಲೆ, ಹರಪನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಪಾಲಕರು ತಮ್ಮ ಮಗಳನ್ನ ಉಚ್ಚಂಗೆಮ್ಮ ದೇವಿ ಹಬ್ಬದ ನೆಪದಲ್ಲಿ ಅನಿಷ್ಠ ಪದ್ಧತಿಗೆ ನೂಕಲು ಸಿದ್ಧತೆ ಮಾಡಿಕೊಂಡಿದ್ದರು. ಮಗಳಿಗೆ ಮುತ್ತುಕಟ್ಟಿ ದೇವದಾಸಿಯಾಗಿ ಬಿಡಲು ಮುದಾಗಿದ್ದರು. ಆಹಾರ, ಸಾಮಾಗ್ರಿ, ಹೊಸ ಬಟ್ಟೆ ಖರೀದಿಸಿದ್ದರು. ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿಕೊಂಡಿದ್ದರು.

ಅಷ್ಟರಲ್ಲಿ ದೇವದಾಸಿ ಪುನರ್ವಸತಿ ಯೋಜನೆ ಹಾಗೂ ದೇವದಾಸಿ ಮಹಿಳೆ ವಿಮೋಚನಾ ಸಂಘದ ಕಾರ್ಯಕರ್ತರು ಕಾರ್ಯಾಚರಣೆ ಮಾಡಿ ಆ ಯುವತಿಯನ್ನ ರಕ್ಷಣೆ ಮಾಡಿದ್ದಾರೆ. ಒಂದು ವೇಳೆ ಯಾರಿಗೂ ಮಾಹಿತಿ ಇಲ್ಲದೆ ಆ ಯುವತಿಗೆ ಮುತ್ತುಕಟ್ಟಿ ದೇವದಾಸಿ ಪದ್ಧತಿಗೆ ದೂಡಿದ್ದರೆ ಅವಳ ಬದುಕು ಮೂರಾಬಟ್ಟೆಯಾಗುತ್ತಿತ್ತು. ಕೊನೆ ಎಚ್ಚೆತ್ತ ಪಾಲಕರು ಪೊಲೀಸರ ಮುಂದೆ ತಪ್ಪು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.

About flashnewskannada

Check Also

ಜಗಳೂರು ತಾಲ್ಲೂಕು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಹೋರಾಟ

ಜಗಳೂರು; ಬರಪೀಡಿತ ಜಗಳೂರು ತಾಲ್ಲೂಕು ಮುಂದಿನ 10-20 ವರ್ಷಗಳ ನಂತರವಾಗಲೀಯಾದರೂ ದಾವಣಗೆರೆ ಜಿಲ್ಲೆಯಲ್ಲಿರಬಾರದು,ಒಂದು ವೇಳೆ ಇದೇ ಜಿಲ್ಲೆಯಲ್ಲಿದ್ದರೆ ಅದು ಈ …

Leave a Reply

Your email address will not be published. Required fields are marked *