Home / ಕ್ರೀಡೆ / ಕಿರಿಯರ ಸಾಧನೆ ಏನು ಗೊತ್ತಾ…..!!

ಕಿರಿಯರ ಸಾಧನೆ ಏನು ಗೊತ್ತಾ…..!!

ಬ್ಯೂರೋ ನ್ಯೂಸ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಫೈಟ್ ಕೇವಲ ಪ್ರಶಸ್ತಿಯ ಕದನವಾಗಿರಲಿಲ್ಲ. ಅದು ದಿ ವಾಲ್ ಕನಸು ಕೂಡ ಆಗಿತ್ತು. ಅಷ್ಟೆ ಅಲ್ಲ 6 ವರ್ಷಗಳಿಂದ ಟೀಂ ಇಂಡಿಯಾದ ಕಿರಿಯರು ಸಂಕಲ್ಪ ಕೂಡ ಆಗಿತ್ತು. ಅಂತೂ ಆ ಸಂಕಲ್ಪ ಈಡೇರಿತು. ಯುವಕರ ತಾಖತ್ತು ಅಲ್ಲಿ ಸಾಭಿತಾಯಿತು…


ಫೈನಲ್ ಕದನದಲ್ಲಿ ಭಾರತ ಟಾಸ್ ಸೋತರು ಕೂಡಾ ಅದ್ಭುತ ಬೌಲಿಂಗ್ ನಿಂದ ಆಸೀಸ್ ಪಡೆಯನ್ನ ಕಟ್ಟಿಹಾಕುವಲ್ಲಿ ಯಶಸ್ಸಿಯಾದ್ರು. ಉತ್ತಮ ಆರಂಭ ಪಡೆದ ಆಸೀಸ್ ಪಡೆ ಆರಂಭದಲ್ಲೇ ಹೊಡಿ ಬಡಿ ಆಟಕ್ಕೆ ಮುಂದಾಯ್ತು, ಆದ್ರೆ ಇವರ ಈ ಆಟ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟೀಂ ಇಂಡಿಯಾದ ಮಾರಕ ದಾಳಿಗೆ ಕಾಂಗರೂಸ್ ಚೇತರಿಸಿಕೊಳ್ಳಲಿಲ್ಲ..
ಟೀಂ ಇಂಡಿಯಾದ ದಾಳಿಗೆ ಮರ್ಲೋ ದಿಟ್ಟ ಉತ್ತರ ನೀಡಿದ್ರು. ಭಾರತದ ವೇಗಿಗಳಿಗೆ, ಸ್ಪಿನ್ನರ್ಸ್ ಗೆ ದಿಟ್ಟ ಉತ್ತರ ನೀಡುತ್ತಾ ಸಾಗಿದ್ರು. ಅಮೋಘ ಪ್ರದರ್ಶನ ನೀಡಿದ ಆಸೀಸ್ ಆಟಗಾರ ಅರ್ಧಶತಕ ಸಿಡಿಸಿ ಮಿಂಚಿದ.
ತಂಡಕ್ಕೆ ಆಧಾರವಾಗಿ ನಿಂತು ಫೈನಲ್ ಪಂದ್ಯದ ಹೀರೋ ಅನ್ನಿಸಿಕೊಂಡ ಮಂಜೋತ್ ಶತಕದ ಅಂಚಿನಲ್ಲಿದ್ದಾಗ ಹಾರ್ವಿಕ್ ಕೂಡ ತಾಳ್ಮೆಯ ಆಟವಾಡಿದ್ರು. ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಲೇಬೇಕೆಂಬ ಹಂಬಲದಲ್ಲಿ ಬ್ಯಾಟಿಂಗ್ ಗೆ ಇಳಿದ ಮಂಜೋತ್ ಶತಕದೊಂದಿಗೆ ಗೆಲುವಿನ ಪತಾಕೆ ಹಾರಿಸಿದ್ರು.

About flashnewskannada

Leave a Reply

Your email address will not be published. Required fields are marked *