Home / ಉಪಯುಕ್ತ ಮಾಹಿತಿ / ತುರ್ತು ರೋಗಿಗಳಿಗೆ ಡ್ರೋಣ್ ಆಂಬುಲೆನ್ಸ್, ರಾಜ್ಯದ ವಿದ್ಯಾರ್ಥಿಗಳ ಕೊಡುಗೆ ನೀವೇ ನೋಡಿ…!!

ತುರ್ತು ರೋಗಿಗಳಿಗೆ ಡ್ರೋಣ್ ಆಂಬುಲೆನ್ಸ್, ರಾಜ್ಯದ ವಿದ್ಯಾರ್ಥಿಗಳ ಕೊಡುಗೆ ನೀವೇ ನೋಡಿ…!!

ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅವಿಷ್ಕಾರಗಳಾಗಿವೆ. ಮೊದಲೆಲ್ಲ ಆಂಬುಲೆನ್ಸ್ ಗಳು ಅಂದ್ರೆ ತುರ್ತ ರೋಗಿಗಳನ್ನ ಆಸ್ಪತ್ರೆಗೆ ಕರೆತರುವ ವಾಹನಗಳಾಗಿದ್ದು, ನಂತರದ ದಿನಗಳಲ್ಲಿ ಆಂಬುಲೆನ್ಸ್ ಒಳಗಡೆಯೇ ಶೇ.30 ರಷ್ಟು ಚಿಕಿತ್ಸೆ ಕೊಡಬಹುದಾದ ಆವಿಷ್ಕಾರ ಆದವು. ಏನೆಲ್ಲ ಅವಿಷ್ಕಾರ ಆದ್ರೂ ಆಂಬುಲೆನ್ಸ್ ಗಳು ಟ್ರಾಫಿಕ್ ತಪ್ಪಿಸಿಕೊಂಡು ಹೋಗೋದು ಅಸಾಧ್ಯ. ಅದಕ್ಕಾಗಿ ಇಂಜಿನಿಯರಿಂಗ್​ ಕಾಲೇಜು ವಿದ್ಯಾರ್ಥಿಗಳು ಡ್ರೋಣ್ ಅಂಬುಲೆನ್ಸ್ ಅನ್ನ ಆವಿಷ್ಕಾರ ಮಾಡಿದ್ದಾರೆ.

ನಮ್ಮ ರಾಜ್ಯದ ವಿದ್ಯಾರ್ಥಿಗಳು ಹೈಬ್ರಿಡ್ ಮಾನವ ರಹಿತ ವೈಮಾನಿಕ ವಾಹನ ವಿನ್ಯಾಸಗೊಳಿಸಿದ್ದಾರೆ. ತುರ್ತು ರೋಗಿಗಳಿಗೆ ಇದು ಗಾಳಿ ಅಂಬುಲೆನ್ಸ್ ಆಗಿ ಸೇವೆ ಸಲ್ಲಿಸಲಿದೆ. ಬೆಂಗಳೂರಿನ ಎಂ.ವಿ. ಜಯರಾಮನ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಗೌತಮ್ ಶರ್ಮಾ ಮತ್ತು ಜೆರ್ವಿಸ್ ಅಂಥೋನಿ ಸಲ್ದಾನ ಇಂತಹದ್ದೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಇಬ್ಬರು ರೋಗಿಗಳಿಗೆ ಗಾಳಿ ಆಂಬುಲೆನ್ಸ್ ಆಗಿ ಡ್ರೋಣ್ ಕಾರ್ಯನಿರ್ವಹಿಸಲಿದೆ. ಸಂಚಾರ ದಟ್ಟಣೆ ಮತ್ತು ಅಡೆತಡೆಗಳನ್ನ ಝೂಮ್ ಮಾಡಲು ಸಾಧ್ಯವಾಗುವ ಉನ್ನತ ವೇಗದ ಹೈಬ್ರಿಡ್ ಮಾನವರಹಿತ ವಾಯು ವಾಹನ ಇದಾಗಿದೆ.

ಈ ವಾಹನವೂ ರೋಗಿಗಳಿಗೆ ತುರ್ತಾಗಿ ಬೇಕಾಗುವ ರಕ್ತದೊತ್ತಡ ಉಪಕರಣ ಮತ್ತು ಇತರೆ ವೈದ್ಯಕೀಯ ಸಾಧನಗಳನ್ನು ಸಾಗಿಸುತ್ತದೆ. ತುರ್ತಾಗಿ ಅಗತ್ಯವಿರುವ ರೋಗಿಗಳಿಗೆ ಡ್ರೋಣ್ ಆಂಬುಲೆನ್ಸ್ ವೈದ್ಯಕೀಯ ನೆರವು ಒದಗಿಸುತ್ತದೆ.

ಸದ್ಯಕ್ಕೆ ಇಂಜಿನಿಯಂರಿಂಗ್ ವಿದ್ಯಾರ್ಥಿಗಳು ಪ್ರಯೋಗಿಕವಾಗಿ 50 ಕೆಜಿ ತೂಕದ ವ್ಯಕ್ತಿಯನ್ನ ಸಾಗಿಸುವ ರೀತಿಯಲ್ಲಿ ಡ್ರೋಣ್ ವಾಹನ ತಯಾರು ಮಾಡಿದ್ದಾರೆ. ಬಾಹ್ಯಾಕಾಶಗಳ ನಿರ್ಬಂಧದ ಪ್ರಕಾರ ಒಬ್ಬ ವ್ಯಕ್ತಿಯು ಮಲಗುವ ಸ್ಥಿತಿಯಲ್ಲಿರಬೇಕು. ಅದನ್ನ ಉನ್ನತೀಕರಿಸುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

2018 ಏಪ್ರಿಲ್ ಒಳಗೆ ವಿಶೇಷ ಡ್ರೋಣ್ ನಿರ್ಮಾಣ ಮಾಡುತ್ತೇವೆ. ಆ ಡ್ರೋಣ್ ಅನ್ನು ಮೊದಲು ನಗರದಲ್ಲಿ ಅಂಗಾಗ ರವಾನೆಗೆ ಬಳಸಲಾಗುತ್ತದೆ. ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತದೋ ನೋಡಿಕೊಂಡು ಮುಂದಿನ ಯೋಜನೆ ರೂಪಿಸುತ್ತೇವೆ ಎನ್ನುತ್ತಾರೆ ಗೌತಮ್ ಮತ್ತು ಜೆರ್ವಿಸ್.

About flashnewskannada

Check Also

ಈ ಫೋಟೋ ಸೆರೆಹಿಡಿದ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ..!

ನ್ಯೂಸ್ ಡೆಸ್ಕ್ : ಈ ಫೋಟೋವನ್ನು  ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದವರು ಸೌಥ್ ಆಫ್ರಿಕಾದ ಖ್ಯಾತ ಛಾಯಾಗ್ರಾಹಕ ಕೆವಿನ್ ಕಾರ್ಟರ್. …

Leave a Reply

Your email address will not be published. Required fields are marked *