ಮಲೇಬೆನ್ನೂರು ಗಾಂಧಿಹಾಲ್ ಸಾರ್ವಜನಿಕ ಗ್ರಂಥಾಲಯವಾಗಿಸಲು ಮನವಿ

ದಾವಣಗೆರೆ; 1927 ರ ಆಗಸ್ಟ್ 14 ರಂದು ಮಹಾತ್ಮಾ ಗಾಂಧಿಯವರು ಮಲೇಬೆನ್ನೂರಿಗೆ ಭೇಟಿ ನೀಡಿದ ಸ್ಥಳ ಗಾಂಧಿ ಹಾಲ್‍ನ್ನು ಸಾರ್ವಜನಿಕರ ಗ್ರಂಥಾಲಯವನ್ನಾಗಿ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಆಗ್ರಹಿಸಿದರು.
ಜಿಲ್ಲಾಡಳಿತದ ವತಿಯಿಂದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂಟಪ, ಮಹಾನಗರಪಾಲಿಕೆ ಆವರಣ ಇಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.


ಮಹಾತ್ಮಾ ಗಾಂಧೀಜಿಯವರು 19 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. 1915 ರ ಮೇ 18 ಕ್ಕೆ ಮೊಟ್ಟಮೊದಲ ಬಾರಿಗೆ ದಾವಣಗೆರೆಗೆ ಭೇಟಿ ನೀಡಿದ್ದರು. 1927 ರ ಆ.11 ರಂದು ಮಹಿಳಾ ಅಧಿವೇಶನಕ್ಕೆ ಹಾಗೂ 1927 ಕ್ಕೆ ಕಾಲ್ನಡಿಗೆಯಲ್ಲಿ ಶಿವಮೊಗ್ಗ ತೆರಳುವ ಮಾರ್ಗದಲ್ಲಿ ಮಲೆಬೆನ್ನೂರಿಗೆ ಭೇಟಿ ನೀಡುತ್ತಾರೆ. ಆ ಸ್ಥಳವು ಸುಮಾರು 2.36 ಗುಂಟೆ ಪ್ರದೇಶದಲ್ಲಿದ್ದು ಅದನ್ನು ಗಾಂಧಿ ಹಾಲ್ ಎಂದೇ ಕರೆಯಲಾಗುತ್ತದೆ. ಅಲ್ಲಿ ನಿರಂತರ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿದ್ದು, ಇದೀಗ ಆ ಸ್ಥಳವನ್ನು ಸಾರ್ವಜನಿಕರ ಗ್ರಂಥಾಲಯವನ್ನಾಗಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇನೆ ಎಂದರು.

ಭಾರತದ ಎರಡನೇ ಪ್ರಧಾನ ಮಂತ್ರಿಯಾದ ಶಾಸ್ತ್ರೀಜಿಯವರ ಜನ್ಮದಿನಾಚರಣೆಯೂ ಇಂದೇ ಆಗಿದ್ದು, ಇವರು ಅತ್ಯಂತ ಸರಳ ಮತ್ತು ಸ್ವಾಭಿಮಾನಿ ನಾಯಕರಾಗಿದ್ದು, ರೈತರ ಸ್ಥಿತಿಗತಿಗಳನ್ನು ಸುಧಾರಿಸುವ ಹೆಜ್ಜೆಯಾಗಿ ಜೈ ಜವಾನ್ ಜೈಕಿಸಾನ್ ಎಂಬ ಘೋಷವಾಕ್ಯದ ಮೂಲಕ ಪ್ರಸಿದ್ದಿ ಹೊಂದಿದರು. ಇಂತಹ ಮಹಾನ್ ಚೇತನಗಳ ಬಗ್ಗೆ ಅವಲೋಕಿಸಿ ಅವರ ಕನಿಷ್ಟ ತತ್ವಾದರ್ಶಗಳನ್ನಾದರೂ ಅಳವಡಿಸಿಕೊಂಡು ಸಾಗಬೇಕಿದೆ.


ಧರ್ಮ ಗ್ರಂಥ ಪಠಣೆ : ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶಾಲೆಯ ಮಕ್ಕಳು ಶಾಂತಿ, ಸೌಹಾರ್ಧತೆ ಮತ್ತು ಪ್ರೀತಿಯನ್ನು ಸಾರುವ ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಧರ್ಮ ಗ್ರಂಥಗಳ ಕೆಲವು ಬೋಧನೆಗಳನ್ನು ಮಾಡಿದರು. ಮೇಘಾ ಮತ್ತು ಅನುಷಾ ಭಗವದ್ಗೀತೆಯ ಕೆಲವು ಶ್ಲೊಕ ಪಠಿಸಿದರು. ರಿದಾ ಅಜ್ಮೈನ್ ಮತ್ತು ನಿದಾ ಅಹ್ಮದ್ ಕುರಾನ್ ನ ಕೆಲವು ಸಾಲುಗಳನ್ನು ಪಠಿಸಿದರು ಹಾಗೂ ಅನುಷಾ ಗ್ರೇಸ್ ಅವರು ಬೈಬಲ್‍ನ ಸಾಲುಗಳನ್ನು ಪಠಿಸಿದರು.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀಜಿಯವರ ಅಪರೂಪದ ಛಾಯಾಚಿತ್ರ ಪ್ರದರ್ಶನ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಬೊಳುವಾರು ಮಹಮದ್ ಕುಂಞ ವಿರಚಿತ ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ ಎ ರವೀಂದ್ರನಾಥ್, ಜಿ.ಪಂ ಅಧ್ಯಕ್ಷೆ ಕೆ.ಆರ್ ಜಯಶೀಲಾ, ಪರಿಷತ್ ಸದಸ್ಯಅಬ್ದುಲ್ ಜಬ್ಬಾರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್‍ಸಾಬ್, ಪಾಲಿಕೆ ಸದಸ್ಯರಾದ ಮಂಜುಳಮ್ಮ, ಹೆಚ್.ಜಿ.ಉಮೇಶ್, ತಿಪ್ಪಣ್ಣ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ಪಿ ಆರ್.ಚೇತನ್, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರ್‍ಸ್ವಾಮಿ, ಆಯುಕ್ತ ಮಂಜುನಾಥ ಬಳ್ಳಾರಿ, ತಹಶೀಲ್ದಾರ್ ಸಂತೋಷ್‍ಕುಮಾರ್ ಇತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *