ಮಲೇಷಿಯ ಅಥ್ಲೆಟಿಕ್ ಗೆ ಹಿರಿಯ ನಾಗರೀಕರ ಆಯ್ಕೆ

ದಾವಣಗೆರೆ ಮಲೇಷಿಯದಲ್ಲಿ ಅ. 13-14 ರಂದು ನಡೆಯಲಿರುವ ಮಾಸ್ಟರ್ ಆಫ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ನಗರದ ಹಿರಿಯ ನಾಗರಿಕರು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಲಕ್ಷ್ಮಣ್ ರಾವ್ ಸಾಳಂಕಿ, ನಾಗರಾಜ್ ತಾವರಕೆರೆ ಹಾಗೂ ಗುರುಶಾಂತಪ್ಪ ಅವರುಗಳು ನಾಳೆ ತೆರಳಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯನ್ ನ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಹೇಳಿದರು.


ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು ಈ ಹಿರಿಯ ನಾಗರಿಕರು ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯ್ಕೆ ಮಾಡಲಾಗಿದೆ. ಇವರುಗಳು ಹಲವಾರು ಕ್ರೀಡಾಪಟುಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ಪಡೆದು ನಗರಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು. ಅಂತರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣ್ ರಾವ್ ಸಾಳಂಕಿ ಮಾತನಾಡಿ, ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದ್ದೇನೆ.

5 ಕಿ.ಮೀ ಓಟ, ನಡಿಗೆ, 1500 ಮೀ ಹಾಗೂ 800 ಓಟದಲ್ಲಿ ಭಾಗವಹಿಸಿ ಸುಮಾರು 60 ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದೇನೆ. ಆದರೆ ರಾಜ್ಯ ಸರ್ಕಾರ ನಮಗೆ ಯಾವುದೇ ರೀತಿಯ ಸಹಾಯಸ್ತ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬ ಕ್ರೀಡಾಪಟು ಗುರುಶಾಂತಪ್ಪ ಮಾತನಾಡಿ, ಶಾಟ್ ಫುಟ್. ಲಾಂಗ್ ಜಂಪ್, ಟ್ರಿಪಲ್ ಜಂಪ್, ಹ್ಯಾಮರ್ ತ್ರೂ ಮತ್ತಿತರ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ಹಿರಿಯರಿಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ನಮ್ಮ ಉತ್ಸಾಹಕ್ಕೆ ಸಹಕಾರ ಬೇಕಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಎಂ.ರವಿ, ಅಂಬುಜಾ ಇದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *