Home / Uncategorized / ಜಗಳೂರು ತಾಲ್ಲೂಕು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಹೋರಾಟ

ಜಗಳೂರು ತಾಲ್ಲೂಕು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಹೋರಾಟ

ಜಗಳೂರು; ಬರಪೀಡಿತ ಜಗಳೂರು ತಾಲ್ಲೂಕು ಮುಂದಿನ 10-20 ವರ್ಷಗಳ ನಂತರವಾಗಲೀಯಾದರೂ ದಾವಣಗೆರೆ ಜಿಲ್ಲೆಯಲ್ಲಿರಬಾರದು,ಒಂದು ವೇಳೆ ಇದೇ ಜಿಲ್ಲೆಯಲ್ಲಿದ್ದರೆ ಅದು ಈ ತಾಲೂಕಿಗೆ ಮರಣಶಾಸನ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತರು ಹಾಗೂ ಹೋರಾಟಗಾರರಾದ ದೊಣೆಹಳ್ಳಿ ಗುರುಮೂರ್ತಿ ಹೇಳಿದರು.


ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಜಗಳೂರು ತಾಲ್ಲೂಕು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಹೋರಾಟ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಗಳೂರು ತಾಲ್ಲೂಕು ಕಳೆದ 70 ವರ್ಷಗಳ ಅವಧಿಯಲ್ಲಿ ಸುಮಾರು 40 ವರ್ಷಗಳ ಕಾಲ ಬರಗಾಲಕ್ಕೆ ತುತ್ತಾಗಿದೆ.ತಾಲ್ಲೂಕಿನ ಬಿಳಿಚೋಡು ಗಡಿ ದಾಟಿದ ನಂತರ ದಾವಣಗೆರೆ,ಚನ್ನಗಿರಿ,ಹೊನ್ನಾಳಿ, ಹರಿಹರ ನೀರಾವರಿ ಪ್ರದೇಶಾಗಳಾಗಿವೆ.

ಬರದ ತಾಲೂಕಿನ ಕೂಲಿಕಾರರ,ಕಾರ್ಮಿಕರ, ವಿದ್ಯಾರ್ಥಿಗಳ,ರೈತರ,ದಲಿತರ ಕಷ್ಟಗಳು ಆ ಭಾಗದವರಿಗೆ ಗೊತ್ತಿಲ್ಲ.ಇತ್ತೀಚಿನ 30 ವರ್ಷಗಳಲ್ಲಿ ಕೇವಲ 9 ವರ್ಷ ಮಾತ್ರ ಜಗಳೂರು ತಾಲ್ಲೂಕಿನಲ್ಲಿ ಸಾದಾರಣ ಮಳೆ ಬಿದ್ದಿದೆ ಎನ್ನುವ ಅಂಶ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಈ ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಂಡು ಸುಮಾರು 20ವರ್ಷಗಳಾಗಿದೆ,ಇದುವರೆಗೂ ಈ ಬರಪೀಡಿತ ತಾಲ್ಲೂಕಿನ ರೈತರು,ಕಾರ್ಮಿಕರು, ವಿದ್ಯಾರ್ಥಿಗಳಿಗೆ ಏನೂ ಪ್ರಯೋಜನ ವಾಗಿಲ್ಲ,ಯಾವುದೇ ಸವಲತ್ತುಗಳು ಸಮರ್ಪಕವಾಗಿ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ತಾಲೂಕಿನ ಎಲ್ಲಾ ಹಂತದ ಜನಪ್ರತಿನಿಧಿಗಳು ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ,ದಾವಣಗೆರೆ ಜನಪ್ರತಿನಿಧಿಗಳ ಎದುರು ಅಸಹಾಯಕ ಸ್ಥಿತಿಯಲ್ಲಿರುವ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ಸಭೆಯಲ್ಲಿ ಮುಖಂಡರಾದ ತಿಮ್ಮಾರೆಡ್ಡಿ,ಸಿ.ತಿಪ್ಪೇಸ್ವಾಮಿ,ಯಾದವರೆಡ್ಡಿ,ತಾ.ಪಂ.ಸದಸ್ಯ ಕುಬೇಂದ್ರಪ್ಪ,ವಿಠ್ಠಲಶ್ರೇಷ್ಟಿ ಸೇರಿದಂತೆ ಮತ್ತಿತರರು ಹಾಜರಿದ್ದರು.

About flashnewskannada

Check Also

ಕಣ್ಣಿರಿಡುವುದು ಇದು ನನ್ನ ಸಹಜ ಕ್ರಿಯೆ ಇದಕ್ಕೆ ಬಣ್ಣವಿಲ್ಲ: ಎಚ್ಡಿಕೆ

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ನಾನು ನೋವಿನ ಸಂದರ್ಭದಲ್ಲಿ ಭಾವುಕನಾಗುತ್ತೇನೆ.’ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕಣ್ಣೀರಿನ ಪ್ರಕರಣಕ್ಕೆ …

Leave a Reply

Your email address will not be published. Required fields are marked *