Home / ಸುದ್ದಿ / ಜಿಲ್ಲೆ / ಆಸ್ಪತ್ರೆಯಲ್ಲಿ ಕಾಂಡೋಮ್ ಕೊಡದಿದ್ದಕ್ಕೆ ಅವನು ಮಾಡಿದ್ದೇನು ಗೊತ್ತಾ…!! ಕೇಳಿದ್ರೆ ಶಾಕ್ ಆಗ್ತಿರಿ

ಆಸ್ಪತ್ರೆಯಲ್ಲಿ ಕಾಂಡೋಮ್ ಕೊಡದಿದ್ದಕ್ಕೆ ಅವನು ಮಾಡಿದ್ದೇನು ಗೊತ್ತಾ…!! ಕೇಳಿದ್ರೆ ಶಾಕ್ ಆಗ್ತಿರಿ

ಏಡ್ಸ್ ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಪ್ರಚಾರ ಮಾಡೋದ್ರ ಜೊತೆಗೆ ಸರ್ಕಾರಿ ಆಸ್ಪತ್ರೆ, ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಕಾಂಡೋಮ್ ಕೂಡ ವಿತರಿಸಲಾಗತ್ತೆ. ಹೀಗೆ ಉಚಿತವಾಗಿ ಕಾಂಡೋಮ್ ಕೊಡೋದ್ರಿಂದ ಸರ್ಕಾರಿ ಆಸ್ಪತ್ರೆಯ ನರ್ಸ್ ಒಬ್ಬರು ಪೇಚೆಗೆ ಸಿಲುಕಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸರ್ಕಾರಿ ನೌಕರನೊಬ್ಬ ಕುಡಿದ ಅಮಲಿನಲ್ಲಿ ಆರೋಗ್ಯ ಕೇಂದ್ರಕ್ಕೆ ಬಂದು ಕಾಂಡೋಮ್ ಕೊಡುವಂತೆ ನರ್ಸ್ ನನ್ನು ಕೇಳಿದ್ದಾನೆ‌‌. ಆಗ ಆಸ್ಪತ್ರೆಯಲ್ಲಿದ್ದ ನರ್ಸ್ ಅಲ್ಲಿ ಬಾಕ್ಸ್ ನಲ್ಲಿದೆ ತೆಗೆದುಕೊಂಡು ಹೋಗಿ ಅಂತ ಹೇಳಿದ್ದಾಳೆ.

ಆದ್ರೆ, ಆ ವ್ಯಕ್ತಿ ಇಲ್ಲ ನೀವೇ ಬಂದು ತೆಗೆದುಕೊಂಡಿ ಅಂತ ಪಟ್ಟು ಹಿಡಿದು ಗಲಾಟೆ ಮಾಡಿದ್ದಾನೆ‌‌. ಆಗ ನರ್ಸ್ ತನ್ನ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಆಸ್ಪತ್ರೆಗೆ ಬಂದ ನರ್ಸ್ ಗಂಡ ಆ ವ್ಯಕ್ತಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾನೆ.

ಅಂದ ಹಾಗೆ ಕಾಂಡೋಮ್ ಗಾಗಿ ಗಲಾಟೆ ಮಾಡಿದ ವ್ಯಕ್ತಿ ಕೆಎಸ್ಆರ್ಟಿಸಿ ನೌಕರ ಮಂಜುನಾಥ್. ಈಗ ಮಂಜುನಾಥ್ ಮೇಲೆ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *