ಊರೂರು ಸುತ್ತುತ್ತಿರುವ ಜೋಕುಮಾರಸ್ವಾಮಿ

ಜಗಳೂರು;ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವಂತಹ ಅನೇಕ ಆಚರಣೆಗಳು ನೋಡುತ್ತೆವೆ ಅದರಂತೆ ಜಗಳೂರು ತಾಲ್ಲೂಕಿನಲ್ಲೂ ಜೋಕುಮಾರ ಸ್ವಾಮಿಯ ಜಾತ್ರೆ ಅಥವಾ ಹಳ್ಳಿಯ ಭೇಟಿ ಎಂಬುದು ತುಂಬಾ ಅಚ್ಚುಕಟ್ಟಾಗಿ ಜನಪದ ಆಚಾರ ವಿಚಾರಗಳನ್ನು ಒಳಗೊಂಡ ಗೊಂಡಿರುವ ಒಂದು ಹಬ್ಬ .


ಜೋಕುಮಾರ ಸ್ವಾಮಿಯ ಬಾರಿಕ ವಂಶಸ್ಥರ ಕೈಯಲ್ಲಿ ಹುಟ್ಟಿ ಊರೂರು ಸುತ್ತಿ ಏಳು ದಿನಗಳಾದ ಮೇಲೆ ಬೇಗರಾ ಕೈಯಲ್ಲಿ ಸಾಯುತ್ತಾನೆ
*ಬೇಗರಾ ಕೈಯಲ್ಲಿ ಸತ್ತು ಅಗಸರ ಮನೆಯಲ್ಲಿ ದಿವಸವನ್ನು ಮಾಡಿ ತಿಥಿ ಸಂಸ್ಕಾರವನ್ನು ಮಾಡಲಾಗುತ್ತದೆ .


*ಹುಣ್ಣಿಮೆಗೆ ಏಳು ದಿನವಿರುವಂತೆ ಬೀಗರ ಕೈಯಲ್ಲಿ ಸಾಯ್ತಾನೆ ಜೋಕುಮಾರ ಸ್ವಾಮಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಈಡೇರಿಸುತ್ತಾನೆ ಎರಡು ತಂಡಗಳಾಗಿ ಎರಡು ದಿಕ್ಕುಗಳಿಗೆ ಏಳು ದಿನಗಳಂತೆ ಸಂಚರಿಸಿ ಭಕ್ತರ ಮನೆಯಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸಿದ್ದೇವೆ ಸ್ವಾಮಿಯ ಅಂತಿಮ ತಿಥಿ ಅಥವಾ ದಿವಸವನ್ನು ಆಗಸರ ಮಾಡಿ ಲೋಕ ಕಲ್ಯಾಣ ವಾಗಲೆಂದು ಬಯಸುವುದು ಜಾನಪದ ಸಂಸ್ಕೃತಿಯ ಆಚಾರ ವಿಚಾರ ಸಂಪ್ರದಾಯದಂತೆ ಇಂಥ ಹಬ್ಬಗಳು ಇಂದಿಗೂ ಕೂಡ ಹಳ್ಳಿಗಾಡಿನ ಸೊಬಗಿನಲ್ಲಿ ಜೀವಂತವಾಗಿರುವುದು ಹೆಮ್ಮೆಯ ಸಂಗತಿ ಎಂದು ಸ್ಥಳೀಯರು ಹೇಳುತ್ತಾರೆ.


ಸಂಪ್ರದಾಯದ ಪ್ರಕಾರ ಗಣೇಶ ಹೋದ ಮೂರು ದಿನಗಳಲ್ಲಿ ಬೆಳಗ್ಗೆ ಎದ್ದು ನಮ್ಮ ಹಿರಿಯರು ಸ್ನಾನ ಮಾಡಿಕೊಂಡು ಹುತ್ತದ ಮಣ್ಣನ್ನು ತಂದು ನಮ್ಮ ಮನೆತನದ ಹಿರಿಯರು ಗಣೇಶನ ಮೂರ್ತಿಯ ಪ್ರತಿಷ್ಠಾಪನೆ ತರಹ ಜೋಕುಮಾರ ಸ್ವಾಮಿಯ ಪ್ರತಿಷ್ಠಾಪನೆ ಮಾಡುತ್ತಾರೆ
ಸ್ವಾಮಿಗೆ ಬಾಳೆ ಎಲೆಯನ್ನು ಸುಟ್ಟು ಬಣ್ಣದ ರೀತಿಯಲ್ಲಿ ತಯಾರು ಮಾಡಿ ಬೆಳ್ಳಿ ಒಡೆಯುವ ಗಳನ್ನು ತೊಡಿಸಿ ಬೇವಿನ ಸೊಪ್ಪನ್ನು ಓದಿಸಿ ಹಾಗೂ ಹೂವುಗಳಿಂದ ಬುಟ್ಟಿಯಲ್ಲಿ ಅಲಂಕಾರ ಮಾಡಿ ಪ್ರಥಮವಾಗಿ ಹಳ್ಳಿಯ ಗೌಡನ ಮನೆಗೆ ಮೊದಲೇ ಅಂದರೆ ರಾತ್ರಿ ಹೋಗಿ ವಿಷಯವನ್ನು ತಿಳಿಸಿ ಬರುತ್ತಾರೆ .


*ಗೌಡರು ಜೋಕುಮಾರಸ್ವಾಮಿಯ ಬರುವಿಕೆಗಾಗಿ ಪ್ರತಿಯೊಂದನ್ನು ರೆಡಿ ಮಾಡಿರುತ್ತಾರೆ ನಮ್ಮ ಮೂರು ಮನೆಯ ಮಕ್ಕಳು ಮಹಿಳೆಯರು ಸೇರಿ ಒಂದು ತಂಡ ಜಗಳೂರು ಪಟ್ಟಣದ ಎಲ್ಲ ಮನೆಗಳಿಗೆ ಭೇಟಿ ಕೊಡುತ್ತೇವೆ ಜಗಳೂರು ಪಟ್ಟಣದಲ್ಲಿ ಮತ್ತೊಂದು ತಂಡ ಹಳ್ಳಿಯ ಎರಡು ದಿಕ್ಕುಗಳಿಗೆ ಸಂಚರಿಸಿ ಪ್ರತಿಯೊಂದು ಹಳ್ಳಿಗೂ ಭೇಟಿಅವರು ಕೊಡುವ ದವಸ ಧಾನ್ಯಗಳನ್ನು ಸಂಗ್ರಹಿಸಿಕೊಂಡು ಬರುವುದು ವಾಡಿಕೆ ಕೊಡುವುದು ವಾಡಿಕೆ .


ನಮ್ಮ ಹಿರಿಯರು ನಮ್ಮ ತಂದೆ ತಂದೆಯ ಅಪ್ಪಂದಿರು ಮೂರು ಜನ ಅವರಲ್ಲಿ ಮೊದಲಿಗರು ರಾಮಣ್ಣ ಅಜ್ಜಪ್ಪ ಯಲ್ಲಪ್ಪ ಈ ವಂಶದ ಮೂರು ಮನೆಯಲ್ಲಿ ಜೋಕುಮಾರ ಸ್ವಾಮಿ ಹುಟ್ಟುವ ಪ್ರತಿ ವರ್ಷವೂ ಸಹ ಮೂರು ಜನ ಸಹೋದರರ ಮನೆಯಲ್ಲಿ ವರ್ಷಕ್ಕೆ ಒಬ್ಬರಂತೆ ಮೂರು ಜನರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ
ಜೋಕುಮಾರಸ್ವಾಮಿಯನ್ನು ಮಾಡುವ ಉದ್ದೇಶವಿಷ್ಟೇ ಜೋಕುಮಾರಸ್ವಾಮಿಯ ಪೂಜೆಯನ್ನು ಮಾಡಿದರೆ ಮಳೆಯಂತೂ ಬರುವುದು ನಿಶ್ಚಿತ ಎಂಬ ನಂಬಿಕೆಯಿದೆ ಸುಮಾರು ಏಳು ದಿನಗಳ ಸಂಚರಿಸಿ ಹುಣ್ಣಿಮೆಗೆ ಒಂದು ದಿನ ಬಾಕಿ ಇರುವಂತೆ ತಮ್ಮ ಹೊಲಗಳಲ್ಲಿ
ಬೆಳೆದಿರುವ ಬೆಳೆಗಳನ್ನು ತಂದು ಬೇಯಿಸಿ ರೈತರು ತಮ್ಮ ಹೊಲಗಳಿಗೆ ಹಾಕುತ್ತಾರೆ ಸರ್ಗ ಹಾಕಿ ಒಂದು ದಿನ ಆದ ಮೇಲೆ ಹಳ್ಳಿಗಾಡಿನಲ್ಲಿ ಅಳಲು ಹಬ್ಬವನ್ನು ಆಚರಣೆಹಳ್ಳಿಗಳಲ್ಲಿ ಇಂದಿಗೂ ಜಾನಪದ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯಗಳನ್ನು ಮುಂದುವರಿಸುತ್ತಿರುವುದು ಕಾಣಸಿಗುತ್ತದೆ.


ಇಂದಿಗೂ ಕೂಡ ಜಗಳೂರು ತಾಲ್ಲೂಕಿನಲ್ಲಿ ಜೋಕುಮಾರ ಸಂಪ್ರದಾಯವನ್ನು ಮುಂದುವರಿಸಿದ ಬರುತ್ತಿರುವ ಮಹಿಳೆಯರು ಗೌರಮ್ಮ ನೀಲಮ್ಮ ಸಾವಿತ್ರಮ್ಮ ಸಾಕಮ್ಮ ರೇಖಾ ಜೀವಿತ ಅಂಬಿಕಾ ಎಂಬುವ ಈ ಮೂರು ಸಹೋದರರ ವಂಶಸ್ಥರ ಸೊಸೆಯಂದಿರು ಇಂದಿಗೂ ಕೂಡ ಇಂತಹ ಸಂಪ್ರದಾಯವನ್ನು ಮುಂದುವರಿಸುತ್ತಾ ಬರುತ್ತಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *