ಕಸಾಪ ಸಮಾನ ಮನಸ್ಕ ವೇದಿಕೆಗೆ ಸಂದ ಜಯ

ದಾವಣಗೆರೆ; ಕನ್ನಡ ಸಾಹಿತ್ಯ ಪರಿಷತ್ ಅಧಿಕಾರಾವಧಿ ವಿಸ್ತರಣೆ ತಿರಸ್ಕಾರಗೊಂಡಿದೆ. ಇದು ಕಸಾಪ ಸಮಾನ ಮನಸ್ಕ ವೇದಿಕೆಯ ಹೋರಾಟಕ್ಕೆ ದೊರೆತ ಜಯ ಎಂದು ವೇದಿಕೆಯ ಆರ್.ಶಿವಕುಮಾರಸ್ವಾಮಿ ಕುರ್ಕಿ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಸಾಪ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆಗಾಗಿ ಬೈಲಾ ತಿದ್ದುಪಡಿ ಮಾಡಿಕೊಂಡಿದ್ದ ಹಾಲಿ ಕಸಾಪ ಸಮಿತಿ ನಿರ್ಣಯವನ್ನು ಸಂಘ ಸಂಸ್ಥೆಗಳ ಉಪನೊಂದಣಿ ನಿಬಂಧಕರು ಅಸಿಂಧುಗೊಳಿಸಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ.

Jpeg

ಕಸಾಪ ರಾಜ್ಯಾಧ್ಯಕ್ಷರು ಅಧಿಕಾರಶಾಹಿತನ ತೋರುತ್ತಿದ್ದಾರೆ. ತಮ್ಮ ಆಡಳಿತದವಧಿಯಲ್ಲಿ ಯಾವುದೇ ಸಾಹಿತ್ಯ ಕಮ್ಮಟಗಳು, ವಿಚಾರ ಸಂಕಿರಣಗಳನ್ನು ನಡೆಸಿಲ್ಲ, ಕನ್ನಡ ನೆಲ, ಜಲ, ಭಾಷೆಗೆ ಕುತ್ತು ಬಂದಾಗ ಹೋರಾಟ ನಡೆಸಿಲ್ಲ, ಆದರೆ ಅಧಿಕಾರ ನಡೆಸಲು ಮಾತ್ರ ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ 6 ತಿಂಗಳಿನಿಂದ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಸಮಯ ಕಳೆಯುತ್ತಿದ್ದಾರೆ ಹೊರತು ಯಾವುದೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಸಾಹಿತ್ಯ ಪರಿಷತ್ ಒಂದು ರೀತಿ ಸತ್ತ ಪರಿಷತ್ ನಂತಾಗಿದೆ.

ನಾವು ಸಹ ಆರು ತಿಂಗಳ ಹಿಂದೆಯೇ ರಾಜ್ಯದಲ್ಲೇ ಮೊದಲ ಬಾರಿಗೆ ಅಧ್ಯಕ್ಷರ ಅಧಿಕಾರವಧಿ ಪ್ರಶ್ನಿಸಿ ಸಮಾನ ಮನಸ್ಕರ ವೇದಿಕೆ ಹುಟ್ಟುಹಾಕಿ ಕಸಾಪ ಉಳಿಸಿ ಧರಣಿ ಸತ್ಯಾಗ್ರಹ ನಡೆಸಿದ್ದೇವು. ಕೋಟಾದಲ್ಲಿ ನಡೆಸಲುದ್ದೇಶಿಸಿ ಕಸಾಪ ವಿಶೇಷ ಸಭೆಯನ್ನು ರದ್ದುಗೊಳಿಸಲು ಉಚ್ಚನ್ಯಾಯಾಲಯದ ಮೊರೆ ಹೋಗಿದ್ದವು.ಸಮಯಾಭಾವದ ಕಾರಣ ನ್ಯಾಯಾಧೀಶರ ಸೂಚನೆ ಮೇರೆಗೆ ಜಿಲ್ಲಾ ಸಂಘ ಸಂಸ್ಥೆಗಳ ಉಪನಿಬಂಧಕರ ನೊಂದಣಿ ಕಚೇರಿಗೆ ನ್ಯಾಯಕ್ಕಾಗಿ ಧಾವೆ ಹೂಡಲಾಗಿತ್ತು. ಅದರಂತೆ ಹಲವು ಬಾರಿ ವಿಚಾರ ನಡೆಸಿದ ನೊಂದಣಾಧಿಕಾರಿಗಳು ಅಧ್ಯಕ್ಷರ ಅಧಿಕಾರದ ಅವಧಿಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸಿ ಆದೇಶಿಸಿದ್ದಾರೆ ಎಂದರು.

ಸಾಹಿತ್ಯ ಸಮ್ಮೇಳನ ರದ್ದುಗೊಳಿಸಲು ಮನವಿ
ಕೊಡಗು ಜಿಲ್ಲೆಯಲ್ಲಿ ಭೀಕರ ನೆರೆಹಾವಳಿಯಿಂದ ಜನತೆ ತತ್ತರಿಸಿದ್ದಾರೆ. ಆದ್ದರಿಂದ ಈ ಬಾರಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಧಾರವಾಡದಲ್ಲಿ ನಡೆಸಲುದ್ದೇಶಿಸಿರುವ 84ನೇ ಸಾಹಿತ್ಯ ಸಮ್ಮೇಳನವನ್ನು ರದ್ದುಗೊಳಿಸಬೇಕು. ಹಾಗೂ ಅದಕ್ಕೆ ವಿನಿಯೋಗಿಸುವ ಹಣವನ್ನು ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ರೇವಣ್ಣ ಬಳ್ಳಾರಿ, ವಿನಯ್ ಕುಮಾರ್ ಎಸ್.ಹೆಚ್.ಸಹುಕಾರ್, ಎ.ಹೆಚ್.ವಿವೇಕಾನಂದಸ್ವಾಮಿ, ದಾಗಿನಕಟ್ಟೆ ಪರಮೇಶ್ವರಪ್ಪ, ಶಿವಯೋಗಿ ಹಿರೇಮಠ್, ರಾಜೇಂದ್ರಪ್ರಸಾದ್ ನೀಲಗುಂದ ಇದ್ದರು.

ತೀರ್ಪಿಗೆ ಬದ್ದರಾಗಿ ಅಧಿಕಾರ ಬಿಡಲಿ
ಅಧ್ಯಕ್ಷರಾದವರು ಅವಿವೇಕತನದಿಂದ ವರ್ತಿಸಬಾರದು. ತೀರ್ಪಿಗೆ ಬದ್ದವಾಗಿ ಅಧಿಕಾರ ಬಿಟ್ಟುಕೊಡಬೇಕು. ಬೈಲಾ ಪ್ರಕಾರ ನಡೆದುಕೊಳ್ಳಬೇಕು. ಸೆಪ್ಟೆಂಬರ್ 1 ರಂದು ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅಜೀವ ಸದಸ್ಯರೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿದ್ದೇವೆ. ಈಗಾಗಲೇ ರಾಜ್ಯಾಧ್ಯಕ್ಷರು ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ಅವರಿಗೆ ತಾತ್ಕಾಲಿಕವಾಗಿ ತಡೆಯಾಜ್ಞೆ ದೊರೆಯಬಾರದೆಂಬ ಉದ್ದೇಶದಿಂದ ನಾವು ಸಹ ಕೆಎಟಿಗೆ ಅರ್ಜಿ ಸಲ್ಲಿಸಲಿದ್ದೇವೆ. ಅವರು ವಾಮಮಾರ್ಗ ಅನುಸರಿಸುವುದನ್ನು ತಡೆಯಬೇಕೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
-ಆರ್.ಶಿವಕುಮಾರಸ್ವಾಮಿ ಕುರ್ಕಿ
ಕಸಾಪ ಸಮಾನ ಮನಸ್ಕರ ವೇದಿಕೆ
ದಾವಣಗೆರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *