ನವೆಂಬರ್ ತಿಂಗಳು ಪೂರ್ಣ ಕನ್ನಡಚಿತ್ರ ಪ್ರದರ್ಶಿಸಲು ಒತ್ತಾಯ

ದಾವಣಗೆರೆ;ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ನಗರದ ಚಿತ್ರಮಂದಿರಗಳಲ್ಲಿ ನವೆಂಬರ್ 1 ರಿಂದ 30 ರವರೆಗೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕೆಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.ಸುದ್ದಿಗೋಷ್ಟಿಯಲ್ಲಿಂದು ಈ ಕುರಿತು ಮಾತನಾಡಿದ ಮುಖಂಡರಾದ ಕೆ.ಜಿ.ಶಿವಕುಮಾರ್ ಹಿಂದೆ ಚಿತ್ರಮಂದಿರಗಳ ಮಾಲೀಕರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯುವ ಪೂರ್ವಭಾವಿ ಸಭೆಗಳಲ್ಲಿ ಸ್ವಯಂ ಪ್ರೇರಿತರಾಗಿ ಆಗಮಿಸಿ ಸಲಹೆ ಸೂಚನೆ ನೀಡುತ್ತಿದ್ದರು ಅಲ್ಲದೆ ನವೆಂಬರ್ ತಿಂಗಳು ಸಂಪೂರ್ಣವಾಗಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರದ ಮಾಲೀಕರು ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದು ಸರಿಯಲ್ಲ, ಆದ್ದರಿಂದ ಒಕ್ಕೂಟದ ವತಿಯಿಂದ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ ಎಂದರು.


ವಿಶ್ವಕರ್ನಾಟಕ ರಕ್ಷಣಾ ವೇದಿಕೆಯ ಕೆ.ಜಿ.ಯಲ್ಲಪ್ಪ ಮಾತನಾಡಿ, ಕನ್ನಡ ನಾಡು, ನುಡಿ ಭಾಷೆಗೆ ಕುತ್ತು ಬಂದಾಗ ಎಲ್ಲಾ ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದೇವೆ. ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಎಲ್ಲರು ಒಗ್ಗಟ್ಟಾಗಿ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರವನ್ನೇ ಪ್ರದರ್ಶಿಸಬೇಕೆಂದು ಒತ್ತಾಯಿಸಿದ್ದೇವೆ ಎಂದರು.

ಕರ್ನಾಟಕ ರಕ್ಷಣಾವೇದಿಕೆಯ ಎಂ.ಎಸ್.ರಾಮೇಗೌಡ ಮಾತನಾಡಿ, ನಗರದ ಕೆಲ ಚಿತ್ರಮಂದಿರಗಳಲ್ಲಿ ಪರಭಾಷೆಯ ಚಿತ್ರಗಳನ್ನು ಪ್ರದರ್ಶಿಲಾಗುತ್ತಿದೆ. ಆದ್ದರಿಂದ ನವೆಂಬರ್ ತಿಂಗಳಲ್ಲಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವಂತೆ ಆದೇಶಿಸಬೇಕು. ಹಾಗೂ ಆಂಗ್ಲ ನಾಮಫಲಕ ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ನಾಗೇಂದ್ರ ಬಂಡೀಕರ್, ವಿ.ಅವಿನಾಶ್, ಐಗೂರು ಸುರೇಶ್,ಕೆ.ಜಿ.ಬಸವರಾಜ್,ಸಂತೋಷ್, ಎಸ್.ಜಿ.ಸೋಮಶೇಖರ್, ಗಣೇಶ್ ಕುಂದುವಾಡ, ಹಾಲೇಶ್, ರಾಘುದೊಡ್ಮನಿ, ಮಾಗಡಿ ದ್ವಾರಕೇಶ್, ಅಮ್ಜದ್ ಅಲಿ, ಶ್ರೇಯಸ್, ಮಂಜುನಾಥ್ ಗೌಡ, ಶಾಂತಕುಮಾರ್, ಹರೀಶ್ ರಾವ್, ಜಿ,ಮಲ್ಲೇಶ್, ಮಂಜು ಆವರಗೆರೆ, ರುದ್ರೇಶ್ ಮತ್ತಿತರರಿದ್ದರು.

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *