ಮಲಹೊರುವ ಪದ್ದತಿ ನಿಷೇಧಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ

ದಾವಣಗೆರೆ; ಸರ್ಕಾರ ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿರುವುದರಿಂದ ಪೌರಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದ ಶ್ರೀಅಭಿನವ ರೇಣುಕಾಮಂದಿರದಲ್ಲಿಂದು ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಪೌರಕಾರ್ಮಿಕರ ಸಭೆಗೆ ಬಂದಿದ್ದೇನೆ ಎಂದು ಅನಿಸುವುದಿಲ್ಲ, ಯಾವುದೋ ಮದುವೆ ಸಮಾರಂಭಕ್ಕೆ ಬಂದಿದ್ದೇನೆ ಎಂದು ಅನಿಸಿಸುತ್ತಿದೆ. ನೀವೆಲ್ಲರು ಪೌರಕಾರ್ಮಿಕರು ಇಂದು ಶೋಭಿಸುತ್ತಿರುವುದು ಸಂತಸದ ವಿಷಯ. ಸುಮಾರು 70 ವರ್ಷಗಳ ಇತಿಹಾಸ ನೋಡಿಕೊಂಡು ಬಂದರೆ ಅಂದಿನ ಸ್ಥಿತಿಗೂ ಇಂದಿಗೂ ಪೌರಕಾರ್ಮಿಕರು ಸುಧಾರಣೆಯಾಗಿದ್ದಾರೆ.

ಪೌರಕಾರ್ಮಿಕರು ಪೊರಕೆ ಹಿಡಿದು ಕಸ ಗುಡಿಸುತ್ತಿದ್ದರು. ಯಾರಾದರು ಹಿರಿಯರು ಬಂದರೆ ತಲೆತಗ್ಗಿಸಿಕೊಂಡು ಅವರಿಗೆ ಕಾಣದಂತೆ ಹೋಗುತ್ತಿದ್ದರು. ಇಂತಹ ಸ್ಥಿತಿ ಇತ್ತು. ಸರ್ಕಾರ ಪೌರಕಾರ್ಮಿಕರಿಗೆ ಉತ್ತೇಜನ ನೀಡುವುದಕ್ಕಾಗಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ ಸಹಕರಿಸುತ್ತಿದೆ. ಪೌರಕಾರ್ಮಿಕರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಇಲ್ಲದಿದ್ದರೆ ಊರು ಏನಾಗುತ್ತಿತ್ತು ಎಂಬುದನ್ನು ಅರಿಯಲು ಸಾಧ್ಯವಿಲ್ಲ. 50 ವರ್ಷಗಳ ಹಿಂದೆ ಪೌರಾಡಳಿತದ ಮಂತ್ರಿಗಳಾಗಿದ್ದ ಬಸವಲಿಂಗಪ್ಪ ಅವರು ಮಲಹೊರುವ ಪದ್ದತಿಯನ್ನು ನಿಷೇಧ ಮಾಡಿದ್ದರು.

ಅವರು ಮಾಡಿರುವ ಕೆಲಸ ಶ್ಲಾಘನೀಯ. ಇಡೀ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಲಹೊರುವ ಪದ್ದತಿಯನ್ನು ನಿಷೇಧ ಮಾಡಿರುವುದು ಕರ್ನಾಟಕದಲ್ಲೇ ಎಂದರು.
ಸರ್ಕಾರ ಪೌರಕಾರ್ಮಿಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಪೌರಕಾರ್ಮಿಕರಿಗೆ ಆರೇಳು ಸಾವಿರ ಸಂಬಳ ನೀಡುತ್ತಿತ್ತು. ಆದರೆ ಇಂದು 17 ರಿಂದ 18 ಸಾವಿರ ವೇತನ ಹೆಚ್ಚಿಸಿ ಸಹಕಾರ ನೀಡುತ್ತಿದೆ. ನಗರ ಸ್ವಚ್ಚವಾಗಿಡಲು ಮಹಾನಗರ ಪಾಲಿಕೆಯಿಂದ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಕ ಮಾಡಿ ನಗರ ಸ್ವಚ್ಚತೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.


ಈ ವೇಳೆ ಉತ್ತಮ ಪೌರಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಪೌರಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನಾ ಮಹಾನಗರ ಪಾಲಿಕೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಅವರ ಭಾವಚಿತ್ರಗಳ ಮೆರವಣಿಗೆ ಮೇಯರ್ ಶೋಭಾ ಪಲ್ಲಾಗಟ್ಟೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಕಾರ್ಯದರ್ಶಿ ಎಂ.ನೀಲಗಿರಿಯಪ್ಪ, ನಗರ ಸ್ವಚ್ಚತೆ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಡಿ.ಗೋಣೆಪ್ಪ, ಪಾಲಿಕೆ ಸದಸ್ಯರಾದ ದಿನೇಶ್ ಕೆ ಶೆಟ್ಟಿ, ಎಂ.ಹಾಲೇಶ್, ಹೆಚ್.ತಿಪ್ಪಣ್ಣ, ಪಾಲಿಕೆ ಆಯುಕ್ತರಾದ ಮಂಜುನಾಥ್ ಬಳ್ಳಾರಿ, ಉಪ ಆಯುಕ್ತರಾದ ರವೀಂದ್ರ ಮಲ್ಲಾಪುರ, ಚಂದ್ರಶೇಖರ್ ಸುಕಂದ್, ಮಹೇಂದ್ರಕುಮಾರ್, ಸತೀಶ್, ಜಯರಾಮ್, ಚಂದ್ರಶೇಖರ್, ಬಿರಾದರ್, ಕೆ.ಎಸ್.ಗೋವಿಂದರಾಜು, ಸೇರಿದಂತೆ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *