Home / Uncategorized / ನಟಿ ಭಾವನಾ ಮಾಡಿದ್ದು ಗೊತ್ತಾದ್ರೆ ಛೀ, ಥೂ ಅಂತಿರೀ.. ಬಯಲಾಯ್ತು ನಟಿಯ ಬಂಡವಾಳ

ನಟಿ ಭಾವನಾ ಮಾಡಿದ್ದು ಗೊತ್ತಾದ್ರೆ ಛೀ, ಥೂ ಅಂತಿರೀ.. ಬಯಲಾಯ್ತು ನಟಿಯ ಬಂಡವಾಳ

ನಟಿ, ಕೆಪಿಸಿಸಿ ಕಾರ್ಯದರ್ಶಿ ನಟಿ ಭಾವನಾ ಮಾಡಿದ್ದು ಅಂತಿತ್ತ ತಪ್ಪಲ್ಲ. ಮಕ್ಕಳ ಬಾಲಭವನ ಸಮಿತಿ ಅಧ್ಯಕ್ಷೆಯಾಗಿದ್ದ ಭಾವನಾ ಮಕ್ಕಳನ್ನ ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಚಿತ್ರದುರ್ಗ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಟಿ ಭಾವನಾ ಚಿಗ್ರದುರ್ಗದಲ್ಲೇ ಮನೆ ಮಾಡಿಕೊಂಡು ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ. ನಾನು ಬೆಸ್ತರ ಹುಡುಗಿ, ದುರ್ಗದ ನಂಟಿದೆ, ಅಂಟಿದೆ ಅಂತ ಹೇಳ್ಕೊಂಡು ಮತದಾರರ ಒಲೈಕೆಗೆ ಮುಂದಾಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮಕ್ಕಳನ್ನ ಚನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಭಾನುವಾರ ಸಮಾವೇಶವೊಂದನ್ನ ಆಯೋಜಿಸಲಾಗಿತ್ತು. ಆ ಸಮಾವೇಶದಲ್ಲಿ ಭಾಗವಹಿಸಿದ್ದ ನಟಿ ಭಾವನಾ ಶಾಲಾ ಮಕ್ಕಳನ್ನ ವೇದಿಕೆ ಮೇಲೆ ಕರೆದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ವಿದ್ಯಾರ್ಥಿಗಳಿಗೆ ಏನೆಲ್ಲ ಸೌಲಭ್ಯ, ಕಾರ್ಯಕ್ರಮ ನೀಡಿದೆ ಅನ್ನೋದನ್ನ ಆ ಮಕ್ಕಳಿಂದ ಹೇಳಿಸಿದ್ದಾರೆ. ಅಷ್ಟೆ ಆ ಮಕ್ಕಳ ಕೈಗೆ ಕಾಂಗ್ರೆಸ್ ಭಾವುಟ ನೀಡಿ ಚುನಾವಣಾ ಪ್ರಚಾರ ಮಾಡಿಸಿದ್ದಾರೆ.

ನಟಿ ಭಾವನಾ ನಡೆದುಕೊಂಡ ರೀತಿಯನ್ನ ವಿವಿಧ ಪಕ್ಷಗಳ ಮುಖಂಡರು, ಪ್ರಜ್ಞಾವಂತರು ಖಂಡಿಸಿದ್ದಾರೆ. ಅದೇನೆ ಇರಲಿ ನಟಿಯೊಬ್ಬಳು ಮಕ್ಕಳನ್ನ ಚುನಾವಣಾ ಕಾರ್ಯಕ್ಕೆ ಬಳಿಸಿಕೊಂಡಿರುವುದು ವಿಷಾದನೀಯ. ಅಂತಹವರಿಗೆ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಬೇಕಿದೆ..

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *