Home / Uncategorized / ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ, ಇಲ್ವೋ.. ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ, ಇಲ್ವೋ.. ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಮಾತು ಎತ್ತಿದರೆ ಕುಮಾರಸ್ವಾಮಿ, ಯಡಿಯೂರಪ್ಪ ಅಪ್ಪನಾಣೆ ಗೆಲ್ಲೋದಿಲ್ಲ ಅಂತ ಹೆಳ್ತಾರೆ. ಸಿಎಂ ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ ಇಲ್ವೋ ಅನ್ನೋದನ್ನ ಅವರೇ ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ತಮ್ಮ ತಂದೆ ಇದ್ದರೆ ಅಪ್ಪನ ಮೇಲೆ ಆಣೆ ಮಾಡಿಕೊಳ್ಳಲಿ, ಇಲ್ಲದ ಅಪ್ಪನ ಮೇಲೆ ಆಣೆ ಏಕೆ ಇಡ್ತಾರೆ ಎಂದು ಪ್ರಶ್ನಿಸಿದರು. ಹಾವೇರಿಯಲ್ಲಿ ವಿಕಾಸ ಪರ್ವ ರ್ಯಾಲಿ ನಡೆಸಿದ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಒಂದು ದಿನ ರಾಮನಗರದಲ್ಲಿ ಪ್ರಚಾರ ಮಾಡಿದರೆ ಸಾಕು ಗೆಲ್ತಿವಿ ಅಂತಾರೆ. ಒಂದು ದಿನವಲ್ಲ, ಒಂದು ವಾರ ಅಲ್ಲೇ ಠೀಕಾಣಿ ಹೂಡಿ ಪ್ರಚಾರ ಮಾಡಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ನಾನು ಸಿಎಂ ಆಗಿದ್ದಾಗ ಪೊಲೀಸ್ ವಾಹನದಲ್ಲಿ ಎಂದೂ ಹಣ ಸಾಗಿಸಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *