ಕುಂದು-ಕೊರತೆ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

ಹರಿಹರ;ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಸಾಲ ಸೌಲಭ್ಯಗಳನ್ನು ಒದಗಿಸಿದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದಲಿತರಿಗೆ ಮಾತ್ರ ಸಾಲ ದೊರೆಯುತ್ತಿಲ್ಲ, ದಲಿತರ ಮೇಲೆ ದೌರ್ಜನ್ಯ ನಡೆದರೆ ಪೊಲೀಸ್ ಇಲಾಖೆಗೆ ಹೋದರೆ ಕೇಸನ್ನು ದಾಖಲು ಮಾಡಿಕೊಳ್ಳುವುದಿಲ್ಲ. ನಗರಸಭೆಯಲ್ಲಿ ಪ. ಜಾತಿ. ಪ.ಪಂಗಡದ ಸರ್ಕಾರದ ಯೋಜನೆಗಳನ್ನು ಪಡೆಯುವುದಕ್ಕೆ ಅರ್ಜಿಗಳನ್ನು ನೀಡಿದರೆ ಅರ್ಜಿಗಳು ಮಾಯವಾಗುತ್ತವೆ. ನಿಜವಾದ ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಪ್ರತಿ ವರ್ಷವೂ ನಗರಸಭೆಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸುತ್ತಾರೆ ಆದರೆ ಸವಲತ್ತುಗಳು ಮಾತ್ರ ಕಳ್ಳರ ಪಾಲಾಗುತ್ತದೆ ನಿಜವಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಯೋಜನೆಗಳು ಮುಟ್ಟುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

ನಮ್ಮ ಹರಿಹರ ನಗರದ ಪರಿಶಿಷ್ಟರ ಕಾಲೊನಿಯಲ್ಲಿ ಸುಮಾರು ಜನ ಒಂದೊಂದು ಮನೆಯಲ್ಲಿ ನಾಲ್ಕು ಕುಟುಂಬಗಳು ವಾಸ ಮಾಡುತ್ತಿರುತ್ತವೆ ಅವರಿಗೆ ನಿವೇಶನದ ಕೊರತೆಯಿದೆ ನಿರುದ್ಯೋಗಿ ಯುವಕರು ಬಹಳ ಸಂಖ್ಯೆಯಲ್ಲಿದ್ದಾರೆ ಮತ್ತು ಅವರಿಗೆ ಉದ್ಯೋಗ ಕಲ್ಪಿಸಿಕೊಡುವ ಕಾರ್ಯವನ್ನು ಮಾಡುವುದರ ಜತೆಗೆ ಪರಿಶಿಷ್ಟರ ಕಾಲೊನಿಯ ಜನಾಂಗಕ್ಕೆ ಸಮುದಾಯ ಭವನ ಮತ್ತು ಇನ್ನು ಹತ್ತು ಹಲವಾರು ಸಮಸ್ಯೆಗಳನ್ನು ದಲಿತ ಮುಖಂಡರುಗಳಾದ ಏಕೆ ಸುಭಾಷ್ ಚಂದ್ರ ಬೋಸ್ ಎಸ್ಎಚ್ ಕೊಟ್ರೇಶ್ ಜೆ ಸಂತೋಷ್ ರಘುಪತಿ ಬೆಳ್ಳೂಡಿ ಹಾಲೇಶ್ ರಾಜನಹಳ್ಳಿ ನಾಗೇಂದ್ರಪ್ಪ ಎಚ್ ಸುಧಾಕರ್ ಎಂಎಸ್ ಆನಂದ್ ಕುಮಾರ್ ಟಿ ಸಂತೋಷ್ ಅವರುಗಳು ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ದಲಿತ ಮುಖಂಡರುಗಳು ಸರ್ಕಾರದ ಸವಲತ್ತುಗಳನ್ನು ಒದಗಿಸಿ ಕೊಡುವ ಜೊತೆಗೆ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು ದಲಿತ ಮುಖಂಡರುಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಎಸ್ ರಾಮಪ್ಪ ಮಾತನಾಡಿ ನಗರ ಮತ್ತು ಗ್ರಾಮಗಳಲ್ಲಿ ರುದ್ರಭೂಮಿ ನಿವೇಶನಗಳು ಸಮುದಾಯ ಭವನ ನಿರುದ್ಯೋಗಿಗಳಿಗೆ, ಯುವಕರಿಗೆ ಉದ್ಯೋಗ,ದಲಿತರ ಮೇಲೆ ದೌರ್ಜನ್ಯ ತಡೆ, ಜಮೀನು ತೆರವು, ಹೊಲಗಳಿಗೆ ಹೋಗಲು ದಾರಿ, ಸರ್ಕಾರದ ಸೌಲಭ್ಯಗಳು ಸೇರಿದಂತೆ ಎಲ್ಲ ಸೌಲಭ್ಯಗಳು ಕಲ್ಪಿಸಲು ಆದ್ಯತೆ ನೀಡಲಾಗುವುದು. ನಗರಸಭೆಯಲ್ಲಿ ಅರ್ಜಿಗಳನ್ನು ನೀಡಿದರೆ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ ಹಲವಾರು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮಂಡಿಸಿದ್ದ ನಾನು ಶಾಸಕನಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಮೊದಲನೇ ಬಾರಿ ಸಭೆಯಲ್ಲಿ ಆಲಿಸಿದ್ದೇನೆ ಇನ್ನು ಮುಂದೆನಿಮಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನಿಮ್ಮ ಜತೆಯಲ್ಲಿ ಇರುತ್ತೇನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳನ್ನು ಅರ್ಹಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತೇನೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮ್ಯಾನೇಜರುಗಳ ಪ್ರತ್ಯೇಕವಾಗಿ ಸಭೆಯನ್ನು ಕರೆದು ಚರ್ಚಿಸುತ್ತೇನೆ. ಹರಿಹರ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡುವುದಕ್ಕೆ ಶ್ರಮಿಸೋಣ ಊರನ್ನು ಶಾಂತಿಯಿಂದ ಕಾಪಾಡೋಣ ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ರೆಹಾನ್ ಪಾಶ. ಇಒ ನೀಲಗಿರಿಯಪ್ಪ, ಸಮಾಜ ಕಲ್ಯಾಣ ಅಧಿಕಾರಿ ಡಿ ಪರಮೇಶ್ವರಪ್ಪ, ಪೌರಾಯುಕ್ತೆ ಲಕ್ಷ್ಮಿ, ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಬಿಇಒ ಡಿ ನರಸಿಂಹಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ನಗರ ಮತ್ತು ಗ್ರಾಮೀಣ ಭಾಗದ ದಲಿತ ಸಮಾಜದ ಮುಖಂಡರುಗಳು ಕುಂದು ಕೊರತೆ ಸಭೆಯಲ್ಲಿ ಇದ್ದರು

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *