ಹೆಣ್ಣು ಮಕ್ಕಳ ಕ್ಲಬ್ ಸಕ್ರೀಯವಾಗಿ ಕಾರ್ಯನಿರ್ವಹಿಸಲಿ

ದಾವಣಗೆರೆ; ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದುವುದು ಹಾಗೂ ಅವರುಗಳ ಗುಣಗಳನ್ನು ಅಳವಡಿಸಿಕೊಂಡಾಗ ಭ್ರಷ್ಟಾಚಾರದ ವಿರುದ್ದ ಖಂಡಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಕೆಂಗಬಾಲಯ್ಯ ಹೇಳಿದರು.
ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿಂದು ಏರ್ಪಡಿಸಿದ್ದ ಚೈಲ್ಡ್ ಲೈನ್ ಸೆ ದೋಸ್ತಿ ಹಾಗೂ ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಹೆಣ್ಣುಭ್ರೂಣ ಹತ್ಯೆ ಹೆಚ್ಚಾಗಿ ನಡೆಯುತ್ತಿತ್ತು.

ಸ್ತ್ರೀಭ್ರೂಣಹತ್ಯೆ ನಿಷೇಧ ಕಾಯ್ದೆ ಜಾರಿ ಬಂದಾಗಿನಿಂದ ಈ ಕೃತ್ಯ ಕಡಿಮೆಯಾಗುತ್ತಿದೆ. ಲಿಂಗಪತ್ತೆ ಮಾಡುವುದರಿಂದ ಗರ್ಭದಲ್ಲೆ ಹೆಣ್ಣುಮಗುವನ್ನು ಹತ್ಯೆ ಮಾಡಲಾಗುತ್ತಿತ್ತು. ಕಠಿಣ ಕಾನೂನು ಕ್ರಮದಿಂದ ಲಿಂಗಪತ್ತೆ ಮಾಡುವುದರಿಂದ ವೈದ್ಯರಿಗೂ ಮತ್ತು ಪೋಷಕರಿಗೂ ಶಿಕ್ಷೆಗೊಳಪಡಿಸಲಾಗುತ್ತಿದೆ ಎಂಬ ಕಾನೂನು ಜಾರಿಯಾದಾಗಿನಿಂದ ಲಿಂಗಪತ್ತೆ ಮಾಡುವುದನ್ನು ನಿಲ್ಲಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ಮಾಡುವುದರಿಂದ ಸಮಾಜದಲ್ಲಿ ಸಮಾನತೆ ಇಲ್ಲದಂತಾಗಿ ಅಸಮಾತೋಲನ ಉಂಟಾಗುತ್ತಿದೆ.


ಪ್ರತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಕ್ಲಬ್ ಮಾಡಲಾಗಿದೆ. ಅದು ಸಾಂಕೇತಿಕವಾಗಿ ಕ್ಲಬ್ ಮಾಡಿದರೆ ಸಾಲದು ಅದನ್ನು ಸಕ್ರಿಯಗೊಳಿಸಬೇಕಾದ ಅಗತ್ಯವಿದೆ. ಈ ಕ್ಲಬ್ ನಿಂದ ಲೈಂಗಿಕ ದೌರ್ಜನ್ಯಗೊಳಗಾದವರಿಗೆ ಸಹಾಯವಾಗುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ ನಡೆಸಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಸ್ತುತ ದಿನದಲ್ಲಿ ವಿದ್ಯಾರ್ಥಿಗಳು ತಾಂತ್ರಿಕತೆಗೆ ಮೊರೆಹೋಗಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ವಿದ್ಯಾರ್ಥಿನಿಯರಿಂದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಂಯೋಜಕರಾದ ಟಿ.ಎಂ.ಕೊಟ್ರೇಶ್, ವೈ.ರಾಮನಾಯ್ಕ, ಕೆ.ಹೆಚ್.ವಿಜಯಕುಮಾರ್, .ಎ.ಆರ್.ಮಂಜಪ್ಪ, ಮಂಜುನಾಥ್, ರಾಜು, ಜ್ಯೋತಿಶ್ರೀ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *