Home / Uncategorized / ಎಂಬಿಬಿಎಸ್ ಪ್ರಶ್ನೆಪತ್ರಿಕೆ ಲೀಕ್, ವೈದ್ಯೋನಾರಾಯಣ ಹರಿ…!!

ಎಂಬಿಬಿಎಸ್ ಪ್ರಶ್ನೆಪತ್ರಿಕೆ ಲೀಕ್, ವೈದ್ಯೋನಾರಾಯಣ ಹರಿ…!!

ಬ್ಯೂರು ನ್ಯೂಸ್ : ಶನಿವಾರ ಬೆಳಗ್ಗೆ 9 ಗಂಟೆಗೆ ನಡೆಯಬೇಕಿದ್ದ ಎಂಬಿಬಿಎಸ್ 2ನೇ ವರ್ಷದ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಮೈಕ್ರೋ ಬಯಾಲಜಿ ಪ್ರಶ್ನೆ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿತ್ರದುರ್ಗ ಜಿಲ್ಲೆಯ ಬಸವೇಶ್ವರ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಬಯಲಾಗಿದ್ದು, ಮೇಲ್ನೋಟಕ್ಕೆ ಮೆಡಿಕಲ್ ಕಾಲೇಜು ಸಿಬ್ಬಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 9 ಕ್ಕೆ ಪರೀಕ್ಷೆ ಆರಂಭವಾಗಿದ್ದು, 9.15 ಕ್ಕೆ ಪ್ರಶ್ನೆ ಪತ್ರಿಕೆ ಫೇಸ್ಬುಕ್, ವಾಟ್ಸ್ ಅಪ್ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಿದೆ.

ಚಿತ್ರದುರ್ಗ ಮುರುಘಾಮಠಕ್ಕೆ ಸೇರಿದ ಬಸವೇಶ್ವರ್ ಕಾಲೇಜಿನಲ್ಲೇ ಪ್ರಶ್ನೆ ಪತ್ರಿಕೆ ಬಯಲಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಈ ಬಗ್ಗೆ ಮೆಡಿಕಲ್ ಕೌನ್ಸಿಲಿಂಗ್ ಗೆ ದೂರು ನೀಡಲಾಗಿದೆ. ಎಂಬಿಬಿಎಸ್ ದ್ವಿತೀಯ ವರ್ಷದ ಮೈಕ್ರೋ ಬಯಾಲಜಿ ಪರೀಕ್ಷೆ ರದ್ದಾಗಿ ಮತ್ತೊಮ್ಮೆ ನಡೆಯತ್ತಾ ಕಾದು ನೋಡಬೇಕಿದೆ.

 

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *