ಕಡತಕ್ಕೆ ಸೀಮಿತವಾದ ಮಹಿಳಾ ಮೀಸಲಾತಿ

ದಾವಣಗೆರೆ;ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆ ಜಾರಿ ವಿಳಂಬವಾಗಿರುವುದು ದುರಂತದ ವಿಷಯ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸ್ವಾತಿ ಮಾಳಗಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಎ.ವಿ.ಕಮಲಮ್ಮ ಕಾಲೇಜಿನಲ್ಲಿಂದು ಯುವ ಕಾಂಗ್ರೆಸ್ ವತಿಯಿಂದ ನಡೆದ ಮಹಿಳಾ ಸಬಲೀಕರಣ, ಮಹಿಳಾ ಶಕ್ತಿ ದೇಶದ ಶಕ್ತಿ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಮಹಿಳಾ ಶಕ್ತಿ ದೇಶದ ಶಕ್ತಿ ಎಂಬ ಸಂವಾದವನ್ನು ಮಾಡಿಕೊಂಡು ಬರಲಾಗುತ್ತಿದೆ.

ಕರ್ನಾಟಕಕದಲ್ಲಿ ಶೇ 49 ರಷ್ಟು ಮಹಿಳೆಯರಿದ್ದಾರೆ.ಆದರು ಸಹ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳು, ಸವಲತ್ತುಗಳು ಸಿಗುತ್ತಿಲ್ಲ, ಯುಪಿಎ ಸರ್ಕಾರವಿದ್ದಾಗ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಇತ್ತು.ಆದರೆ ಬಹುಮತ ಸಾಬೀತಾಗದೆ ನೆನೆಗುದಿಗೆ ಬಿದ್ದಿದೆ. ನಾವಿರುವುದು ಶೇ. 49 ರಷ್ಟು ಮಹಿಳೆಯರು. ಕೇಳಿರುವುದು ಶೇ. 33 ರಷ್ಟು ಮಹಿಳಾ ಮೀಸಲಾತಿ ಮಾತ್ರ ಅದು ಸಿಗುತ್ತಿಲ್ಲ, ಹಾಗಾಗಿ ಮಹಿಳೆಯರು ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಿಂಜರಿಯಬಾರದೆಂದು ಹೇಳಿದರು.


ಬಿಐಇಟಿಕಾಲೇಜಿನ ನಿರ್ದೇಶಕ ಪ್ರೊ.ವೃಷಬೇಂದ್ರಪ್ಪ ಮಾತನಾಡಿ, ಮಹಿಳೆಯರಿಗೆ ಎಲ್ಲಾ ರೀತಿ ಮೀಸಲಾತಿ ನೀಡಿದರು ಸಹ ಅವರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾಧನೀಯ. ಮಹಿಳೆಯರು ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಕೂಡಲೇ ಮಹಿಳಾ ಸಂಘಟನೆಗಳು ಸ್ಪಂದಿಸಬೇಕು. ಈ ರೀತಿ ಬೆಳವಣಿಗೆಗಳಾಗಬೇಕು. ಮಹಿಳೆಯರು ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಮುಂದೆ ಬನ್ನಿ ಎಂದು ಕರೆ ನೀಡಿದರು.


ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಬಸವನಗೌಡ ಬಾದರ್ಲಿ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ, ಮಹಿಳೆಯರ ಮೇಲೆ ಅನ್ಯಾಯ ದೌರ್ಜನ್ಯವಾದಾಗ ಹೋರಾಟ ಮಾಡಬೇಕು. ಈ ಸಂವಾದ ಹಮ್ಮಿಕೊಂಡಿರುವುದು ಮಹಿಳಾಶಕ್ತಿ ಪ್ರದರ್ಶನಗೊಳಿಸುವುದಕ್ಕಾಗಿ. ವಿದ್ಯಾರ್ಥಿನಿಯರು ನಿಮ್ಮ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಬೇಕು. ಅವುಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗುವುದು ಎಂದು ಹೇಳಿದರು.


ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ನೇಹ ಎಸ್ ಮಾತನಾಡಿ, ಕೇಂದ್ರ ಸರ್ಕಾರ ನಿರ್ಭಯ ಫಂಡ್ ಸಂಗ್ರಹಿಸುತ್ತಿದೆ. ಇದರಿಂದ ಮಹಿಳೆಯರಿಗೆ ಏನು ಪ್ರಯೋಜನವಾಗುತ್ತಿದೆ ಎಂದು ಪ್ರಶ್ನಿಸಿದರು. ಕಾವ್ಯಶ್ರೀ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸರ್ಕಾರ ಏಕೆ ಕ್ರಮಕೈಗೊಳ್ಳುತ್ತಿಲ್ಲ, ಮತ್ತು ವಿದ್ಯಾರ್ಥಿನಿ ಅಶ್ವಿನಿ ಪುರುಷರು ಮತ್ತು ಮಹಿಳೆಯರು ಸಮಾನವೆಂದು ಹೇಳುತ್ತಾರೆ, ಆದರೆ ಕೂಲಿಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಏಕೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದಲ್ಲದೆ ಸಂವಾದದಲ್ಲಿ ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯ ಅರ್ಚನಾ ಬಸವರಾಜ್, ಇಬ್ರಾಹಿಂ ಖಲೀಲ್, ಕಾಲೇಜಿನ ಪ್ರಾಂಶುಪಾಲರಾದ ಶಿವಪ್ರಕಾಶ್, ಶಿವಕುಮಾರ್, ಚೈತನ್ಯ ರೆಡ್ಡಿ, ಬಸವರಾಜ್, ನವೀನ್ ಕುಮಾರ್, ಭವ್ಯ, ಹರೀಶ್ ಕೆಂಗನಹಳ್ಳಿ, ವಿನಯ್ ಕುಮಾರ್, ಜ್ಯೋತಿ, ರಾಘವೇಂದ್ರ, ಕೃಷ್ಣನಾಯ್ಕ್, ಸುಮತ ಇದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *