ಮನೆ ಕೊಡ್ಸಿ ನಾನು ಇಲ್ಲೇ ಇರ್ತಿನಿ – ಸಚಿವ ಶ್ರೀನಿವಾಸ್ ಗರಂ

ನ್ಯೂಸ್ ಡೆಸ್ಕ್

ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಜಿಲ್ಲೆಗೆ ನಾಲ್ಕೇ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ಬಂದ ಸಚಿವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ಮಾಡಿದ್ದು ಬಿಟ್ರೆ ಬೇರೇನೂ ಮಾಡಲಿಲ್ಲ.

ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಜಿಲ್ಲೆಗೆ ಬಂದಿದ್ದವರು ಮತ್ತೆ ಜಿಲ್ಲೆಗೆ ಕಾಲಿಟ್ಟಿದ್ದು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಲು. ಅಂದು ಕೂಡ ಬೆಳಗ್ಗೆ ಬಂದು ಮಧ್ಯಾಹ್ನ ವಾಪಸ್ ಗುಬ್ಬಿ ಕ್ಷೇತ್ರದ ಕಡೆ ಮುಖ ಮಾಡಿದರು.

ಪುನಃ ಸೆಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆಗೆ ಬಂದಿದ್ದವರು ಮತ್ತೆ ದಾವಣಗೆರೆಗೆ  ಎಂಟ್ರಿ ಕೊಟ್ಟಿದ್ದು ಬರೊಬ್ಬರಿ 50 ದಿನಗಳ ಬಳಿಕ. ಅದೂ ಕೂಡ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಳ್ಳಲು. ಏನ್ ಸರ್ ಜಿಲ್ಲೆಗೆ ಗೆಸ್ಟ್ ಬಂದಂಗ್ ಬಂದು ಹೋಗ್ತಿರಿ ಅಂತಾ ಕೇಳಿದ್ರೆ.

ಇಲ್ಲೇ ಇರ್ತಿನಿ ಮನೆ ಕೊಡಿಸಿ ಅಂತಾ ಮಾಧ್ಯಮದವರ ಮೇಲೆ ರೇಗಾಡಿದ್ರು. ನನಗೆ ಇಲ್ಲಿ ಮನೆ ಇಲ್ಲ ಬರೋದಿಲ್ಲ ಅಂತ ಉಡಾಫೆಯಾಗಿ ಮಾತಾಡಿದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *