Home / ಸುದ್ದಿ / ಜಿಲ್ಲೆ / ಅರಣ್ಯದಲ್ಲಿ ಸಿಕ್ತು ಅಪರೂಪದ ಪ್ರಾಣಿ, ಅದನ್ನ ನೀವು ನೋಡಿರೋದಕ್ಕೆ ಸಾಧ್ಯವಿಲ್ಲ..!

ಅರಣ್ಯದಲ್ಲಿ ಸಿಕ್ತು ಅಪರೂಪದ ಪ್ರಾಣಿ, ಅದನ್ನ ನೀವು ನೋಡಿರೋದಕ್ಕೆ ಸಾಧ್ಯವಿಲ್ಲ..!

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಅಪರೂಪದ ಪ್ರಾಣಿಯೊಂದು ಪ್ರತ್ಯಕ್ಷವಾಗಿದ್ದು, ಅದು ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಸಿಕ್ಕಿದೆ. ಮುತ್ತೋಡಿ ಅರಣ್ಯದಲ್ಲಿ ಸಫಾರಿ ಹೋದ ಪ್ರವಾಸಿಗರಿಗೆ ಆ ಪ್ರಾಣಿ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಪ್ರಾಣಿ ತಜ್ಞರು ಶಾಕ್ ಆಗಿದ್ದಾರೆ.

ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಅಪರೂಪದ ನಿಲ್ ಗಾಯಿ (ಬ್ಲೂ ಬುಲ್ ಅಂತಾನು ಕರೆಯುತ್ತಾರೆ) ಪ್ರಾಣಿ  ಕರ್ನಾಟಕದ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ. ಇಲ್ಲಿ ಈ ಹಿಂದೆ ನಿಲ್ ಗಾಯಿ ಪ್ರಾಣಿ ಎಂದಿಗೂ ಕಂಡಿರಲಿಲ್ಲ ಎನ್ನುತ್ತಿದ್ದಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಬ್ಲೂ ಬುಲ್ ಹುಲ್ಲುಗಾವಲಿನಲ್ಲಿ ವಾಸಿಸುವ ಪ್ರಾಣಿ, ಅಂತಹ ಪ್ರಾಣಿ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಿಂದೊಮ್ಮೆ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ರಾಜ್ಯದ ಯಾವ ಅರಣ್ಯ ಪ್ರದೇಶದಲ್ಲಿ ಮತ್ತೆ ಕಂಡಿರಲಿಲ್ಲ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *