Recent Posts

ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಅಧಿಕಾರಿ ಬಲಿ…!!

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್  ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಎಚ್.ಡಿ.ಕೋಟೆ ತಾಲೋಕಿನ ಬಳ್ಳೆ ಅರಣ್ಯ ಪ್ರದೇಶದಲ್ಲಿ  ಕಾಲು ನಡಿಗೆಯಲ್ಲಿ ಬೆಂಕಿ ವೀಕ್ಷಣೆ ನಡೆಸುತ್ತಿದ್ದಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಮಣಿಕಂಠನ್ ಅವರನ್ನ ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯಿತು. ಆದರೆ, ವಿಧಿಯಾಟ ಮಣಿಕಂಠನ್ ಮಾರ್ಗ ಮಧ್ಯೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳ್ಳೆ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇತರೆ ಸಿಬ್ಬಂದಿಗಳು ಪಾರಾಗಿದ್ದಾರೆ.

Read More »

ಈ ಫೋಟೋ ನೋಡಿ ಛೀ ಎನ್ನಬೇಡಿ, ಇದರಲ್ಲಿದೆ ಮನುಕುಲದ ಸಂದೇಶ…

ತಾಯಿಯೊಬ್ಬರು ತನ್ನ ಕಂದಮ್ಮನಿಗೆ ಎದೆಹಾಲು ಉಣಿಸುವ ಫೋಟೋ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆರಳ ರಾಜ್ಯದ ಮಲಯಾಳಂ ನಿಯತಕಾಲಿಕೆ “ಗೃಹಲಕ್ಷ್ಮಿ” ತನ್ನ ಮುಖಪುಟದಲ್ಲಿ ಈ ಚಿತ್ರವನ್ನ ಮುಕ್ತವಾಗಿ ಪ್ರಕಟಿಸಿದೆ.. ಆಧುನಿಕತೆ ಬರಾಟೆಯಲ್ಲಿ ಸ್ತ್ರೀಯು ತನ್ನ ಸೌಂದರ್ಯ ಹಾಳಾಗುತ್ತೆ ಅಂತ ಕಂದಮ್ಮಗಳಿಗೆ ಎದೆಹಾಲು ಉಣಿಸುವುದು ಕೈಬಿಟ್ಟಿದ್ದಾಳೆ. ಮಗುವಿಗಿಂತ ತನ್ನ ಸೌಂದರ್ಯವೇ ಹೆಚ್ಚು ಅಂತ ಎಷ್ಟೊ ತಾಯಂದಿರು ಒಂದು ಅಥವಾ ಎರಡು ತಿಂಗಳು ಎದೆಹಾಲು ಕುಡಿಸಿ ನಂತರ ಬಾಟಲಿ ಹಾಲು ಫೀಡ್ ಮಡುತ್ತಾರೆ. …

Read More »

ಬಿಸಿಯೂಟ ಮಾಡಿದ 40 ಮಕ್ಕಳು ಅಸ್ವಸ್ಥ…. ಕಾರಣ ಏನು ಗೊತ್ತಾ….

ಸರ್ಕಾರ ಶಾಲಾ ಮಕ್ಕಳಿಗೆ ಬಿಸಿಯೂಟವೇನೋ ನೀಡುತ್ತೆ. ಆದ್ರೆ, ಅದು ಅಷ್ಟು ಗುಣಮಟ್ಟ ಮತ್ತು  ಪೌಷ್ಠಿಕಾಂಶ ಹೊಂದಿರತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಿಲೋಗಲ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಬಿಸಿಯೂಟ ಮಾಡಿ ಅಸ್ವಸ್ಥರಾಗಿದ್ದಾರೆ. ಬಿಸಿಯೂಟದ ಸಾಂಬರಿನಲ್ಲಿ ಹಾವರಾಣಿ ಬಿದಿದ್ದು, ಸಾಂಬರ್ ವಿಷ ಪ್ರಶನವಾಗಿದೆ. ಅದನ್ನ ಸೇವಿಸಿದ ಮಕ್ಕಳು ವಾಂತಿ, ಬೇಧಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಮಕ್ಕಳು ಅಡುಗೆ ತಯಾರಕರ ಗಮನಕ್ಕೆ ತಂದ್ರೂ ಸಿಬ್ಬಂದಿ ಅದೇ ಸಾಂಬರ್ …

Read More »