ಪಾರಂಪರಿಕ ವೈದ್ಯರಿಗೆ ಬೇಕಿದೆ ಪ್ರೋತ್ಸಾಹ

ದಾವಣಗೆರೆ – ಪಾರಂಪರಿಕ ವೈದ್ಯಪದ್ದತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಇಳಕಲ್ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿಂದು ಪಾರಂಪರಿಕ ವೈದ್ಯ ಪರಿಷತ್, ರಾಷ್ಟ್ರೀಯ ಔಷಧಿ ಸಸ್ಯಗಳ ಪ್ರಾಧಿಕಾರ, ನವದೆಹಲಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠ ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ಮೂಲಿಕಾ ಉತ್ಸವ -2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಪಾರಂಪರಿಕ ವೈದ್ಯ ಪದ್ದತಿಯು ವಂಶಪರಂಪರೆಯಾಗಿ ಬಳುವಳಿಯಾಗಿ ಬಂದಿದೆ. ಭೂಮಂಡಲದಲ್ಲಿ ಅನೇಕ ರೀತಿಯ ಔಷಧ ಗಿಡಮೂಲಿಕೆಗಳಿವೆ. ಎಲ್ಲರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಾರಂಪರಿಕ ವೈದ್ಯಪದ್ದತಿಯನ್ನು ಕಂಡುಕೊಳ್ಳಲಾಗಿದೆ. ನಾಟಿ ವೈದ್ಯರು ಉಚಿತ ಸೇವೆಯಾಗಿ ಮಾಡುತ್ತಿದ್ದರು ಆದರೆ ಪ್ರಸ್ತುತ ದಿನದಲ್ಲಿ 21 ನೇ ಶತಮಾನದಲ್ಲಿ ಹಣಕ್ಕಾಗಿ ಪಾರಂಪರಿಕ ವೈದ್ಯ ಸೇವೆಯಾಗಿರುವುದು ದುರಂತ. ಪಾರಂಪರಿಕ ವೈದ್ಯ ಪದ್ದತಿ ಅನುಭವದ ವಿದ್ಯೆ.

ಹಣಕ್ಕಾಗಿ ಅಲ್ಲದೆ ಸೇವೆಗಾಗಿ ಬಳಸಿಕೊಳ್ಳುತ್ತಿದ್ದರು. ಔಷಧಿಗಾಗಿ ಜನರು ಸಾವಿರಾರು ಹಣ ದುಂದುವೆಚ್ಚ ಮಾಡುತ್ತಿದ್ದಾರೆ. ನಾಟಿಔಷಧಿ ಪದ್ದತಿಯಿಂದ ಕಡಿಮೆ ವೆಚ್ಚದಲ್ಲಿ ಔಷಧಿ ಪಡೆದು ರೋಗಗಳಿಂದ ಗುಣಮುಖರಾಗಬಹುದು. ಹೊರದೇಶಗಳಿಗೆ ನಮ್ಮಲ್ಲಿ ಬೆಳೆಯುವ ಗಿಡಮೂಲಿಕೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅವರು ಸಹ ಆಯುರ್ವೇದಕ್ಕೆ ಮೊರೆ ಹೋಗಿದ್ದಾರೆ. ಸಮಾಜ ಪಾರಂಪರಿಕ ವೈದ್ಯ ಪದ್ದತಿಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.


.ಸಿದ್ದೇಶ್ವರ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿಯವರು ಆಡಳಿತಕ್ಕೆ ಬಂದ ಮೇಲೆ ಪಾರಂಪರಿಕ ವೈದ್ಯ ಪದ್ದತಿಗೆ ಯೋಗ, ಆಯುರ್ವೇದ, ಹೋಮಿಯೋಪಥಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸವಾಗಿದೆ. ರಾಜ್ಯಾದ್ಯಂತ ಮೂಲೆ ಮೂಲೆಗಳಲ್ಲೂ ನಾಟಿ ವೈದ್ಯ ಪದ್ದತಿ ವೈದ್ಯರಿದ್ದಾರೆ ಅಂತವರ ಪಟ್ಟಿಯನ್ನು ತಯಾರಿಸುವ ಅವಶ್ಯಕತೆ ಇದೆ. ಪಾರಂಪರಿಕ ವೈದ್ಯರನ್ನು ಸರ್ಕಾರದ ಮಟ್ಟದಿಂದ ಗುರುತಿಸುವ ಕೆಲಸವಾಗಬೇಕಾಗಿದೆ. ಕೇಂದ್ರ ಸರ್ಕಾರದಿಂದ ನ್ಯಾಷನಲ್ ಆಯುಷ್ ಪದ್ದತಿಯನ್ನು ತಂದು ಪಾರಂಪರಿಕ ಪದ್ದತಿಯನ್ನು ಉಳಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವಪ್ರಸಾದ ಸ್ವಾಮೀಜಿ, ಸತ್ಯನಾರಾಯಣಭಟ್, ನೇಱ್ಲಿಗೆ ಗುರುಸಿದ್ದಪ್ಪ, ಸದಾಶಿವ ನಡುಕೇರಿ, ಡಾ.ಟಿ.ಎನ್.ದೇವರಾಜ್ ಸೇರಿದಂತೆ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *