ಈ ಫೋಟೋ ಸೆರೆಹಿಡಿದ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ..!

ನ್ಯೂಸ್ ಡೆಸ್ಕ್ :

ಈ ಫೋಟೋವನ್ನು  ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದವರು ಸೌಥ್ ಆಫ್ರಿಕಾದ ಖ್ಯಾತ ಛಾಯಾಗ್ರಾಹಕ ಕೆವಿನ್ ಕಾರ್ಟರ್. 1993 ರಲ್ಲಿ ಸುಡಾನ್​ನಲ್ಲಿ ಭೀಕರ ಬರಗಾಲ ಬಂದಾಗ ಫೋಟೋ ಜರ್ನಲಿಸ್ಟ್ ಆಗಿರುವ ಕೆವಿನ್ ಕಾರ್ಟರ್ ಈ ಚಿತ್ರವನ್ನ ತೆಗೆದಿದ್ದಾರೆ. ಹಸಿವಿನಿಂದ ನರಳುತ್ತಿದ್ದ ಆಫ್ರಿಕನ್ ಸಣ್ಣ ಬಾಲಕಿ ಮತ್ತು ತನ್ನ ಆಹಾರಕ್ಕಾಗಿ ಆಕೆ ಸಾಯುವುದನ್ನು ಪಕ್ಕದಲ್ಲೇ ಕಾದು ಕುಳಿತಿದ್ದ ಒಂದು ರಣಹದ್ದು ಚಿತ್ರ ಎಂಥವರ ಕಣ್ಣಾಲಿಯನ್ನು ಒಮ್ಮೆ ಒದ್ದೆ ಮಾಡುತ್ತದೆ.

‘ದಿ ವಲ್ಚರ್ ಆಂಡ್ ದಿ ಲಿಟ್ಟಲ್ ಗರ್ಲ್’ ಹೆಸರಿನ ಈ ಫೋಟೋಗೆ ಪುಲಿಟ್ಜರ್ ಪ್ರಶಸ್ತಿ ಕೂಡ ಲಭಿಸಿತ್ತು. ಆದರೆ ಕೆವಿನ್ ಕರ್ಟರ್ ಪುರಸ್ಕಾರ ಪಡೆಯಲಿಲ್ಲ. ಬದಲಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.  ಕಾರ್ಟರ್ ಅವರಿಗೆ ಪುಲಿಟ್ಜರ್ ಪ್ರಶಸ್ತಿ ಬಂದಾಗ ದೇಶ ವಿದೇಶಗಳಿಂದ ಪತ್ರಗಳು, ಫೋನ್ ಕಾಲ್‌ಗಳು ಮೇಲಿಂದ ಮೇಲೆ ಬಂದವು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಷನ್​ಗಳಾದವು.

ಹೀಗೆ ಟಿವಿ ಸಂದರ್ಶನದಲ್ಲಿ ಸಂದರ್ಶಕನೊಬ್ಬ ಪ್ರಶ್ನೆ ಕೇಳಿದ…  ಫೋಟೋ ತೆಗೆದ ‘ನಂತರ ಆ ಮಗುವಿಗೆ ಏನಾಯಿತು…? ಆ  ಪ್ರಶ್ನೆಗೆ ಉತ್ತರಿಸಿದ ಕೆವಿನ್ ‘ಇಲ್ಲ ನನಗೆ ಗೊತ್ತಿಲ್ಲ! ಅವತ್ತು ನನಗೆ ವಿಮಾನಕ್ಕೆ ಸಮಯವಾಗಿದ್ದ ಕಾರಣ ನಾನು ಬೇಗ ಅಲ್ಲಿಂದ ಹೊರಟೆ!’ ಎಂದರು. ಕೆವಿನ್ ಉತ್ತರವನ್ನು ಕೇಳಿ ಆ ಕಡೆಯ ವ್ಯಕ್ತಿ ‘ನನ್ನ ಪ್ರಕಾರ ಆ ದಿನ ಅಲ್ಲಿ ಎರಡು ರಣಹದ್ದುಗಳಿದ್ದವು. ಒಂದರ ಕೈಯಲ್ಲಿ ಕ್ಯಾಮರಾ ಇತ್ತು.’ ಎಂದು ಹೇಳಿ ಫೋನ್ ಕಾಲ್ ಕಟ್ ಮಾಡಿದರು.

ಆ ವ್ಯಕ್ತಿ ಹೇಳಿದ ಆ ಮಾತು ಕೆವಿನ್ ಮನಸ್ಸಿಗೆ ಎಷ್ಟು ನಾಟಿತೆಂದರೆ, ಆ ಮಗುವನ್ನು ರಕ್ಷಿಸಲು ನನ್ನಿಂದ ಆಗಲಿಲ್ಲವಲ್ಲ ಎಂಬ ದುಃಖದಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೆವಿನ್ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು.

About flashnewskannada

Check Also

ಕೋಳಿ ಮಾಂಸ‌‌ ಅಂದ್ರೆ ಇಷ್ಟಾನಾ‌, ನಾವ್ ಹೇಳಿತ್ತೀವಿ ಕೇಳಿ‌ ನಿಮ್ ಕೋಳಿ ಬಗ್ಗೆ‌..‌‌!

ಆರ್ಯನ್ ನಾರಸೇಗೌಡ, ಫ್ಲಾಶ್ ನ್ಯೂಸ್ ಕನ್ನಡ ಕರ್ನಾಟಕ ಅಂದ್ರೆ ಕಡಕ್ ಮಂದಿ ಅಂತಾ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ …

Leave a Reply

Your email address will not be published. Required fields are marked *