ಸೆ.8-9 ರಂದು ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ

ದಾವಣಗೆರೆ; ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸೆ.8 ಹಾಗೂ 9ರಂದು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ 2017-18ನೇ ಸಾಲಿನ ಎಸ್.ಎಸ್.ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ, ಕನ್ನಡ ಕುವರ, ಕನ್ನಡ ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾªಮ ಗಣೇಶ್ ಶಣೈ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.8ರಂದು ಬೆಳಿಗ್ಗೆ 10.35ಕ್ಕೆ ಕನ್ನಡ ಕುವರ, ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಖ್ಯಾತ ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾನಾಯಕ್ ಉದ್ಘಾಟಿಸುವರು. ಕಲಾಕುಂಚದ ಅಧ್ಯಕ್ಷ ಕೆ.ಹೆಚ್. ಮಂಜುನಾಥ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಬಿ.ವಾಮದೇವಪ್ಪ, ಮೋತಿ ಪರಮೇಶ್ವರಪ್ಪ ಆಗಮಿಸುವರು. ಸೆ.9ರಮು ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ, ಕನ್ನಡ ಕುವರ, ಕುವರಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಾನಸಿಕ ರೋಗದ ಖ್ಯಾತ ತಜ್ಞರಾದ ಡಾ.ಪ್ರೀತಿ ಪೈ ಶಾನಬಾಗ್ ಉದ್ಘಾಟಿಸಿ, ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡುವರು.

ಮುಖ್ಯ ಅತಿಥಿಗಳಾಗಿ ಕೆ.ಆರ್.ಜಯದೇವಪ್ಪ, ಶಾಂತಾ ಎಸ್.ಶೆಟ್ಟಿ, ಕು.ಅಭಿರಾಮ ಭಾಗವತ್ ಕೆ., ಕು.ಆಯನಾ ಕೆ.ರಮಣ್ ಪಾಲ್ಗೊಳ್ಳುವರು. ಈ ವರ್ಷ ಜಿಲ್ಲಾ ವ್ಯಾಪ್ತಿಯಲ್ಲಿ ಕನ್ನಡ ಕುವರ, ಕನ್ನಡ ಕುವರಿ, ಜಿಲ್ಲಾ ಪ್ರಶಸ್ತಿ, ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ಸೇರಿದಂತೆ ಒಟ್ಟು 1,674 ಮಕ್ಕಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಂಸ್ಥೆಯಿಂದ ಇದುವರೆಗೂ ಒಟ್ಟು 20,017 ವಿದ್ಯಾರ್ಥಿಗಳಿಗೆಇ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹ ಮಾಲಾಗಿದೆ. ವಿಜೇತರಿಗೆ ಕೀರಿಟವಿಟ್ಟು, ಅವರದೇ ಭಾವಚಿತ್ರ ಇರುವ ಪ್ರಶಸ್ತಿ ಪತ್ರ, ಸ್ಪರಣಿಕೆ, ಚಿನ್ನದ ಲೇಪನ ಪದಕದೊಂದಿಗೆ ಸನ್ಮಾನಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಾಕುಂಚದ ಜಿಲ್ಲಾ ಅಧ್ಯಕ್ಷ ಕೆ.ಹೆಚ್.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್, ಕಚೇರಿ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ, ಬಿ.ಶಾಂತಪ್ಪ ಪೂಜಾರ್, ಬೇಳೂರು ಸಂತೋಷಕುಮಾರ್ ಶೆಟ್ಟಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *