ಶಬರಿಮಲೈನಲ್ಲಿ ಕೇರಳ ಸರ್ಕಾರದಿಂದ ಹಿಂದುವಿರೋಧಿ ಧೋರಣೆ- ಪ್ರತಿಭಟನೆ

ದಾವಣಗೆರೆ; ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕುರಿತು ಉಂಟಾಗಿರುವ ಬಿಕ್ಕಟ್ಟು ನಿವಾರಿಸಬೇಕೆಂದು ಒತ್ತಾಯಿಸಿ ಅಯ್ಯಪ್ಪಸ್ವಾಮಿ ಕ್ಷೇತ್ರ ರಕ್ಷಣಾ ಸಮಿತಿ ಸದಸ್ಯರು ಜಯದೇವವೃತ್ತದಲ್ಲಿಂದು ಪ್ರತಿಭಟನೆ ನಡೆಸಿ ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.


ಶಬರಿಮಲೈ ಶ್ರೀಕ್ಷೇತ್ರಕ್ಕೆ ಈವರೆಗೆ ನಿರ್ಬಂಧವಿದ್ದ ಮಹಿಳಾ ಪ್ರವೇಶವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದ ಮೂಲಕ ತೆರವುಗೊಳಿಸಲಾಗಿದೆ. ಈ ಕ್ರಮ ಸ್ವಾಗತರ್ಹ. ಆದರೆ 800 ಕ್ಕೂ ಅಧಿಕ ವರ್ಷಗಳಿಂದ ಈ ಕ್ಷೇತ್ರದಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ಧಾರ್ಮಿಕ ಹಾಗೂ ಅಲ್ಲಿನ ಪ್ರಚಾರಣೆಯ ಕಾರಣದಿಂದ ನಿರಾಕರಿಸಲಾಗಿದೆ. ಆದರೆ ಈ ನಡುವೆ ಧಾರ್ಮಿಕ ನಂಬಿಕೆ ಇಲ್ಲದವರು ಅನಾವಶ್ಯಕವಾಗಿ ಈ ವಿಚಾರವನ್ನು ವಿವಾದವಾಗಿಸಿದ್ದಾರೆ. ಆದ್ದರಿಂದ ಕೂಡಲೇ ನ್ಯಾಯಾಲಯ ಆದೇಶ ಮರುಪರಿಶೀಲಿಸಬೇಕು.

ಶಬರಿಮಲೈಯಲ್ಲಿನ ಧಾರ್ಮಿಕ ನಂಬಿಕೆಗಳ ಉಳಿವಿಗಾಗಿ ಶಾಂತಿಯುತ ಹೋರಾಟ ಮಾಡುತ್ತಿರುವ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರು, ಬಿಜೆಪಿ ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಪೊಲೀಸ್ ದೌರ್ಜನ್ಯ ತಡೆಯುವಂತೆ ಕೇರಳ ಸರ್ಕಾರಕ್ಕೆ ಸೂಚನೆ ನೀಡಬೇಕು. ಬಂಧಿತರನ್ನು ಬಿಡುಗಡೆ ಮಾಡಬೇಕು. ಶಬರಿಮಲೈಯ ಈ ವಿವಾದ ಸಂಬಂಧ ಕೇರಳ ಸರ್ಕಾರ ತನ್ನ ಹಿಂದು ವಿರೋಧಿ ಧೋರಣೆ ಕೈಬಿಡಬೇಕು. ಮತ್ತು ಸುಪ್ರೀಂಕೋರ್ಟ್ ನಲ್ಲಿ ಭಕ್ತರ ನಂಬಿಕೆಗೆ ಪೂರಕವಾಗುವಂತೆ ಮೇಲ್ಮನವಿ ಸಲ್ಲಿಸಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕು.

ಮರುಪರಿಶೀಲನ ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಆದೇಶವನ್ನೇ ನೆಪವಾಗಿಕೊಟ್ಟುಕೊಂಡು 10 ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೈ ಪ್ರವೇಶಿಸುವ ಯತ್ನ ಮಾಡಬಾರದು. ಸರ್ವೋಚ್ಚ ನ್ಯಾಯಾಲಯ ತನ್ನ ಮುಂದಿರುವ ಮರುಪರಿಶೀಲನಾ ಅರ್ಜಿಯನ್ನು ಅತೀ ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಕೆ.ಬಿ.ಶಂಕರನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್, ಶಿವಯೋಗಿಸ್ವಾಮಿ, ಅಣಬೇರು ಜೀವನಮೂರ್ತಿ, ಹೆಚ್.ಎಸ್.ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ರಾಜಶೇಖರ್, ಜೊಳ್ಳಿಗುರು, ಡಿ.ಕೆ.ಕುಮಾರ್, ವೀರೇಶ್ ಪೈಲ್ವಾನ್, ಗುಮ್ಮನೂರು ಶ್ರೀನಿವಾಸ್, ಸತೀಶ್ ಪೂಜಾರಿ, ಹಾಲೇಶಸ್ವಾಮಿ, ರಾಜಪ್ಪಸ್ವಾಮಿ, ತಿಮ್ಮರಾಜ್ ಸ್ವಾಮಿ, ಚೌವ್ಹಣ್ ಸ್ವಾಮಿ, ಜಗದೀಶ್ ಸ್ವಾಮಿ, ಚಂದ್ರುಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *