ಗಣೇಶೋತ್ಸವಕ್ಕೆ ಷರತ್ತು-ಹಿಂಜಾವೇ ಖಂಡನೆ-ಪ್ರತಿಭಟನೆ

ದಾವಣಗೆರೆ;ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತು ವಿಧಿಸಿರುವ ಎಡಿಜಿಪಿ ಕಮಲ್ ಪಂಥ್ ಆದೇಶ ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದು ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಕೂಡಲೇ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತು ಹಾಗೂ ನಿಬಂಧನೆಗಳನ್ನು ಹೇರಿ ನಿರ್ಬಂಧಿಸುವ ಹಾಗೂ ನಿಷೇಧಿಸುವ ಯತ್ನಕ್ಕೆ ಮುಂದಾಗಿರುವುದು ಖಂಡನೀಯ. ನೂರಾರು ವರ್ಷಗಳಿಂದ ಗಣೇಶೋತ್ಸವವು ಸಾರ್ವಜನಿಕ ರೂಪ ಪಡೆದು ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ. ಈ ಧಾರ್ಮಿಕ ಉತ್ಸವವನ್ನು ರಾಷ್ಟ್ರೀಯ ಹಿನ್ನಲೆಯಲ್ಲಿ ಆಚರಿಸಲಾಗುತ್ತಿದೆ.

ಈ ಆಚರಣೆಯ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳದಿರುವವರು ಹಬ್ಬ ಹತ್ತಿಕ್ಕಲು ಇಲ್ಲಸಲ್ಲದ ಅಡಚಣೆಗಳನ್ನು ಹೇರುತ್ತಿದ್ದಾರೆ. ರಾಜ್ಯದ ಎಡಿಜಿಪಿಯವರು ಈ ರಾಷ್ಟ್ರೀಯ ಹಿಂದು ಹಬ್ಬದ ವೈಭವ ಹಾಳು ಮಾಡಲು ಹೊರಟಿರುವುದು ಖಂಡನೀಯ. ಮೆರವಣಿಗೆಗೆ ನಿಷೇಧ. ನಿರ್ಧಿಷ್ಟವಾಗಿ ಮಸೀದಿಯನ್ನು ಹೆಸರಿಸಿ ವಿಧಿಸಿರುವ ನಿರ್ಬಂಧ ಕಾನೂನು ಬಾಹಿರ ಹಾಗೂ ದುರುದ್ದೇಶದಿಂದ ಕೂಡಿದೆ. ಈ ಎಲ್ಲಾ ನಿರ್ಬಂಧಗಳನ್ನು ಕೂಡಲೇ ಹಿಂಪಡೆದು ಸಾರ್ವಜನಿಕ ಶ್ರೀಗಣೇಶೋತ್ಸವದ ಮೆರವಣಿಗೆಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಆರ್.ಮಂಜುನಾಥ್, ಎಸ್,ಟಿ.ವೀರೇಶ್, ಕೆ.ಆರ್. ಮಲ್ಲಿಕಾರ್ಜುನ್, ರಾಕೇಶ್ ಜಾದವ್, ಶಿವಪ್ರಕಾಶ್ ಕುರಡಿಮಠ, ಧನಂಯಜ್, ಶ್ರೀನಿವಾಸ್, ಪ್ರಕಾಶ್,ರಾಜು ಮತ್ತಿತರರು ಇದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *