ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೂಲಕ ರೈತರ ಬೆಳೆ ಖರೀದಿಸಿ

ದಾವಣಗೆರೆ;ರಾಜ್ಯದಲ್ಲಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೂಲಕ ರೈತರ ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ರೈತ ಮುಖಂಡ ಪ್ರೊ.ನರಸಿಂಹಪ್ಪ ಆಗ್ರಹಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ರೈತರ ಬೆಳೆಗಳನ್ನು ನೇರವಾಗಿ ಫುಡ್ ಕಾರ್ಪೋರೇಷನ್ ಆಪ್ ಇಂಡಿಯಾ ಮೂಲಕವೇ ಖರೀದಿಸಲಾಗುತ್ತಿದೆ. ಇದರಿಂದ ಅಲ್ಲಿನ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ನಮ್ಮ ರಾಜ್ಯದಲ್ಲಿ ರೈತರ ಸ್ಥಿತಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅತ್ಯಂತ ಶೋಚನೀಯವಾಗಿದೆ.

ದಾವಣಗೆರೆಯಿಂದ ಪ್ರಾರಂಭವಾಗುವ ರೈತರ ಬವಣೆ ವಿಜಾಪುರದಲ್ಲಿ ಕೊನೆಗೊಳ್ಳುತ್ತಿದೆ. ದಾವಣಗೆರೆ ಮೆಕ್ಕೆಜೋಳದ ಕಣಜ ಎಂದೇ ಹೆಸರಾಗಿದೆ. ಜಿಲ್ಲೆಯಲ್ಲಿ ಸುಮಾರು ಒಂದು ಮಿಲಿಯನ್ ಟನ್ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಆದರೆ ಇಂದು 3 ಲಕ್ಷ ಟನ್ ಮಾತ್ರ ಬೆಳೆಯಲಾಗುತ್ತಿದೆ.ಇದಕ್ಕೆ ಕಾರಣ ರೈತರಿಗೆ ಉಂಟಾಗುತ್ತಿರುವ ನಷ್ಟ. ಆದ್ದರಿಂದ ಈ ಕೂಡಲೇ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕು.

ರಾಜ್ಯದ ಸಂಸದರು ಕ್ರಮವಹಿಸಿ ಕೇಂದ್ರ ಸರ್ಕಾರದ ಮಾರುಕಟ್ಟೆ ಸಚಿವರೊಂದಿಗೆ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೂಲಕ ನೇರವಾಗಿ ರೈತರ ಬೆಳೆಗಳನ್ನು ಖರೀದಿಸಲು ಮುಂದಾಗುವಂತೆ ಒತ್ತಾಯಿಸಬೇಕು. ರೈತರು ಬೆಳೆದ ಪ್ರತಿ ಕಾಳಿಗೂ ಬೆಲೆ ಸಿಗಬೇಕು. ಕೇಂದ್ರ ಸರ್ಕಾರ ನಿಯೋಗ ತೆರಳಿ ಮನವರಿಕೆಮಾಡಿಕೊಡಬೇಕು. ಚರ್ಚೆ ನಡೆಸಿ ಸಭೆ ಕರೆಯುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಹೆಚ್.ಆರ್.ನಿಂಗರಾಜು, ಶಿವರಾಜ್ ಪಾಟೀಲ್ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *