ಸಚಿವರಿಗೆ ಜನರ ನಾಡಿಮಿಡಿತ ಗೊತ್ತಿಲ್ಲ-ಎಂಪಿಆರ್

ದಾವಣಗೆರೆ; ನಾನು ಅಬಕಾರಿ ಸಚಿವನಾಗಿದ್ದಾಗ ಪ್ರತಿಯೊಂದು ಹಳ್ಳಿಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಯ ಬಗ್ಗೆ ಆಲಿಸುತ್ತಿದ್ದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಅವರಿಗೆ ಜಿಲ್ಲೆಗೆ ಒಂದು ಹೋಗುವುದನ್ನು ಬಿಟ್ಟರೆ ಜನರ ಸಮಸ್ಯೆಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿಂದು ಹೇಳಿದರು.


ರೇಣುಕಾಚಾರ್ಯ ಆಕಾಶದಿಂದ ಇಳಿದುಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಉತ್ತರಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ ನಾನು ತಾಯಿ ಎದೆ ಹಾಲು ಕುಡಿದು ಬಂದಿದ್ದೇನೆ ಹೊರತು ಆಕಾಶದಿಂದ ಬಂದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಅವರಿಗೆ ಸ್ಥಳೀಯರ ನಾಡಿ-ಮಿಡಿತ ಗೊತ್ತಿಲ್ಲ. ಕೇವಲ ಜಯಂತಿಗಳಿಗೆ ಬಂದೊಗೋದು ಮಾತ್ರ ಗೊತ್ತು. ಇದುವರೆಗೂ ಯಾವ ಶಾಸಕರ ಸಭೆ, ಟಾಸ್ಕ್ ಪೋರ್ಸ್‌ ಸಭೆ ಕರೆದಿಲ್ಲ. ನಾನು ಅಬಕಾರಿ ಸಚಿವನಾಗಿದ್ದಾಗ ಪ್ರತಿಯೊಂದು ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೇ. ಆದರೆ ಶ್ರೀನಿವಾಸ ಜಿಲ್ಲೆಗೆ ಬಂದೊಗೋದು ಬಿಟ್ಟರೆ ಏನು ಗೊತ್ತಿಲ್ಲ ಎಂದರು.


ನಾನು ಕೂಡ ಕಾನೂನು ಗೌರವಿಸುತ್ತೇನೆ. ಆದರೆ ಕೆಲವೊಮ್ಮೆ ಜನರಿಗೋಸ್ಕರ ಕಾನೂನನ್ನು ಸರಳೀಕರಣ ಮಾಡಬೇಕಾಗುತ್ತದೆ. ಇಡೀ ತಾಲೂಕಿನಲ್ಲಿ ಸಾಮಾನ್ಯರಿಗೆ ಮುಕ್ತವಾಗಿ ಮರಳು ಸಿಗುತ್ತಿಲ್ಲ.11 ಮರಳು ಬ್ಲಾಕ್‌ಗಳಿದ್ದರೂ, ಮರಳಿನ ಅಭಾವ ಉಂಟಾಗಿದೆ. ಪ್ರತಿ ಟನ್‌ಗೆ 1500 ರೂ.ನಿಂದ 3 ಸಾವಿರ ರೂ. ಮರಳು ಮಾರಾಟವಾಗುತ್ತಿದೆ. ಗೋವಿನಕೋವಿ, ಹರಳಹಳ್ಳಿ ಸೇರಿದಂತೆ 4 ಬ್ಲಾಕ್‌ಗಳಲ್ಲಿ ಇನ್ನೂ ಮರಳು ಹರಾಜಾಗಿಲ್ಲ. ಆದ್ರೆ ಎಸಿ ಕುಮಾರಸ್ವಾಮಿ 28 ಬ್ಲಾಕ್‌ಗಳಲ್ಲಿ ಮರಳು ಸಿಗುತ್ತಿದೆ. ಸರಕಾರಿ ಕೆಲಸಗಳಿಗೆ ಶೇ.25ರಷ್ಟು ಮರಳು ನೀಡಲಾಗುತ್ತಿದೆ ಎನ್ನುತ್ತಾರೆ. ಆದರೆ ಸರಕಾರಿ ಕೆಲಸಗಳಿಗೆ ಎಂ.ಸ್ಯಾಂಡ್‌ ಬಳಸಲಾಗುತ್ತಿದೆ. ಅವರು ನನ್ನ ಜೊತೆ ಬರಲಿ ಸಾಕ್ಷಿಸಮೇತ ತೋರಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ್ ಸೇರಿದಂತೆ ಮತ್ತಿತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *