ಕಡಿತಗೊಂಡ ಸಂಪರ್ಕ; ಸರಿಪಡಿಸಲು ಬಸಾಪುರ ವಾರ್ಡ್ ಜನರ ಮನವಿ

ದಾವಣಗೆರೆ; ಕಳೆದ ಬುಧವಾರ ರಾತ್ರಿ ದಾವಣಗೆರೆಯಲ್ಲಿ ಸುರಿದ ಮಳೆಗೆ ಜನತೆ ತತ್ತರಗೊಂಡಿದ್ದಾರೆ.ರಾತ್ರಿಯಿಡಿ ಸುರಿದ ಮಳೆಗೆ ನಗರವೆಲ್ಲಾ ಜಲಮಯವಾಗಿತ್ತು. ಮಳೆಯಿಂದಾಗಿ ಇಲ್ಲಿನ ಬಸಾಪುರ ವಾರ್ಡ್ ನಲ್ಲಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತ ಗೊಂಡಿದೆ.

ಈ ಭಾಗಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ಸೇತುವೆಗೆ ಮಳೆಯಿಂದ ಹಾನಿಯಾಗಿದ್ದು ಸಂಪೂರ್ಣ ಜಲಾವೃತ್ತವಾಗಿದೆ. ಇದರಿಂದ ಜನರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹಳ್ಳದ ಮತ್ತೊಂದು ಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ತಾತ್ಕಾಲಿಕವಾಗಿ ಜನರೇ ನಿರ್ಮಿಸಿಕೊಂಡಿರುವ ಬಿದಿರಿನ ಸೇತುವೆ ಯಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ.

ಬಸಾಪುರಕ್ಕೆ ಶಾಶ್ವತ ಸಂಪರ್ಕ ಕಲ್ಪಿಸುವ ಸೇತುವೆಯ ಕಾಮಗಾರಿ ನಡೆಯುತ್ತಿದೆ. ಈ ಮಧ್ಯ ಸುರಿದ ಮಳೆಯಿಂದಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಳೆದ 3 ದಿನಗಳಿಂದಲೂ ಸಂಪರ್ಕವಿಲ್ಲದೇ ಜನರು ಕಷ್ಟಪಡುತ್ತಿದ್ದಾರೆ. ಈ ಕೂಡಲೇ ಸೇತುವೆ ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *