ಪಟೇಲರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿದ್ದ ಹೆಮ್ಮೆಯ ಕನ್ನಡಿಗ ಯಾರು ಗೊತ್ತಾ

ನ್ಯೂಸ್ ಡೆಸ್ಕ್

ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ಕೇಳಿದ್ರೆ ಎದೆಯಲ್ಲಿ ಆತ್ಮವಿಶ್ವಾಸ, ಕಣ್ಣಿನಲ್ಲಿ ಸಾಧನೆಯ ಪ್ರಕಾಶತೆ ಎದ್ದು ಕಾಣುತ್ತದೆ. ಅದಕ್ಕೆ ಕಾರಣ ಪಟೇಲರು ಸ್ವಾತಂತ್ರ್ಯ ಸಂಗ್ರಮದಲ್ಲಿ ತೆಗೆದು ಕೊಂಡ ನಿರ್ಣಯಗಳು. ರಾಜರ ಆಳ್ವಿಕೆಯಲ್ಲಿ ನಡೆಸಿದ ಆಡಳಿತ ಈಗಿನ ಪ್ರಸ್ತುತತೆಗೂ ಮಾರ್ಗದರ್ಶವನಾಗಿದೆ. ಅದಕ್ಕಾಗಿಯೇ ಅವರನ್ನ ಹುಕ್ಕಿನ ಮನುಷ್ಯ ಎಂದು ಕರೆದಿದ್ದು.
ಹುಕ್ಕಿನ ಮನುಷ್ಯನಿಗೆ ಜಗತ್ತಿನ ಅತಿಶ್ರೇಷ್ಠ ಗೌರವ ಸಲ್ಲಿಸಲಾಗಿದೆ.  ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂದೇ ಬಣ್ಣಿಸಿರುವ ಪಟೇಲರ ದೈತ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದ್ರು. ಗುಜರಾತಿನ ನರ್ಮದಾ ಜಿಲ್ಲೆಯ ಸಾಧು ಬೆಟ್ ದ್ವೀಪದಲ್ಲಿ 182  ಮೀಟರ್ ಎತ್ತರದ ಏಕತೆಯ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವ ದೈತ್ಯ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಹೆಮ್ಮೆಯ ಕನ್ನಡಿಗ ಪ್ರಮುಖ ಪಾತ್ರ ವಹಿಸಿದ್ದರು. ಯಾರು ಆ ಕನ್ನಡಿಗ ಅಂತಿರಾ ದಾವಣಗೆರೆಯ ಸಿವಿಲ್ ಇಂಜಿನಿಯರ್ ಆಗಿರುವ ಜಗದೀಶ್ ಅವರೇ ಆ ಪ್ರಮುಖ ಪಾತ್ರ ವಹಿಸಿದ್ದವರು.
ದಾವಣಗೆರೆ ವಿದ್ಯಾನಗರದ ಕೆ.ಎಂ.ಜಗದೀಶ್ ಒಂದು ವರ್ಷದಿಂದ ಗುಜರಾತಿನಲ್ಲಿ ಕೆಲಸ ಮಾಡುತ್ತಿದ್ದಾರೆ. 200 ಪರಿಣಿತ ಆರ್ಕಿಟೆಕ್ಟ್ ಜೊತೆ ಕೆಲಸ ಮಾಡುತ್ತಿರುವ ಜಗದೀಶ್​ ಪ್ರಮುಖ ಜವಾಬ್ದಾರಿ ಹೊಂದಿದ್ದರು. ಪಟೇಲರ ಪ್ರತಿಮೆಗೆ ಬೇಕಾದ ಪರಿಕರಗಳ ಕ್ವಾಲಿಟಿ ಚೆಕ್ ಮಾಡುವ ಹೊಣೆ ಹೊತ್ತಿದ್ದ ಜಗದೀಶ್ ಅದನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಗುಜರಾತಿನ ಗಾಂಧಿನಗರ ಸಚಿವಲಾಯದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಕಂಪ್ಯೂಟರ್ ಡಿಸೈನ್ ಮಾಡಿ ಮೇಲಾಧಿಕಾರಿಗಳಿಗೆ ಇಂತಹದ್ದೆ ಗುಣಮಟ್ಟದ ವಸ್ತುಗಳು ಬೇಕು ಅಂತ ಸಲಹೆ ನೀಡುತ್ತಿದ್ದರು. ಇಂದು ವಿಶ್ವವೇ ಭಾರತದತ್ತ ತಿರುಗಿನ ನೋಡುವ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕದ ಪ್ರತಿಭೆ ಇದೆ ಅನ್ನೋದು ಕನ್ನಡಿಗರ ಹೆಮ್ಮೆ

About flashnewskannada

Check Also

ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ …

Leave a Reply

Your email address will not be published. Required fields are marked *