ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರ ಶ್ರಮ ಅಗತ್ಯ

ದಾವಣಗೆರೆ; ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ತಡೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ಹೇಳಿದರು.ನಗರದ ಶಾಮನೂರು ಶಿವಶಂಕಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿಂದು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು.

ರಾಜ್ಯದಲ್ಲಿ 9 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉನ್ನತ ಶಿಕ್ಷಣ ನೀಡಿ ಬದಲಾವಣೆಯ ಅಭಿಲಾಷೆ ಹೊಂದಿದ್ದಾರೆ. ಅದಕ್ಕೆ ಶಿಕ್ಷಕರು ಸಹಕರಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು. ಈ ಬಗ್ಗೆ ಜನರಲ್ಲಿ ಮನವರಿಕೆ ಮಾಡಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು ಪವಿತ್ರತೆ ಪಡೆದಿದೆ.ದೇಶದ ಪ್ರಗತಿ ಹಾಗೂ ಅಭಿವೃದ್ದಿಗೆ ಶಿಕ್ಷಕರ ಪಾತ್ರ ಅನನ್ಯ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವುದರಿಂದ ರಾಷ್ಟ್ರದ ಪ್ರಗತಿಗೆ ನಾಂದಿಯಾಗುತ್ತದೆ. ಅದನ್ನು ಅರಿತು ಶಿಕ್ಷಕರು ಶಿಕ್ಷಣ ನೀಡುವಲ್ಲಿ ಮುಂದಾಗಬೇಕು.

ಒಬ್ಬ ವ್ಯಕ್ತಿಯ ವ್ಯಕ್ತತ್ವದ ವಿಕಾಸವಾಗಬೇಕಾದರೆ ಶಿಕ್ಷಕರ ಸಹಕಾರ ಅತ್ಯಗತ್ಯ. ಭಾರತ ಮುಂದುವರೆಯುತ್ತಿರುವ ರಾಷ್ಟ್ರ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆಯುವ ರಾಷ್ಟ್ರವಾಗಲು ಶಿಕ್ಷಕರ ಕೋಡುಗೆ ಅಪಾರ. ಎಷ್ಟೋ ದೇಶಗಳು ಹಣದ ಕೊರತೆ ಇಲ್ಲದಿದ್ದರೂ ಸಹ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿವೆ. ಶಿಕ್ಷಕರು ಬಿಸಿಯೂಟ, ಹಾಲು, ಎಸ್ ಡಿಎಂಸಿ ಕಾರ್ಯ ಹೀಗೆ ಒತ್ತಡದ ಮಧ್ಯೆಯೂ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಮಹತ್ತರ ಜವಾಬ್ದಾರಿಯಾಗಿದೆ. ಶಿಕ್ಷಕರು ನಿಸ್ವಾರ್ಥ ಸೇವೆ ನೀಡಿ ವ್ಯವಸ್ಥಿತ ಸಮಾಜ ರೂಪಿಸಬೇಕಾಗಿದೆ.

ಇತ್ತೀಚಿನ ಸಮಾಜದ ಅವಲೋಕನಗಳನ್ನು ಗಮನಿಸಿದರೆ ಇಂತವರಿಗೆ ಶಿಕ್ಷಣ ನೀಡಿದ್ದೇವಾ ಎಂಬ ಹತಾಶೆಯ ಮನೋಭಾವನೆ ಮೂಡುತ್ತದೆ ಇದನ್ನು ಸರಿಪಡಿಸುವ ಕಾರ್ಯ ಮಾಡಬೇಕಾಗಿದೆ. ಹಿಂದೆ ಮಕ್ಕಳಿಗೆ ದಂಡಿಸಿ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಇಂದು ಮಕ್ಕಳನ್ನು ದಂಡಿಸಿದರೆ ಶಿಕ್ಷಕರನ್ನೇ ದೂಷಿಸಲಾಗುತ್ತಿರುವುದು ದುರಂತ. ಉತ್ತಮ ಮಾರ್ಗ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದರು.ಜಿ.ಪಂ ಅಧ್ಯಕ್ಷೆ ಕೆ.ಆರ್ ಜಯಶೀಲ ಮಾತನಾಡಿ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠವಾದ್ದು ಗುರು ಪರಂಪರೆ. ರಾಮಾಯಣ, ಮಹಾಭಾರತದ ಕಾಲದಿಂದಲೂ ಗುರುವಿಗೆ ಉನ್ನತಸ್ಥಾನ ಕಲ್ಪಿಸಲಾಗಿದೆ. ದಾವಣಗೆರೆಯಲ್ಲಿ ಅತ್ಯಂತ ಉತ್ತಮ ಶಿಕ್ಷಣ ಸಂಸ್ಥೆಗಳಿವೆ.

ಜಿಲ್ಲೆಯನ್ನು ಜ್ಞಾನದ ಕಾಶಿ ಎಂದೇ ಕರೆಯಲಾಗುತ್ತಿದೆ. ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿರುವುದು ವಿಶಾಧನೀಯ. ಜನಪ್ರತಿನಿಧಿಗಳಾಗಿ ನಾವು ಏನೂ ಮಾಡದ ಸ್ಥಿತಿಯಲ್ಲಿದ್ದೇವೆ. ಜಿಲ್ಲಾಉಸ್ತುವಾರಿ ಸಚಿವರು ಅತೀ ಹೆಚ್ಚಿನ ಅನುದಾನ ನೀಡಿ ಶಾಲಾ ಕೊಠಡಿ ಹಾಗೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಲು ಒತ್ತು ನೀಡಬೇಕೆಂದರು.ಸಮಾರಂಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್,ಮೇಯರ್ ಶೋಭಾ ಪಲ್ಲಾಗಟ್ಟೆ,ಉಪಮೇಯರ್ ಕೆ.ಚಮನ್ ಸಾಬ್, ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿಲ್ಲಾಧಿಕಾರಿ ಡಿ.ಎಸ್ ರಮೇಶ್,ಜಿ.ಪಂ ಸಿಇಒ ಎಸ್ ಅಶ್ವತಿ, ಎಸ್ಪಿ ಆರ್ ಚೇತನ್,ಸಾಹಿತಿ ಎಂ.ಬಿ ನಾಗರಾಜ್ ಇತರರಿದ್ದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *