ಡ್ಯಾಮೇಜ್ ಆಗೋ ಹೇಳಿಕೆಯನ್ನು ಸಿಎಂ ವಾಪಸ್​ ಪಡೆಯಲಿ : ಸತೀಶ್ ಜಾರಕಿಹೊಳಿ

ಬ್ಯೂರೋ ನ್ಯೂಸ್

ಸಿಎಂ ಕುಮಾರಸ್ವಾಮಿ ಹೇಳಿಕೆ ಹಾನಿ ಮಾಡುವಂತಿದ್ದರೆ, ಅದನ್ನು ಅವರು ವಾಪಸ್​ ಪಡೆಯಲೇಬೇಕು ಎಂದು ಮಾಜಿ‌ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಗುರಿ. ಕುಮಾರಸ್ವಾಮಿ ಬಜೆಟ್ ಬಗ್ಗೆ ಮಾತನಾಡಲ್ಲ, ಹಿಂದಿನ ‌ಸಿದ್ದರಾಮಯ್ಯ ಬಜೆಟ್​ನಲ್ಲಿ ನಮ್ಮ ಭಾಗಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದರು ಎಂದರು.

ಕುಮಾರಸ್ವಾಮಿ ಕೇವಲ ರಾಮನಗರ, ಚನ್ನಪಟ್ಟಣದ ಸಿಎಂ ಅಲ್ಲ, ಅವರು ಇಡೀ ರಾಜ್ಯದ ಮುಖ್ಯಮಂತ್ರಿ. ಅವರು  ಏಕೆ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ, ಅವರ ಹೇಳಿಕೆ ಡ್ಯಾಮೇಜ್ ಆಗುವ ರೀತಿ ಇದ್ದರೆ ಖಂಡಿತ ಹೇಳಿಕೆ ವಾಪಸ್ ಪಡೆಯಲೇಬೇಕಾಗುತ್ತದೆ ಎಂದರು.

ಈ ವಿವಾದಾತ್ಮ ಹೇಳಿಕೆ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇವೆ ಎಂದು ಜಾರಕಿಹೊಳಿ ತೀಕ್ಷ್ಣವಾಗಿ ತಿಳಿಸಿದ ಅವರು, ಪ್ರತ್ಯೇಕ ರಾಜ್ಯಕ್ಕೆ ನಮ್ಮ ಸಹಮತ ಇಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು ಎಂಬುದಕ್ಕೆ ನಮ್ಮ ಬೆಂಬಲ ಇದೆ ಎಂದರು. ಸಿದ್ದರಾಮಯ್ಯ ಬಜೆಟ್​ನಲ್ಲಿ ಉತ್ತರ ಕರ್ನಾಟಕಕ್ಕೆ ಅನುದಾನವನ್ನು ಕೊಟ್ಟಿದ್ದರು. ಕುಮಾರಸ್ವಾಮಿ ಹೆಚ್ಚುವರಿಯಾಗಿ ಬಜೆಟ್ ಮಂಡನೆ ಮಾಡಿದ್ದಾರೆ. ಹೀಗಾಗಿ ಅವರ ಬಜೆಟ್ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು.

About flashnewskannada

Check Also

ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ …

Leave a Reply

Your email address will not be published. Required fields are marked *