ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ ಶಂಕರ್ ಬಿದರಿ

ಬ್ಯೂರೋ ನ್ಯೂಸ್

ಉತ್ತರ ಕರ್ನಾಟಕ ಅಭಿವೃದ್ದಿಯಲ್ಲಿ ಹಿಂದೆ ಬೀಳಲು 13 ಜಿಲ್ಲೆಗಳ ಜನಪ್ರತಿನಿಧಿಗಳೇ ಕಾರಣ ಎಂದು ನಿವೃತ್ತ ಪೊಲೀಸ್ ನಿರೀಕ್ಷಕ ಶಂಕರ್ ಬಿದರಿ ಆರೋಪಿಸಿದರು.

ವಿಜಯಪುರದಲ್ಲಿ ಸಿದ್ದೇಶ್ವರ್ ಕಾಲೇಜು ಬಳಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಭಾಗ ಅಷ್ಟೋ ಇಷ್ಟೋ ಅಭಿವೃದ್ದಿದ್ದು, ಜನರ ಶ್ರಮಿದಿಂದ ಹೊರತು ಸರಕಾರದ ಯೋಜನಗಳಿಂದಲ್ಲ. ಉತ್ತರ ಕರ್ನಾಟಕ ಶಾಸಕರು, ಸಂಸದರು ಒದೆಡೆ ಸೇರಿ ಸಮಗ್ರ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.


ಸಿಎಂ ಹೆಚ್ಡಿಕೆಯನ್ನ ಟಾರ್ಗೆಟ್ ಮಾಡೋದು ಬಿಡಿ: ಸ್ವಾತಂತ್ಯ ದೊರೆತಾಗಿಂದಲೂ ಉತ್ತರ ಕರ್ನಾಟಕವನ್ನು ನಮ್ಮನ್ನಾಳುವ ಸರಕಾರಗಳು ಕಡೆಗಣಿಸುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಈಗ ಎರಡು ತಿಂಗಳಾಗಿದೆ. ಉತ್ತರ ಕರ್ನಾಟಕ ಅಭಿವೃದ್ದಿ ವಿಷಯದಲ್ಲಿ ಅವರನ್ನು ಟಾರ್ಗೆಟ್ ಮಾಡೋದನ್ನ ನಿಲ್ಲಿಸಿ. ಈ ಭಾಗದ ಶಾಸಕರು, ಸಂದರು ಸೇರಿ ಸಮಸ್ಯೆಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಸುಮ್ಮನೆ ಕುಮಾರಸ್ವಾಮಿ ಅವರನ್ನು ಈ ವಿಷಯದಲ್ಲಿ ಸಿಲುಕಿಸಬೇಡಿ ಎಂದರು.


ಉತ್ತರ ಕರ್ನಾಟಕಕ್ಕೆ ಈವರೆಗೂ ಯಾವುದೇ ಪ್ರಮುಖ ಪ್ರಾತಿನಿಧ್ಯತೆ ಸಿಕ್ಕಿಲ್ಲ. ಎಲ್ಲಾ ಪಕ್ಷಗಳ ರಾಜ್ಯಾಧ್ಯಕ್ಷರೂ ಸೇರಿದಂತೆ ಎಲ್ಲ ಪ್ರಮುಖ ಹುದ್ದೆಗಳೂ ದಕ್ಷಿಣ ಕರ್ನಾಟಕದವರ ಪಾಲಾಗಿವೆ. ಕರ್ನಾಟದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಅವರು ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.

About flashnewskannada

Check Also

ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ …

Leave a Reply

Your email address will not be published. Required fields are marked *