ಶಾಂತಿಸಾಗರ ಒತ್ತುವರಿ ತೆರವು; ಆ.27ಕ್ಕೆ ಸಿರಿಗೆರೆಯಲ್ಲಿ ಸಭೆ

ದಾವಣಗೆರೆ; ಚನ್ನಗಿರಿ ತಾಲ್ಲೂಕಿನಲ್ಲಿರುವ ಶಾಂತಿಸಾಗರ ಒತ್ತುವರಿ ತೆರವು ಮತ್ತು ಹೂಳುತೆಗೆಸುವ ಕುರಿತು ಆ.27 ರಂದು ಸಿರಿಗೆರೆ ತರಳಬಾಳು ನ್ಯಾಯಪೀಠದಲ್ಲಿ 3 ನೇ ಸಭೆ ನಡೆಯಲಿದೆ ಎಂದು ಖಡ್ಗ ಸ್ವಯಂ ಸೇವಕರ ಸಂಘದ ಅಧ್ಯಕ್ಷ ಬಿ.ಆರ್ ರಘು ತಿಳಿಸಿದ್ದಾರೆ.
ಖಡ್ಗ ಸಂಘವು ಸರ್ಕಾರದ ಯಾವುದೇ ಅನುದಾನದ ಸಹಾಯವಿಲ್ಲದೇ ಹೂಳನ್ನು ತೆಗೆಯುವ ಡೀಟೈಲ್ ಪೆÇ್ರೀಜೆಕ್ಟ ರಿಪೆÇೀರ್ಟ್ (ಆPಖ) ಸಿದ್ದಪಡಿಸಿದ್ದು ಸದ್ಯದಲ್ಲೇ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸರ್ವೇ ಕಾರ್ಯ ನಡೆಸಿ ಕೆರೆಯ ಸರಹದ್ದನ್ನು ಗುರುತಿಸಿ ದೊಡú ಟ್ರಂಚ್ ಹೊಡೆಸಲು ಮಾತ್ರ ಸರ್ಕಾರದ ಅನುದಾನದ ಅವಶ್ಯಕತೆ ಇರುತ್ತದೆ.


ಡಾ. ಶ್ರೀ. ಗುರುಬಸವ ಮಹಾಸ್ವಾಮಿಜಿಗಳು ವಿರಕ್ತ ಮಠ ಪಾಂಡುಮಟ್ಟಿ ಇವರ ನೇತ್ರತ್ವದಲ್ಲಿ ಖಡ್ಗ ಸಂಘವು ದಾವಣಗೆರೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, ಪುರಸಭೆಯ ಚುನಾವಣೆಯ ನಂತರ ಶೀಘ್ರದಲ್ಲೇ ದಾವಣಗೆರೆ ಜಿಲ್ಲಾಧಿಕಾರಿಗಳು ಸೂಳೆಕೆರೆಗೆ ಭೇಟಿನೀಡಲಿದ್ದಾರೆ ಹಾಗೂ ಕಾನೂನಾತ್ಮಕವಾಗಿ ಶಾಂತಿಸಾಗರದ ಸರ್ವೇಕಾರ್ಯವನ್ನು ನಡೆಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಹಾಗೂ ಜಿಲ್ಲಾಧಿಕಾರಿಗಳು ಸರ್ವೇ ಕಾರ್ಯ ನಡೆಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಚನ್ನಗಿರಿ ತಹಶಿಲ್ದಾರರಿಗೆ ಸೂಚಿಸಿದ್ದು, ತಹಶಿಲ್ದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಭೂಕಂದಾಯ ಇಲಾಖೆ ಮತ್ತು ನೀರಾವರಿ ಇಲಾಖೆಗೆ ಆದೆಶಿಸಿದ್ದಾರೆ. ನೀರಾವರಿ ಇಲಾಖೆಯು ಖಾಸಗೀ ಸಂಸ್ಥೆಯ ಮೂಲಕ ಸರ್ವೆಕಾರ್ಯ ನಡೆಸಲು 50 ಲಕ್ಷ ರೂಗಳ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದೆ. ಅನುದಾನ ದೊರೆತ ಕೂಡಲೆ ಸರ್ವೇಕಾರ್ಯವನ್ನು ನಡೆಸುವುದಾಗಿ ನಿರಾವರಿ ಇಲಾಖೆ ಪತ್ರದ ಮೂಲಕ ಖಡ್ಗ ಸಂಘಕ್ಕೆ ತಿಳಿಸಿರುತ್ತದೆ. ಶಾಂತಿಸಾಗರ ಉಳಿಸಲು ಹಲವಾರು ಚಿತ್ರ ನಟರು, ನಿವ್ರುತ ನ್ಯಾಯಾಧೀಶರು, ಹಲವು ಗಣ್ಯರು ಶಾಂತಿಸಾಗರ ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.


ಖಡ್ಗ ಸಂಘವು ಶಾಂತಿಸಾಗರ ಉಳಿಸಿ ಅಂಗವಾಗಿ ಸುಮಾರು 110 ಹಳ್ಳಿಗಳಲ್ಲಿ ಜಾಥಾ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಂದ ರ್ಯಾಲಿಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಸಿರಿಗೆರೆ ಬೃಹನ್ಮಠದ ಡಾ. ಶ್ರೀ. ಶಿವಮೂರ್ತಿ ಶಿವಾಚಾರ್ಯರ ಸೂಚನೆಯಂತೆ ನೀರಾವರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಖಡ್ಗ ಸಂಘದ ಪರವಾಗಿ ಅವರು ವಿನಂತಿಸಿದ್ದಾರೆ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *