ದೇವೇಗೌಡ್ರು ಮತ್ತೆ ಪ್ರಧಾನಿ ಆಗೋದಿಲ್ಲ, ಶಾಸಕ ಶ್ರೀರಾಮುಲು ಭವಿಷ್ಯ

ಬ್ಯೂರೋ ನ್ಯೂಸ್,  ಫ್ಲಾಶ್ ನ್ಯೂಸ್ ಕನ್ನಡ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಪ್ರಧಾನಿ ಆಗೋದಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಿದ್ರೂ ಗೌಡ್ರು ಮತ್ತೆ ಪ್ರಧಾನಿ ಆಗೋದು ಅಸಾಧ್ಯದ ಮಾತು ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಭವಿಷ್ಯ ನುಡಿದ್ದಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2019 ರಲ್ಲಿ ಪುನಃ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿ ಆಗ್ತಾರೆ. ಇದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆ ಬಿಜೆಪಿ ಖಂಡಿಸುತ್ತದೆ. ಉತ್ತರ ಕರ್ನಾಟಕ, ಕರಾವಳಿ, ಹಳೇ ಮೈಸೂರು ಭಾಗಕ್ಕೆ ಕೊಡುಗೆ ಶೂನ್ಯ. ಅಣ್ತಮ್ಮಂದಿರ ಬಜೆಟ್ ನಲ್ಲಿ ಹಾಸನ, ರಾಮನಗರ ಜಿಲ್ಲೆಗಳನ್ನ ಬಿಟ್ಟು ಉಳಿದ ಜಿಲ್ಲೆಗಳನ್ನ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಕಡಿಮೆ ಸ್ಥಾನ ಗೆದ್ದಿರುವ ಜೆಡಿಎಸ್ ರಾಜ್ಯದ ಚುಕ್ಕಾಣಿ ಹಿಡಿದೆ. ಹೆಚ್ಚಿನ ಸ್ಥಾನ ಗೆದ್ದ ನಾವು ವಿರೋಧ ಪಕ್ಷದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತೆ. ಪುನಃ ಬಿಜೆಪಿ ಅಧಿಕಾರಕ್ಕೆ ಬರತ್ತೆ ಅಂತ ಭವಿಷ್ಯ ನುಡಿದರು.

About flashnewskannada

Check Also

ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟ

ದಾವಣಗೆರೆ; ಕೆಳಮಟ್ಟದಿಂದ ಪಕ್ಷವನ್ನು ಕಟ್ಟಿದಂತ ಮಹಾನ್ ವ್ಯಕ್ತಿ ಸಿ.ಕೆ.ಜಾಫರ್ ಶರೀಫ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಪಾಲಿಕೆ ಸದಸ್ಯ ದಿನೇಶ್ …

Leave a Reply

Your email address will not be published. Required fields are marked *