ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು ಲುಂಬಿನಿ ಇನ್ಸ್ ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಿಂದ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ, ವಿದ್ಯಾರ್ಥಿ ಪರಿಷದ್ ಉದ್ಘಾಟನೆ ಹಾಗೂ 6ನೇ ವರ್ಷದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,

ಸಂಸ್ಥೆಗೆ ಉತ್ತಮವಾದ ಹೆಸರಿದೆ. ನೂತನ ಕೋರ್ಸ್ ಗಳನ್ನು ಆರಂಭಿಸಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ರೋಗಿಗಳೊಂದಿಗೆ ಕನ್ನಡದಲ್ಲಿ ಮಾತನಾಡಿ ಅವರ ಸಮಸ್ಯೆಗಳನ್ನು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.ವಿರಕ್ತಮಠದ ಬಸವಪ್ರಭುಶ್ರೀ ಮಾತನಾಡಿ ಕನ್ನಡ ಜೇನಿಗಿಂತ ಸಿಹಿಯಾದ ಭಾಷೆ. ಆದರೆ ಆಂಗ್ಲ ಭಾಷೆಯ ಬಳಕೆ ಹೆಚ್ಚಾದರಿಂದ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಅವಶ್ಯಕತೆಗೆ ತಕ್ಕಂತೆ ಅನ್ಯಭಾಷೆ ಬಳಕೆ ಮಾಡಬೇಕು.

ಕನ್ನಡದ ಭಾಷಾಭಿಮಾನ ಮುಖ್ಯ. ಜೀವನಕ್ಕೆ ಉಸಿರು ಎಷ್ಟು ಮುಖ್ಯವೋ, ಅಷ್ಟೇ ನಮ್ಮ ಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಮನೆಯಲ್ಲಿ ಮಕ್ಕಳೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡದೆ ಕನ್ನಡ ಕಲಿಸಬೇಕು. ಇಂದು ಪ್ರತಿಯೊಬ್ಬರು ಮೊಬೈಲ್ ಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಬದುಕು ಕಟ್ಟಿಕೊಳ್ಳಬಹುದು. ಹಾಗೆ ನಾಶವು ಮಾಡಿಕೊಳ್ಳಬಹುದು. ಆದ್ದರಿಂದ ಮೊಬೈಲ್ ನ ದುರ್ಬಳಕೆ ಮಾಡದೆ. ಒಳ್ಳೆಯ ಜ್ಞಾನ, ಮೌಲ್ಯ ಪಡೆದುಕೊಳ್ಳಬೇಕು. ಉತ್ತಮವ್ಯಕ್ತಿತ್ವ ಶಿಸ್ತಿನ ಜೀವನಕ್ಕೆ ಕಾರಣ. ಜ್ಞಾನವಂತರಾಗಿ ಭವಿಷ್ಯದ ಹಾದಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ವೀರಪ್ಪ ಎಂ ಬಾವಿ, ಜಿ.ವೀರಭದ್ರಪ್ಪ, ಕೆ.ಜಿ.ಯಲ್ಲಪ್ಪ, ನಾಗೇಂದ್ರ ಬಂಡೀಕರ್, ಜೆ.ಎನ್.ನಿಂಗಪ್ಪ, ಪ್ರಶಾಂತ್ ಮತ್ತಿತರರಿದ್ದರು.

About flashnewskannada

Check Also

ಕಡತಕ್ಕೆ ಸೀಮಿತವಾದ ಮಹಿಳಾ ಮೀಸಲಾತಿ

ದಾವಣಗೆರೆ;ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆ ಜಾರಿ ವಿಳಂಬವಾಗಿರುವುದು ದುರಂತದ ವಿಷಯ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸ್ವಾತಿ …

Leave a Reply

Your email address will not be published. Required fields are marked *